ಹಸಿ ಕೊಕ್ಕೊಗೆ ಸಾರ್ವಕಾಲಿಕ ದಾಖಲೆ ದರ: ಕೆ.ಜಿ.ಗೆ 200 ರೂ.

ಚಿನ್ನದ ದರ ಎಂದು ಸಂಭ್ರಮದಲ್ಲಿ ಬೆಳೆಗಾರರು

Team Udayavani, Mar 26, 2024, 7:25 AM IST

ಹಸಿ ಕೊಕ್ಕೊಗೆ ಸಾರ್ವಕಾಲಿಕ ದಾಖಲೆ ದರ: ಕೆ.ಜಿ.ಗೆ 200 ರೂ.

ಸುಳ್ಯ/ಪುತ್ತೂರು: ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಪ್ರತೀ ಕೆ.ಜಿ.ಗೆ 200 ರೂ. ದಾಟಿದೆ. ಇದು ಇದು ವರೆಗಿನ ಸಾರ್ವಕಾಲಿಕ ದಾಖಲೆ ದರ. ಈ ಹಿಂದೆ ಪ್ರತೀ ಕೆ.ಜಿ.ಗೆ 125 ರೂ.ಗಳಿಗಿಂತ ಹೆಚ್ಚಾದುದಿಲ್ಲ.

ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಜಿಗಿದಿದ್ದು, ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿದೆ. ಹಸಿ ಕೊಕ್ಕೋ ಧಾರಣೆ ಕೆ.ಜಿ.ಗೆ ತೀರಾ ಕುಸಿತ ಕಂಡು ಹೆಚ್ಚೆಂದರೆ 75 ರೂ. ವರೆಗೆ ಇತ್ತು. ಹಿಂದೆ ಧಾರಣೆ ಕೆ.ಜಿ.ಗೆ 30 ರೂ. ವರೆಗೆ ಕುಸಿದು ಕೃಷಿಕರ ಆದಾಯ ಕಸಿದಿತ್ತು. ರೈತರು ಕೊಕ್ಕೋ ಬೆಳೆಯ ನಿರ್ವಹಣೆಗೆ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಉತ್ತಮ ಧಾರಣೆ ಇರುತ್ತಿರಲಿಲ್ಲ. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 25ರಂದು ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಪಂಜ ಮಾರುಕಟ್ಟೆಯಲ್ಲಿ 210 ರೂ.ಗೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ.

ವಿದೇಶಗಳಲ್ಲಿ ಕೊಕ್ಕೊ ಉತ್ಪಾದನೆ ಮತ್ತು ದಾಸ್ತಾನು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರು ವುದು, ದೇಶೀಯವಾಗಿ ಕೊಕ್ಕೊ ಉತ್ಪಾದನೆಯಲ್ಲಿ ಕುಸಿತ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಕೊಕ್ಕೊ ಕೊರತೆ ಕಂಡುಬಂದಿದ್ದು, ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಕೊಕ್ಕೊ ಪೂರೈಕೆ ಇಲ್ಲದಿರುವುದರಿಂದ ಧಾರಣೆ ಹೆಚ್ಚಳದ ಅಸ್ತ್ರ ಪ್ರಯೋಗಿಸಲಾಗಿದೆ.

ಚಾಕಲೇಟ್‌, ಪೇಯ ತಯಾರಿಗೆ ಬಳಕೆ:
ಕೊಕ್ಕೋ ಆಧಾರಿತ ಚಾಕಲೇಟ್‌ಗಳು, ಪೇಯಗಳ ತಯಾರಿಕೆಗೆ ಕೊಕೊ ಬಳಕೆಯಾಗುತ್ತದೆ. ಹೀಗಾಗಿ ಕೊಕ್ಕೋಗೆದೇಶೀಯವಾಗಿ ಮತ್ತು ಅಂತಾ ರಾಷ್ಟ್ರೀಯವಾಗಿಯೂ ಎಂದೆಂದಿಗೂ ಕುಗ್ಗದ ಬೇಡಿಕೆ ಇರುತ್ತದೆ.

ಚಿನ್ನದ ಬೆಲೆ ಎಂದ ರೈತರು! ಕೊಕ್ಕೋಗೆ 100 ರೂ. ದಾಟಿದ ಸಂದರ್ಭದಲ್ಲೇ ಉತ್ತಮ ಧಾರಣೆ ಎಂದು ಸಂಭ್ರಮಿಸಿದ್ದ ಕೃಷಿಕರು ಈಗ 200 ರೂ. ದಾಟಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಎಂಬ ಸಂತಸದಲ್ಲಿದ್ದಾರೆ. ಆದರೆ ಪ್ರಸ್ತುತ ಹಸಿ ಕೊಕ್ಕೋ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಇರುವಲ್ಲಿಯೂ ಈಗಷ್ಟೇ ಬೆಳವಣಿಗೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆ ಬೆಳೆದು ಹಣ್ಣಾಗಲಿದ್ದು, ಆಗಲೂ ಇದೇ ರೀತಿಯ ಉತ್ತಮ ಧಾರಣೆ ಇದ್ದಲ್ಲಿ ಇನ್ನೂ ಉತ್ತಮ ಆದಾಯ ಸಿಗಲಿದೆ ಎಂಬ ಅಭಿಪ್ರಾಯ ಕೃಷಿಕರದು.

ಒಣ ಕೊಕ್ಕೊ ಧಾರಣೆಯಲ್ಲೂ ಏರಿಕೆ
ಮಾ. 6ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊಕೆ.ಜಿ.ಗೆ 150 ದಾಖಲಾಗಿತ್ತು. ಮಾ. 18 ರಂದು ಕೆ.ಜಿ.ಗೆ 170ರೂ., ಮಾ. 22ರಂದು ಹೊರ ಮಾರುಕಟ್ಟೆಯಲ್ಲಿ 190 ರೂ.ಗೆ ಖರೀದಿಸಲಾ ಗಿತ್ತು. ಅದಾದ ಎರಡೇದಿನದಲ್ಲಿ ಧಾರಣೆ 200 ಗಡಿ ದಾಟಿದೆ.

ಮಾ. 18ರಂದು 170 ರೂ. ಧಾರಣೆ ಇದ್ದ ಕ್ಯಾಂಪ್ಕೋದಲ್ಲಿ ಮಾ. 25ರಂದು 205 ರೂ.ಗೆ ಏರಿಕೆ ಕಂಡಿದೆ. ಹಸಿ ಕೊಕ್ಕೊ ಮಾತ್ರವಲ್ಲದೆ ಒಣ ಕೊಕ್ಕೊ ಧಾರಣೆಯಲ್ಲಿಯೂ ಹೆಚ್ಚಳ ಆಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 23ರಂದು ಒಣ ಕೊಕ್ಕೊಗೆ ಕೆ.ಜಿ. ಗೆ 500-575 ರೂ. ಇತ್ತು. ಮಾ. 25ರಂದು 575-650 ರೂ. ಆಗಿದೆ. ಅಂದರೆ ಕೆ.ಜಿ.ಗೆ 75 ರೂ.ನಷ್ಟು ಏರಿಕೆ ಕಂಡಿದೆ.

ಹೊಸ ಅಡಿಕೆ ಧಾರಣೆ ಹೆಚ್ಚಳ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಸಿಂಗಲ್‌ಚೋಲ್‌, ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದೆ. ಮಾ. 25ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 345-365 ರೂ. ದಾಖಲಾಗಿದೆ. ಹೊರ ಮಾರು ಕಟ್ಟೆ ಯಲ್ಲಿ 370 ರೂ. ತನಕವೂ ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಸಿಂಗಲ್‌ ಚೋಲ್‌ ಕೆ.ಜಿ.ಗೆ 420-435 ರೂ., ಡಬ್ಬಲ್‌ ಚೋಲ್‌ ಕೆ.ಜಿ.ಗೆ 435-445 ರೂ. ಇದ್ದು, ಧಾರಣೆ ಸ್ಥಿರವಾಗಿತ್ತು.

ಟಾಪ್ ನ್ಯೂಸ್

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

5-vitla

Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.