195 ರಾಷ್ಟ್ರಗಳ ರೇಖಾಚಿತ್ರ ಬಿಡಿಸಿ ಗುರುತಿಸುವ ವಿದ್ಯಾರ್ಥಿ
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ನಾಲ್ಕನೇ ತರಗತಿ ಹುಡುಗ ಪರೀಕ್ಷಿತ್
Team Udayavani, Sep 11, 2024, 6:06 PM IST
ಪುತ್ತೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಭಾರತದ ಭೂಪಟ ಬಿಡಿಸುವ ಪ್ರಶ್ನೆ ಬರುವುದು ಸಾಮಾನ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಭಾರತದ ಭೂಪಟವನ್ನು ಪುಸ್ತಕದ ಹಾಳೆಗಳಲ್ಲಿ ಚಿತ್ರಿಸುತ್ತಾ, ರಬ್ಬರಿಂದ ಒರೆಸುತ್ತಾ, ಪುನಃ ಪುನಃ ಪ್ರಯತ್ನಗೈಯುತ್ತಾ ಅಭ್ಯಾಸ ಮಾಡುವುದಿದೆ.
ಇಲ್ಲೊಬ್ಬ ವಿದ್ಯಾರ್ಥಿ ಇದ್ದಾನೆ. ಈತ ಭಾರತದೊಂದಿಗೆ ಸ್ಥಳೀಯ ರಾಷ್ಟ್ರಗಳನ್ನೂ ಚಿತ್ರಿಸುತ್ತಾನೆ. ನೀವಿನ್ನೂ ನೋಡುತ್ತಲೇ ಇದ್ದರೆ ಮತ್ತೂ ಚಿತ್ರಿಸುತ್ತಾ ಸಾಗುತ್ತಾನೆ. ಅಂತಿಮವಾಗಿ ಇಡಿಯ ಪ್ರಪಂಚವನ್ನೇ ನಿಮ್ಮ ಕಣ್ಣ ಮುಂದೆ ಅರಳಿಸಿಬಿಡುತ್ತಾನೆ !
ಹೌದು… ಪ್ರಪಂಚದ ನೂರ ತೊಂಬತ್ತೆ$çದು ದೇಶಗಳನ್ನೂ ಈ ವಿದ್ಯಾರ್ಥಿ ಆಯಾ ಜಾಗದಲ್ಲೇ ಚಿತ್ರಿಸಿ ತೋರಿಸುತ್ತಾನೆ. ಜತೆಗೆ ಭಾರತದ ಭೂಪಟದೊಂದಿಗೆ ಆಯಾ ರಾಜ್ಯಗಳನ್ನೂ ಗುರುತಿಸಿ ಚಿತ್ರಿಸುತ್ತಾನೆ. ಒಮ್ಮೆ ಚಿತ್ರಿಸಲು ಆರಂಭಿಸಿದರೆ ತಿದ್ದದೇ ಕೊನೆಯವರೆಗೂ ಮುಂದುವರಿಯುತ್ತಾನೆಂಬುದು ಸೋಜಿಗ ತರುವ ವಿಚಾರ.
ಪುತ್ತೂರಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ನಾಲ್ಕನೆಯ ತರಗತಿ ಪರೀಕ್ಷಿತ್ ಎಂಬ ವಿದ್ಯಾರ್ಥಿಯ ಕೈ ಚಳಕ, ಜಾಣ್ಮೆ, ಜ್ಞಾನ ಹಾಗೂ ನೆನಪಿನಶಕ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ತಾನು ಚಿತ್ರಿಸಿದ ನೂರತೊಂಬತ್ತೊಂದು ರಾಷ್ಟ್ರಗಳನ್ನೂ ಹೆಸರು ಸಹಿತ ಗುರುತಿಸುತ್ತಾನೆಂಬುದು ಅಚ್ಚರಿಯೇ ಸರಿ.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ವೃದ್ಧಿಗಾಗಿ ಹಲವು ಸ್ಮಾರ್ಟ್‌ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಈ ಬೋರ್ಡ್ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರಬಿಂದುವೆನಿಸಿದೆ. ಅನೇಕ ಹೊಸ ಹೊಸ ಪ್ರಯೋಗಗಳಿಗೆ ಈ ಬೋರ್ಡ್ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ.
ಹಲವು ಬಗೆಯ ಸಾಧ್ಯತೆಗಳನ್ನು ಈ ಬೋರ್ಡ್ ಸಾಕಾರಗೊಳಿಸುತ್ತಿರುತ್ತದೆ. ಹಾಗಾಗಿ ಅನೇಕ ವಿದ್ಯಾರ್ಥಿಗಳೂ ಈ ಬೋರ್ಡ್ ಮುಖಾಂತರ ಹೊಸ ಹೊಸ ಆಲೋಚನೆಗಳನ್ನು ಮೊಗೆಯುತ್ತಿದ್ದಾರೆ. ಇದೀಗ ಪರೀಕ್ಷಿತನಿಗೆ ಈ ಬೋರ್ಡ್ ಮೂಲಕ ಪ್ರಪಂಚವನ್ನೇಕೆ ಚಿತ್ರಿಸಬಾರದು ಎಂಬ ಪ್ರಶ್ನೆ ಬಂದಿದೆ. ಹಾಗಾಗಿ ಪ್ರಯತ್ನಪಡುತ್ತಾ ಸಾಗಿ ಇದೀಗ ಆ ಬೋರ್ಡ್‌ನಲ್ಲಿ ಜಗತ್ತನ್ನೇ ಕೆತ್ತುತ್ತಿದ್ದಾನೆ.
ಸೃಜನಶೀಲತೆ ವೃದ್ಧಿಗೆ ಸಹಕಾರಿಯಾಗಿದೆ
ಮಕ್ಕಳಲ್ಲಿ ಅಪಾರ ಪ್ರಮಾಣದ ಪ್ರತಿಭೆ, ಸಾಮರ್ಥ್ಯ ಅಡಗಿದೆ. ಅದನ್ನು ಹೊರತರುವ ಕಾರ್ಯ ಹೆತ್ತವರಿಂದ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಿದೆ. ನಮ್ಮ ಸಂಸ್ಥೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಿರುವುದು ಮಕ್ಕಳ ಸೃಜನಶೀಲತೆ ವೃದ್ಧಿಗೆ ಸಹಕಾರಿಯಾಗಿದೆ. ಕಲಿಕಾ ಸಾಮರ್ಥ್ಯದಲ್ಲಿ ಹೆಚ್ಚಳ ಕಾಣುತ್ತಿದೆ. ನಾವು ಒದಗಿಸಿಕೊಟ್ಟ ವ್ಯವಸ್ಥೆಯನ್ನು ಮಕ್ಕಳು ಬಳಸಿಕೊಂಡು ಸಾಧನೆ ಮೆರೆಯುವಾಗ ಸಾರ್ಥಕಭಾವ ಮೂಡುತ್ತದೆ.
-ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ.
ಅಪ್ಪ ನೀಡಿದ ಅಟ್ಲಾಸ್
ಹುಟ್ಟುಹಬ್ಬಕ್ಕೆ ಅಪ್ಪ ನೀಡಿದ ಅಟ್ಲಾಸ್ ನೋಡಿಕೊಂಡು ಪ್ರಪಂಚದ ಚಿತ್ರ ಬಿಡಿಸಲಾರಂಭಿಸಿದೆ. ಶಾಲೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು ನೀಡುವ ಪ್ರೋತ್ಸಾಹ ನನ್ನನ್ನು ಪ್ರೇರೇಪಿಸುತ್ತಿರುತ್ತದೆ. ಹೆತ್ತವರ ಮಾರ್ಗದರ್ಶನವೂ ಸಾಕಷ್ಟಿದೆ. ಶಾಲೆಯ ಸ್ಮಾರ್ಟ್ ಬೋರ್ಡ್ ನನ್ನ ಕಾರ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಪ್ರತಿಬಾರಿಯೂ ವಿಶ್ವ ಭೂಪಟ ಬಿಡಿಸುವಾಗ ಭಾರತದಿಂದಲೇ ಶುರುಮಾಡುತ್ತೇನೆ ಎನ್ನುತ್ತಾನೆ ಪರೀಕ್ಷಿತ್. ಸಮಾಜಶಾಸ್ತ್ರ ಶಿಕ್ಷಕ ಪುತ್ತೂರಿನ ಸುಧಾಕರ ಪಿ. ಹಾಗೂ ವಾಣಿ ಕೆ. ದಂಪತಿ ಪರೀಕ್ಷಿತನ ಹೆತ್ತವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.