ಆಲಡ್ಕ : ಮೂರು ಜೋಡಿಗಳ ಸರಳ ಸಾಮೂಹಿಕ ವಿವಾಹ
Team Udayavani, May 6, 2018, 3:28 PM IST
ಬಂಟ್ವಾಳ: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ 3 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 3ರಂದು ಗೂಡಿನಬಳಿ ಸಮುದಾಯ ಭವನದ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಕಾಹ್ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ ಉದ್ಘಾಟಿಸಿದರು. ಆಲಡ್ಕ ಶಾಖಾಧ್ಯಕ್ಷ ಅಬೂಬಕ್ಕರ್ ಎನ್.ಬಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗೂಡಿನಬಳಿ ಮಸ್ಜಿದ್ -ಎ-ಮುತ್ತಲಿಬ್ ಅಧ್ಯಕ್ಷ ಜಿ. ಮುಹಮ್ಮದ್, ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಗುರುವಾಯನಕೆರೆ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಉದ್ಯಮಿ ಸಿ.ಪಿ. ಆದಂ ತವಕ್ಕಲ್, ಖಾದರ್ ಮಾಸ್ಟರ್ ಬಂಟ್ವಾಳ ಭಾಗವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಪ್ರಮುಖರಾದ ಪಿ.ಬಿ. ಹಾಮದ್, ಮುಹಮ್ಮದ್ ಹನೀಫ್ ಹಾಸ್ಕೊ, ಎನ್. ಬಶೀರ್ ನಂದಾವರ, ಎಂ. ಬಶೀರ್ ಆಲಡ್ಕ, ಅಬ್ದುಲ್ ಅಝೀಝ್ ಪಿ.ಐ., ಅಬ್ದುಲ್ ಮಜೀದ್ ಬೋಳಂಗಡಿ, ಮುಹಮ್ಮದ್ ಶಫೀಕ್, ಅಬ್ದುಲ್ ಮುತ್ತಲಿಬ್, ಇಸಾಕ್ ಫೇಶನ್‌ವೇರ್, ಅಶ್ರಫ್ ಕೆಇಬಿ, ಮುಹಮ್ಮದ್ ವೈ.ಕೆ., ರಫೀಕ್ ಇನೋಳಿ, ಸಿ.ಪಿ. ಶಾಕೀರ್, ಅಬ್ದುಲ್ ಜಬ್ವಾರ್ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಪೈಂಟರ್, ಮುಹಮ್ಮದ್ ಹನೀಫ್ ಬೋಗೋಡಿ, ಸಲಾಂ, ಸುಲೈಮಾನ್ ಗುಡ್ಡೆಅಂಗಡಿ, ಇಲ್ಯಾಸ್ ಬೋಗೋಡಿ, ಮುಹಮ್ಮದ್ ಬಂಗ್ಲೆಗುಡ್ಡೆ, ನೌಶಾದ್ ಯು. ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಸ್ವಾಗತಿಸಿ, ಮಂಗಳೂರು ವಲಯಾಧ್ಯಕ್ಷ ರಿಯಾಝ್ ರಹ್ಮಾನಿ ಪ್ರಸ್ತಾವಿಸಿದರು. ಆಲಡ್ಕ ಶಾಖಾ ಸದಸ್ಯ ಖಲೀಲ್ ದಾರಿಮಿ ಕಿರಾಅತ್ ಪಠಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.