ಮನೆ ನಿರ್ಮಾಣಕ್ಕೆ ಮುಂದಾದ ಯುವಕರ ತಂಡ
Team Udayavani, May 16, 2020, 5:45 AM IST
ಮುಂಡಾಜೆ: ಕೂಲಿ ಕಾರ್ಮಿಕರ ಕುಟುಂಬವೊಂದಕ್ಕೆ ಬೆಳ್ತಂಗಡಿ ತಾ|ನ ಚಾರ್ಮಾಡಿಯ ವಿಹಿಂಪ-ಬಜರಂಗ ದಳ ಘಟಕ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆಡೆ ಇದ್ದ ಯುವಕರು ಊರಿಗೆ ಬಂದು, ಊರಿನ ಯುವಕರ ಜತೆ ಸೇರಿ 25 ಜನರ ತಂಡ ಈ ಕಾರ್ಯಕ್ಕೆ ಮುಂದಾಗಿದೆ.
ಅರಣ್ಯ ಇಲಾಖೆ ಜಾಗದಲ್ಲಿ ಟೆಂಟ್ ಹಾಕಿ ಜೀವನ ಸಾಗಿಸುತ್ತಿದ್ದ ಚಾರ್ಮಾಡಿ ಗ್ರಾಮದ ಪಾಂಡಿಕಟ್ಟ ದಲ್ಲಿ ಪ್ರಸಾದ್ ಕುಟುಂಬಕ್ಕೆ 500 ಅಡಿ ವಿಸ್ತೀರ್ಣದ ಮನೆ ನಿರ್ಮಿಸಿ ಕೊಡಲು ಮುಂದಾದಯುವಕರು ಈಗಾಗಲೇ ಅಡಿ ಪಾಯದ ಕೆಲಸವನ್ನು ಪೂರ್ಣ ಗೊಳಿಸಿದ್ದಾರೆ.
ಶೀಘ್ರ ನಿರ್ಮಾಣದ ಕನಸು
ಸುಮಾರು 6 ಲ.ರೂ. ವೆಚ್ಚದ ಮನೆಯ ಕೂಲಿ ಕೆಲಸಕ್ಕೆ ಸಂಬಂಧ ಪಟ್ಟಂತೆ ಎಲ್ಲ ಕೆಲಸಗಳನ್ನು ಯುವ ಕರೇ ಸ್ವತಃ ಮಾಡಲಿದ್ದಾರೆ. ಆದರೆ ಗೋಡೆ ಕಟ್ಟುವುದು, ಸಿಮೆಂಟ್ ಹಾಕುವುದು, ಛಾವಣಿ ನಿರ್ಮಾಣ ಇತ್ಯಾದಿ ಕೆಲಸಗಳಿಗೆ ನುರಿತ ಕಾರ್ಮಿಕರ ಅಗತ್ಯವಿದೆ. ಇವರಿಗೆ ಸಂಬಳ ನೀಡಲು, ಮನೆ ನಿರ್ಮಾ ಣಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿಗೆ ಹಣದ ಅಡಚಣೆ ಇದೆ. ಆದರೆ ಛಲಬಿಡದ ಯುವಕರು ಹಲವಾರು ದಾನಿಗಳನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ತೆರಳಿ ಧನಸಹಾಯ ನೀಡಿದ್ದಾರೆ.
ಜೂನ್ ಅಂತ್ಯದೊಳಗೆ ನಿರ್ಮಾಣ
ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ ತಮ್ಮ ಉಳಿತಾಯದ ಹಣದಲ್ಲಿ ಮನೆ ಕಟ್ಟುವಷ್ಟು ಜಾಗ ಖರೀದಿಸಿತ್ತು. ಆದರೆ ಮನೆ ಕಟ್ಟಲು ಆರ್ಥಿಕ ಶಕ್ತಿ ಇರಲಿಲ್ಲ. ನಮ್ಮ ಯುವಕರ ತಂಡ ಜೂನ್ ಅಂತ್ಯದೊಳಗೆ ನಿರ್ಮಾಣ ಪೂರ್ಣಗೊಳಿಸುವ ಇರಾದೆ ಹೊಂದಿದ್ದು, ದಾನಿಗಳ ಸಹಕಾರ ಅಗತ್ಯವಿದೆ ಎಂದು ವಿಹಿಂಪ-ಬಜರಂಗ ದಳದ ಚಾರ್ಮಾಡಿ ಘಟಕದ ಅಧ್ಯಕ್ಷ ಜಗದೀಶ ಬೀಟಿಗೆ ತಿಳಿಸಿದ್ದಾರೆ.
ದಾಖಲೆ ಕೊರತೆ
ಸ್ಥಳೀಯ ಯುವಕರ ಕಾರ್ಯ ಪ್ರಶಂಸನೀಯ. ಪ್ರಸಾದ್ ಕುಟುಂಬದವರ ಬಳಿ ಕೆಲವು ದಾಖಲೆಗಳ ಕೊರತೆ ಇದೆ. ಅಗತ್ಯ ದಾಖಲೆಗಳನ್ನು ನೀಡಿದರೆ ಪಂ. ವತಿಯಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಬಹುದು.
-ಶೈಲಜಾ, ಅಧ್ಯಕ್ಷರು, ಗ್ರಾ.ಪಂ., ಚಾರ್ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.