Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Team Udayavani, Nov 16, 2024, 8:12 PM IST
ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಬೊಳುಬೈಲುನಲ್ಲಿ ಮಹಿಳೆ ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಟಿಪ್ಪರ್ ಲಾರಿ ಮರು ದಿನ ಸಂಜೆ ನಂಬರ್ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಸುಳ್ಯ ಮೆಸ್ಕಾಂ ಕಚೇರಿ ಬಳಿ ಪತ್ತೆಯಾಗಿದ್ದು, ಸುಳ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ನ. 14ರಂದು ಗುರುವಾರ ತಡರಾತ್ರಿ ಮಂಗಳೂರು ಕಡೆಗೆ ಮಹಿಳೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಪುತ್ತೂರು ಕಡೆಯಿಂದ ಹಿಟಾಚಿ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಬೊಳುಬೈಲು ಬಳಿ ಢಿಕ್ಕಿ ಹೊಡೆದಿತ್ತು. ಈ ವೇಳೆ ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ. ಢಿಕ್ಕಿ ಸಂಭವಿಸಿದ ಕಾರು ಮಡಿಕೇರಿ ಕಾವೇರಿ ಆ್ಯಂಬುಲೆ®Õ… ಮಾಲಕರಿಗೆ ಸೇರಿದ್ದಾಗಿತ್ತು. ನ. 15ರಂದು ಸಂಜೆ ಸುಳ್ಯ ಮೆಸ್ಕಾಂ ಕಚೇರಿ ಬಳಿ ನಂಬರ್ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಟಿಪ್ಪರ್ ಪತ್ತೆಯಾಗಿದ್ದು ಅದರಲ್ಲಿ ಹಿಟಾಚಿ ಇರಲಿಲ್ಲ.
ಲಾರಿಯ ಎರಡು ಬದಿಗಳಲ್ಲಿಯೂ ಕೂಡ ಇರುವ ನಂಬರ್ಪ್ಲೇಟ್ ನಲ್ಲಿ ನಂಬರ್ ಸರಿಯಾಗಿ ಕಾಣುತ್ತಿರಲಿಲ್ಲ. ಸುಳ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Putturu: ನೇಣು ಬಿಗಿದು ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.