ಊರಿನ ಮಾರಿ ಕಳೆಯಲು ಬಂದ ಆಟಿಕಳಂಜ

ಸಾಂಕ್ರಾಮಿಕ ರೋಗಗಳ ನಿವಾರಣೆಗಾಗಿ ಜನಪದ ಆಚರಣೆ

Team Udayavani, Jul 28, 2019, 5:00 AM IST

q-16

ಆಲಂಕಾರು: ಧೋ ಎಂದು ಸುರಿಯುವ ಮಳೆ, ಆಗಾಗ ಮೈ ಸುಡುವ ಬಿಸಿಲು. ಇಂತಹ ಸಮಯದಲ್ಲಿ ಹೊರಗಡೆ ಗಗ್ಗರ. ತೆಂಬರೆ ಹಾಗೂ ಪಾಡ್ದನದ ಶಬ್ದ ಕೇಳುತ್ತದೆ. ಮನೆ ಬಾಗಿಲಿಗೆ ಆಟಿ ಕಳಂಜನ ಆಗಮನವಾಗಿದೆ!

ತುಳು ನಾಡಿನಲ್ಲಿ ಆಟಿ (ಆಷಾಢ) ತಿಂಗಳು ಬೇಸಾಯದ ಕೃಷಿ ಕಾಯಕಗಳೆಲ್ಲ ಮುಗಿದು, ಗ್ರಾಮೀಣ ಜನತೆ ವಿಶ್ರಾಂತಿ ಪಡೆಯುವ ಸಮಯ. ಈ ಅವಧಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಿತ್ತರಿಸಲು ಮನೆ ಮನೆಗೆ ಬರುತ್ತಾನೆ, ಆಟಿ ಕಳಂಜ.

ಯಾರಿದು ಆಟಿಕಳಂಜ?
ಅನಾದಿ ಕಾಲದಲ್ಲಿ ತುಳು ನಾಡಿನ ಜನರಿಗೆ ವಿಚಿತ್ರ ರೋಗವೊಂದು ಬಾಧಿಸಿ, ಎಲ್ಲರೂ ನರಳುತ್ತಿದ್ದರಂತೆ. ಆಗ ನಾಗಬ್ರಹ್ಮ ದೇವರು ನಾಡಿನ ರೋಗ (ಮಾರಿ) ಕಳೆಯಲು ಆಟಿಕಳಂಜನನ್ನು ಭೂಮಿಗೆ ಕಳುಹಿಸುತ್ತಾನೆ. ಭೂಮಿಗೆ ಬಂದ ಆಟಿಕಳಂಜ ಮನೆ ಮನೆಗೆ ತೆರಳಿ, ಮಾರಿಯನ್ನು ಓಡಿಸಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿ, ಜನರನ್ನು ಹರಸುತ್ತಾನೆ. ಕೃತಜ್ಞತೆಯ ಪ್ರತೀಕವಾಗಿ ಜನರು ನೀಡುವ ಭತ್ತ, ಅರಿಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸುಗಳನ್ನು ಪಡೆದು ಊರನ್ನು ಉದ್ಧರಿಸುತ್ತಾನೆ. ಆಟಿ ಕಳಂಜ ನಾಗಬ್ರಹ್ಮನ ಸೃಷ್ಟಿ. ಈಗಲೂ ಪ್ರತಿ ವರ್ಷ ಆಟಿ ತಿಂಗಳಲ್ಲಿ ಆಟಿ ಕಳಂಜ ಮನೆ ಮನೆಗೆ ಬಂದು, ಜನರು ನೀಡುವ ದವಸ- ಧಾನ್ಯಗಳನ್ನು ಸ್ವೀಕರಿಸುತ್ತಾನೆ.

ಆಟಿ ಕಳಂಜ ಸೇವೆಯನ್ನು ನಲಿಕೆ ಹಾಗೂ ಪಂಬತ್ತ ಜನಾಂಗದವರು ಮಾತ್ರ ಮಾಡುತ್ತಾರೆ. ಆಟಿ ತಿಂಗಳು ಭಾರೀ ಮಳೆ ಬರುವ ಸಮಯ. ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚು. ಆಧುನಿಕ ವೈದ್ಯ ಲೋಕಕ್ಕೂ ಸವಾಲಾಗಬಲ್ಲ ಕಾಯಿಲೆಗಳು ಹೊಸದಾಗಿ ವಕ್ಕರಿಸುತ್ತವೆ. ಹಿಂದಿನ ಕಾಲದಲ್ಲಂತೂ ಸಮರ್ಪಕ ಔಷಧ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳಿರಲಿಲ್ಲ. ದೇವರೇ ರೋಗ – ರುಜಿನಗಳಿಂದ ತಮ್ಮನ್ನು ಪಾರು ಮಾಡಬೇಕು ಎಂದು ಜನ ಪ್ರಾರ್ಥಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಟಿ ಕಳಂಜ ಮನೆಗೆ ಬಂದು ಹರಸಿದರೆ ರೋಗ ಬಾಧಿತನಿಗೆ ಒಂದಷ್ಟು ಧೈರ್ಯ, ಸಮಾಧಾನ. ಇದರಿಂದ ಆರೋಗ್ಯ ಸುಧಾರಿಸುತ್ತಿತ್ತು. ಇದು ಆಟಿ ಕಳಂಜನ ಪ್ರಭಾವ ಎಂದೇ ಜನ ಬಲವಾಗಿ ನಂಬಿದರು.

ಆಟಿಯ 16 ದಿನಗಳು
ಆಟಿ ಕಳಂಜ ತಿಂಗಳ ಮೂವತ್ತು ದಿನವೂ ಊರು ಸುತ್ತುವುದಿಲ್ಲ. ಆರಂಭದಿಂದ ಹದಿನಾರು ದಿನ ಮಾತ್ರ ಊರ ಮಾರಿ ಕಳೆಯಲು ನಾಡಿಗೆ ಇಳಿಯುತ್ತಾನೆ. ಕಾಲಿಗೆ ಹಾಳೆಯಿಂದ ಮಾಡಿದ ಕವಚದ ರಕ್ಷಣೆಯಲ್ಲಿ ಗಗ್ಗರವನ್ನು ಕಟ್ಟಿ, ತೆಂಗಿನ ಗರಿಯಿಂದ ನಿರ್ಮಿಸಿದ ಸಿರಿಯನ್ನು ಸೊಂಟಕ್ಕೆ ಬಿಗಿದು ಮುಖಕ್ಕೆ ವಿಶೇಷ ಬಣ್ಣ ಬಳಿದುಕೊಂಡು ಪಣೋಲಿ ಮರದ ಗರಿಯಿಂದ ನಿರ್ಮಿಸಿದ ಕೊಡೆಯನ್ನು ಹಿಡಿದುಕೊಂಡು ‘ಕಳೆಂಜ ಕಳೆಂಜೆನಾ ಆಟಿದ ಕಳೆಂಜೆನಾ ಊರುದ ಮಾರಿ ಕಳೆಯರೆಂದ್‌ ಆಟಿದ ಕಳೆಂಜೆ ಬತ್ತೇನಾ’ ಎಂಬ ಹಾಡನ್ನು ಹೇಳಿಕೊಂಡು ಸಹಾಯಕ ಬಡಿಯುವ ತೆಂಬರೆಯ ತಾಳಕ್ಕೆ ಹೆಚ್ಚೆ ಹಾಕುತ್ತ ಕಳಂಜ ಮನೆ ಬಾಗಿಲಿಗೆ ಬರುತ್ತಾನೆ. ಬಳಿಕ ಗದ್ದೆ, ತೋಟಗಳಿಗೆ ಹಾಗೂ ಕೃಷಿಗೂ ತಟ್ಟಿದ ಮಾರಿಯನ್ನು ಕಳೆಯುತ್ತಾನೆ. ಹೀಗೆ ಹದಿನಾರು ದಿನ ಮಾತ್ರ ತಿರುಗಾಟ ನಡೆಸಿ ಕೊನೆಯ ದಿನ ತನ್ನೆಲ್ಲ ಪರಿಕರಗಳನ್ನು ಊರಿನ ಗಡಿಯಲ್ಲಿರುವ ಕಾಸರಕನ ಮರಕ್ಕೆ ಕಟ್ಟಿ, ‘ಊರಿಗೆ ಬಂದ ಮಾರಿ ಏಳು ಕಡಲಾಚೆಗೆ ಬೀಳಲಿ’ ಎಂದು ಪ್ರಾರ್ಥನೆ ಸಲ್ಲಿಸಿ ತಿರುಗಾಟ ಕೊನೆಗೊಳಿಸುತ್ತಾನೆ.

ಸದಾನಂದ ಆಲಂಕಾರು

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.