ಕೆಂಪುಕಲ್ಲು ಲಾರಿಗಳ ಸಂಚಾರ ನಿಷೇಧಿಸಿ ಫಲಕ ಅಳವಡಿಕೆ
Team Udayavani, Jun 20, 2018, 2:37 PM IST
ನಿಡ್ಪಳ್ಳಿ : ನಿಡ್ಪಳ್ಳಿ ದೈವಸ್ಥಾನ ಹಾಗೂ ಶಾಂತದುರ್ಗಾ ದೇವಸ್ಥಾನದ ರಸ್ತೆಯಲ್ಲಿ ಕೆಂಪುಕಲ್ಲು ಹೊತ್ತ ಲಾರಿಗಳು ಮಳೆಗಾಲದಲ್ಲಿ ಸಂಚರಿಸುವುದನ್ನು ನಿಷೇಧಿಸಿ ರಸ್ತೆ ಬದಿಯಲ್ಲಿ ಫಲಕ ಅಳವಡಿಸಿರುವ ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಲಾರಿ ಮಾಲಕರಲ್ಲೂ ಅರಿವು, ಜಾಗೃತಿ ಮೂಡಿಸಿದ್ದಾರೆ.
ನಿಡ್ಪಳ್ಳಿ ಪರಿಸರದಲ್ಲಿ ಕೆಂಪು ಕಲ್ಲು ಕೊರೆಗಳು ವರ್ಷವಿಡೀ ಕಾರ್ಯಾಚರಿಸುತ್ತಿದ್ದು, ಅಧಿಕ ಭಾರ ಹೊತ್ತ ಲಾರಿಗಳು ಚಲಿಸಿದರೆ ಮಳೆಗಾಲದಲ್ಲಿ ಡಾಮರು ಎದ್ದು ಹೋಗುತ್ತದೆ. ಕಚ್ಚಾ ರಸ್ತೆಗಳು ಹೊಂಡ, ಗುಂಡಿಗಳಿಂದ ಕೆಸರುಮಯವಾಗಿ ಜನರು ಸಂಕಷ್ಟ ಪಡಬೇಕಾಗಿದೆ. ಶಾಲೆ, ಕಾಲೇಜುಗಳ ಮಕ್ಕಳಿಗೂ ಸಮಸ್ಯೆಯಾಗುತ್ತದೆ. ಆದುದರಿಂದ ಮಳೆಗಾಲದಲ್ಲಾದರೂ ಈ ಲಾರಿಗಳು ಸಂಚಾರ ನಿಲ್ಲಿಸಿದರೆ ರಸ್ತೆ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿ ರಸ್ತೆ ಬದಿ ಬೋರ್ಡು ಅಳವಡಿಸಲಾಗಿದೆ. ಇದಕ್ಕೆ ಲಾರಿಯವರು ಸಹಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಬೇಕಾದೀತು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.