ಜಲಕ್ಷಾಮ ಹೋಗಲಾಡಿಸಿದ ರಾಮಕುಂಜದ ಅಮೈ ಕೆರೆ
ಪಾಳು ಬಿದ್ದ ಕೆರೆಯಲ್ಲೀಗ ಬಿರು ಬೇಸಗೆಯಲ್ಲೂ ನೀರು
Team Udayavani, May 30, 2019, 6:00 AM IST
ರಾಮಕುಂಜದ ಅಮೈ ಕೆರೆಯಲ್ಲಿ ಬಿರು ಬೇಸಗೆಯಲ್ಲಿಯೂ ನೀರು ಬತ್ತಿಲ್ಲ.
ಕಡಬ: ಪಾಳು ಬಿದ್ದು ನಿಷ್ಟ್ರಯೋಜಕವಾಗಿದ್ದ ರಾಮಕುಂಜದ ಅಮೈ ಕೆರೆ ಸರ್ವಋತು ಕೆರೆಯಾಗಿ ಅಭಿವೃದ್ಧಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಲೋಕಾರ್ಪಣೆಗೊಂಡು ಈಗಾಗಲೇ 2 ವರ್ಷಗಳು ಕಳೆದಿವೆ. ಒಂದು ಕಾಲದಲ್ಲಿ ಹೂಳು ತುಂಬಿ ಮೈದಾನದಂತಾಗಿದ್ದ ಅಮೈ ಕೆರೆಯಲ್ಲಿ ಈ ಬಿರು ಬಿಸಿಲಿನಲ್ಲಿಯೂ ನೀರು ಸಾಕಷ್ಟಿದೆ. ಮಾತ್ರವಲ್ಲದೇ ಪರಿಸರದ ಬಾವಿಗಳಲ್ಲಿಯೂ ಈ ಬಾರಿ ನೀರು ಬತ್ತಿಲ್ಲ. ಅಮೈ ಕೆರೆಯ ಅಭಿವೃದ್ಧಿಯ ಯಶೋಗಾಥೆ ನಾಡಿನ ಎಲ್ಲೆಡೆ ಪಾಳುಬಿದ್ದಿರುವ ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ.
55 ಲಕ್ಷ ರೂ. ವೆಚ್ಚದ ಕಾರ್ಯ
ಕೆರೆ ಅಭಿವೃದ್ಧಿಯ ಸಹಭಾಗಿತ್ವ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿೃದ್ಧಿ ವಿಭಾಗದ 5 ಲಕ್ಷ ರೂ. ಅನುದಾನ, ಶಾಸಕ ಎಸ್. ಅಂಗಾರ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ನೀಡಿದ 20 ಲಕ್ಷ ರೂ., ಉಳಿದಂತೆ ಉದ್ಯೋಗ ಖಾತ್ರಿ ಯೋಜನೆಯ 25 ಲಕ್ಷ ರೂ. ಹೀಗೆ ಒಟ್ಟು 55 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು.
ಊರಿಗೇ ನೀರುಣಿಸುತ್ತಿದ್ದ ಕೆರೆ
ಬೇಸಗೆ ಕಾಲ ಮಳೆಗಾಲ ಎನ್ನುವ ಬೇಧವಿಲ್ಲದೆ ಇಂದು ಕಾಲದಲ್ಲಿ ಸಮೃದ್ಧವಾಗಿ ನೀರಿನಿಂದ ತುಂಬಿದ್ದ ಅಮೈ ಕೆರೆ ಊರಿನ ಗೋವುಗಳಿಗೆ ಹಾಗೂ ಜನರಿಗೆ ನೀರುಣಿಸುವ ಮೂಲವಾಗಿತ್ತು. ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡು ಸರೋವರದಂತೆ ಕಂಡುಬರುತ್ತಿದ್ದ ಕರೆ ಕಾಲಕ್ರಮೇಣ ನಿರ್ಲಕ್ಷ ್ಯಕ್ಕೊಳಗಾಗಿ ಹೂಳು ತುಂಬಿ ಮೈದಾನದ ರೂಪಕ್ಕೆ ಬಂದಿತ್ತು. ಕಳೆದ ಕೆಲ ವರ್ಷಗಳಿಂದ ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಎನ್ನುವ ಪರಿಸ್ಥಿತಿ ಎದುರಾದಾಗ ಗ್ರಾ.ಪಂ.ನ ಕಣ್ಣಿಗೆ ಬಿದ್ದ ಅಮೈ ಕೆರೆ ಇಂದು ಪರಿಸರದ ಜನರ ನೀರಿನ ಬವಣೆಯನ್ನು ಹೋಗಲಾಡಿಸಿದ ಜಲಮೂಲವಾಗಿ ಪರಿವರ್ತನೆಯಾಗಿದೆ.
ಅಂತರ್ಜಲಮಟ್ಟ ಏರಿಕೆ
ಕೆರೆ ಅಭಿವೃದ್ಧಿಯಾಗಿರುವುದರಿಂದ ಪರಿಸರದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಕೆರೆಯ ಆಸುಪಾಸಿನಲ್ಲಿ ಗ್ರಾ.ಪಂ.ನ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ತೆರೆದ ಬಾವಿಗಳಲ್ಲಿ ಬೇಸಗೆಯಲ್ಲಿಯೂ ಭರಪೂರ ನೀರು ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಕೆರೆಯ ಅಭಿವೃದ್ಧಿಯಿಂದಾಗಿ ಇಲ್ಲಿನ 225ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ತೊಂದರೆ ದೂರವಾಗಿದೆ. ಕೃಷಿ ತೋಟಗಳ ಜಲಮೂಲಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿಂದೆ ಕೆರೆಯ ಆಸುಪಾಸಿನಲ್ಲಿ ಕೊರೆಸಲಾಗಿದ್ದ ಹಲವು ಕೊಳವೆಬಾವಿಗಳು ನೀರಿಲ್ಲದೆ ವಿಫಲವಾಗಿತ್ತು. ಕೆರೆ ಅಭಿವೃದ್ಧಿಯಾದ ಬಳಿಕ ಕೆರೆಯ ಬಳಿ ಕೊರೆಯಲಾದ ಕೊಳವೆಬಾವಿಯಲ್ಲಿ ಸಮೃದ್ಧವಾಗಿ ನೀರು ಲಭಿಸಿದ ಕಾರಣ ಈ ಬಾರಿ ಪರಿಸರದ ಜನರಿಗೆ ನೀರಿನ ಸಮಸ್ಯೆ ಕಾಡಲೇ ಇಲ್ಲ. ಕೆರೆ ಅಭಿವೃದ್ಧಿ ಮಾಡಿ ಭವಿಷ್ಯದಲ್ಲಿ ನೀರಿನ ಕೊರತೆ ನೀಗಿಸುವ ಕನಸು ಕಂಡ ಗ್ರಾ.ಪಂ.ನ ಯುವ ಅಧ್ಯಕ್ಷ ಪ್ರಶಾಂತ್ ಆರ್.ಕೆ., ಅಂದಿನ ಪಿಡಿಒ ರವಿಚಂದ್ರ ಹಾಗೂ ಗ್ರಾ.ಪಂ.ನ ಆಡಳಿತ ಮಂಡಳಿ ಹಾಕಿಕೊಂಡ ಯೋಜನೆ ಇಂದು ಫಲದಾಯಕವಾಗಿದೆ.
ಬವಣೆ ನೀಗಲು ಸಾಧ್ಯ
– ನವೀನ್ ಭಂಡಾರಿ ಎ.ಡಿ., ಉದ್ಯೋಗ ಖಾತರಿ ಯೋಜನೆ, ಪುತ್ತೂರು
ಇನ್ನೊಂದು ಕೆರೆಯೂ ಅಭಿವೃದ್ಧಿ
– ಪ್ರಶಾಂತ್ ಆರ್.ಕೆ. ಅಧ್ಯಕ್ಷರು, ರಾಮಕುಂಜ ಗ್ರಾ.ಪಂ.
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.