ಉಪ್ಪಿನಂಗಡಿಯಲ್ಲಿ ಪತ್ತೆಯಾಗಿ ಮನೆ ಸೇರಿದ ಉ.ಕ.ದ ಯುವಕ
ಭಜನ ಮಂಡಳಿಯವರ ಸಮಯ ಪ್ರಜ್ಞೆ
Team Udayavani, Dec 7, 2019, 4:33 AM IST
ಉಪ್ಪಿನಂಗಡಿ: ಹನ್ನೆರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ನಾಪತ್ತೆಯಾಗಿದ್ದ ವಿಟ್ಟಲ ಕೊನೇರಿ (38) ಎಂಬವರನ್ನು ಇಲ್ಲಿನ ಶ್ರೀ ಕಾಳಿಕಾಂಬಾ ಭಜನ ಮಂಡಳಿಯ ಪದಾಧಿಕಾರಿಗಳು ಗುರುತಿಸಿ, ಯಶಸ್ವಿಯಾಗಿ ಮರಳಿ ಮನೆ ಸೇರಿಸಿದ್ದಾರೆ.
ಹೊನ್ನಾವರದ ದುರ್ಗಾಕೇರಿ ನಿವಾಸಿ ವಿಟ್ಟಲ ಕೋನೇರಿ ಹನ್ನೆರಡು ದಿನಗಳಿಂದ ನಾಪತ್ತೆಯಾಗಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯದಲ್ಲಿ ಶ್ರೀ ಕಾಳಿಕಾಂಬಾ ಭಜನ ಮಂಡಳಿಯ ಆಶ್ರಯದಲ್ಲಿ ನಗರ ಭಜನೆ ನಡೆಯುತ್ತಿದ್ದು, ಅನ್ನ ಪ್ರಸಾದ ವಿತರಣೆಯ ವೇಳೆ ಅಪರಿಚಿತ ಯುವಕ ದಿನಾಲೂ ಹಾಜರಾಗುತ್ತಿದ್ದ. ಭಜನ ಮಂಡಳಿಯ ಅಧ್ಯಕ್ಷ ಚಿದಾನಂದ ನಾಯಕ್, ಪೂರ್ವಾಧ್ಯಕ್ಷ ಕೆ. ಸುಧಾಕರ ಶೆಟ್ಟಿ, ಸದಸ್ಯರಾದ ಅಶೋಕ್ ಕುಮಾರ್ ರೈ ನೆಕ್ಕರೆ ಅಸ್ವಸ್ಥಗೊಂಡಂತಿದ್ದ ಆತನನ್ನು ಗಮನಿಸಿ ವಿಚಾರಿಸಿ ಕೆಲವು ಮಾಹಿತಿ ಕಲೆಹಾಕಿದ್ದರು. ಬಳಿಕ ಈತನ ವಿಳಾಸ ಪತ್ತೆಗೆ ಸಹಕರಿಸುವಂತೆ ತಮ್ಮ ಪರಿಚಿತರಿಗೆ ವಾಟ್ಸ್‌ಆ್ಯಪ್ ಮೂಲಕ ವಿನಂತಿಸಿದ್ದರು.
ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಸಂದೇಶವನ್ನು ಗಮನಿಸಿದ ಯುವಕನ ಸಂಬಂಧಿಕರು ಗುರುವಾರ ಉಪ್ಪಿನಂಗಡಿಗೆ ಬಂದು ಹುಡುಕಾಟ ನಡೆಸಿದರು. ಎಂದಿನಂತೆ ಸಂಜೆ ದೇವಾಲಯಕ್ಕೆ ಬಂದ ವಿಟ್ಟಲ ಕೊನೇರಿಯನ್ನು ಮಾತನಾಡಿಸಿ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಗತ್ಯ ಕ್ರಮಗಳನ್ನು ಪೂರೈಸಿ ಹೊನ್ನಾವರಕ್ಕೆ ಕರೆದೊಯ್ಯಲಾಯಿತು.
ಶರಾವತಿಗೆ ಬಿದ್ದಿರುವ ಶಂಕೆ, ಹುಡುಕಾಟ
ಹೊನ್ನಾವರದಲ್ಲಿ ವಿಟ್ಟಲ ಕೊನೇರಿ ಕುಟುಂಬ ಸ್ವಂತ ದೇಗುಲವನ್ನು ಹೊಂದಿದ್ದು, ಆತ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುತ್ತಿದ್ದ. ಶರಾವತಿ ನದಿಯ ದಂಡೆಯಲ್ಲಿ ಕುಳಿತಿರುವುದು ಆತನ ಹವ್ಯಾಸವಾಗಿತ್ತು. ನಾಪತ್ತೆಯಾದ ಬಳಿಕ ಆತ ನದಿಗೆ ಬಿದ್ದಿರಬಹುದೆಂದು ಶಂಕಿಸಿ ಹುಡುಕಾಟ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.