Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ
Team Udayavani, Sep 7, 2024, 6:40 AM IST
ಬೆಳ್ತಂಗಡಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪರೂ ಪಕ್ಕೆ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯ ದುಂಡಾಣು ಅಂಗಮಾರಿ (Bacteria Blight) ರೋಗವು ಬೆಳ್ತಂಗಡಿ ತಾಲೂಕಿನ ಬೆಳಾಲು ಹಾಗೂ ಮೇಲಂತಬೆಟ್ಟು ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಬೆಳಾಲು ಗ್ರಾಮದ ಲಿಂಗಪ್ಪ ಪೂಜಾರಿ ಹಾಗೂ ಮೇಲಂತಬೆಟ್ಟು ಗ್ರಾಮದ ರಘುರಾಮ್ ಶೆಟ್ಟರ ಗದ್ದೆಯಲ್ಲಿ ಈ ರೋಗದ ಲಕ್ಷಣ ಕಾಣಿಸಿಕೊಂಡಿರುವ ಕುರಿತು “ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ತಾಲೂಕಿನ ಇತರೆಡೆ ಹಾಗೂ ಸುಳ್ಯಮತ್ತು ಕಡಬ ತಾಲೂಕಿನಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಅಧಿಕಾರಿಗಳಿಗೆ ರೈತರು ತಿಳಿಸಿದ್ದಾರೆ.
ಸೂಕ್ತ ರಸಗೊಬ್ಬರ: ಸಲಹೆ
ರೋಗ ಲಕ್ಷಣ ಕುರಿತು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ವಿಭಾಗದ ಡಾ| ಮಲ್ಲಿಕಾರ್ಜುನ್ ಪರಿಶೀಲಿಸಿ, ಗದ್ದೆಯಲ್ಲಿ ಪೊಟ್ಯಾಷ್ ಕೊರತೆಯಾಗಿರುವ ಸಾಧ್ಯತೆ ಬಗ್ಗೆ ಸೂಚಿಸಿದ್ದಾರೆ. ಸಸ್ಯರೋಗ ವಿಭಾಗ ತಜ್ಞ ಡಾ| ಕೇಧಾರ್‌ನಾಥ್ ಪರಿಶೀಲಿಸಿ, ಒಂದು ಎಕ್ರೆ ಗದ್ದೆಗೆ 12 ಕೆ.ಜಿ. ಯೂರಿಯಾ, 12 ಕೆ.ಜಿ. ಪೊಟ್ಯಾಶ್, 2 ಕೆ.ಜಿ. ಮೆಗ್ನಿಶಿಯಂ ಸಲ್ಫೆಟ್, 2 ಕೆ.ಜಿ. ಝಿಂಕ್ (ಸತು) ಸಲ್ಫೆಟ್ ಬೆರೆಸಿ ಕೇವಲ ತೇವಾಂಶ ಮಾತ್ರ ಇರುವಂತೆ ನೋಡಿಕೊಂಡು ರಸ ಗೊಬ್ಬರ ನೀಡುವಂತೆ ಸೂಚಿಸಿದ್ದಾರೆ.
ಭತ್ತಕ್ಕೆ ಸಿಂಪಡಣೆ
ಬಿಸಿಲು ಹೆಚ್ಚಾದಾಗ ರೋಗ ನಿಧಾನವಾಗಿ ಹತೋಟಿಗೆ ಬರುವ ಸಾಧ್ಯತೆಯಿದ್ದು, ತತ್‌ಕ್ಷಣಕ್ಕೆ ಪ್ರತಿ ಎಕ್ರೆಗೆ (Streptomycin) 6 ಗ್ರಾಂ 200 ಲೀಟರಿಗೆ ಬೆರೆಸಿ ಸಿಂಪಡಣೆ ಅಥವಾ 500 ಗ್ರಾಂ ಕಾಪರ್ ಆಕ್ಸಿ ಕ್ಲೋರೈಡ್ 200 ಲೀಟರ್ ನೀರಿಗೆ ಬೆರೆಸಿ ಒಂದೆರಡು ಬಾರಿ ಸಿಂಪಡಿಸಲು ಕೃಷಿ ಅಧಿಕಾರಿಗಳು ಸೂಚಿಸಿದಂತೆ ರೈತರು ಕ್ರಮ ಕೈಗೊಂಡಿದ್ದಾರೆ. ಮುಂದೆ ತೆನೆ ಬರುವ ಹಂತದಲ್ಲಿ ಎಲೆ ಕವಚ ಅಥವಾ ತೆನೆ ಕವಚ (Sheat Blight) ಕೊಳೆರೋಗ ಎದುರಾದಲ್ಲೂ ಈ ರೀತಿ ರಾಸಾಯನಿಕ ಸಿಂಪಡಿಸುವುದು ಸೂಕ್ತವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.