ಹತಾಶ ಮಾತೆಯರಿಂದಲೇ ಅಂಗನವಾಡಿ ಛಾವಣಿ ದುರಸ್ತಿ

ಕುಸಿಯುವ ಭೀತಿಯಿದ್ದರೂ ದುರಸ್ತಿಗೆ ಇಲಾಖೆಯಿಂದ ಅನುದಾನ ನಿರಾಕರಣೆ

Team Udayavani, Mar 19, 2020, 4:48 AM IST

anganavadi

ಬೆಳ್ತಂಗಡಿ: ಮೂಲ ಸವಲತ್ತು ಒದಗಿಸುವ ಜತೆಗೆ ಕನ್ನಡ ಮಾಧ್ಯಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲಾಖೆ, ಜನ ಪ್ರತಿನಿಧಿಗಳ ಮೇಲಿದ್ದರೂ ನಿರ್ಲಕ್ಷ್ಯ ವಹಿಸ ಲಾಗುತ್ತಿದೆ ಎಂಬುದಕ್ಕೆ ತಾ|ನ ಕಡಿರುದ್ಯಾವರ ಗ್ರಾಮದ ಕಾನರ್ಪ ಅಂಗನವಾಡಿ ಸಾಕ್ಷಿ. ಕಳೆದ ಮಳೆಗಾಲದಲ್ಲಿ ಅಂಗನವಾಡಿ ಕೇಂದ್ರದ ಛಾವಣಿ ಕುಸಿತದ ಭೀತಿ ಎದು ರಾಗಿತ್ತು. 30 ವರ್ಷಗಳ ಹಿಂದೆ ನಿರ್ಮಿ ಸಿದ್ದ, ಇನ್ನೇನು ಕುಸಿಯುವಂತಿದ್ದ ಸೂರು ದುರಸ್ತಿಯ ಅನುದಾನಕ್ಕಾಗಿ ಅಂಗಲಾಚಿ ದರೂ ಸ್ಥಳೀಯಾಡಳಿತವಾಗಲೀ ಜಿ.ಪಂ., ಇಲಾಖೆಯಾಗಲೀ ಕ್ರಮ ಕೈಗೊಳ್ಳಲಿಲ್ಲ.

ಅನುದಾನಕ್ಕೆ ಪರದಾಟ
ಕಳೆದ ಮಳೆಗಾಲದಲ್ಲಿ ಅಂಗನವಾಡಿ ಛಾವಣಿ ಅಡ್ಡಹಾಸು, ರೀಪು, ಹೆಂಚು ಮುರಿದು ಬೀಳುವ ಪರಿಸ್ಥಿತಿ ಎದುರಾಗಿತ್ತು. ಅಕ್ಟೋಬರ್‌ ಅವಧಿಗೆ ಅಂಗನವಾಡಿ ಶಿಕ್ಷಕಿ ಮಕ್ಕಳ ಹೆತ್ತವರ ಗಮನಕ್ಕೆ ತಂದಿದ್ದರು. ಗ್ರಾ.ಪಂ. ಸಭೆಗಳಲ್ಲಿ ಅಂಗನವಾಡಿ ಮಕ್ಕಳ ಹೆತ್ತವರ ಸಮಿತಿ ಸದಸ್ಯ ರಾಘವೇಂದ್ರ ಭಟ್‌ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಕುರಿತು ಶಾಸಕರಿಗೆ ಮನವಿ ನೀಡಿ ದಾಗಲೂ ಅನುದಾನ ನಿರೀಕ್ಷಿಸಿದ್ದು ಕೈ ಸೇರಿಲ್ಲ. ಇತ್ತ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿಯಲ್ಲಿ ಚರ್ಚಿಸಿದಾಗ ಮನವಿ ನೀಡುವುದೇ ಬೇಡ ಎಂಬ ಹಾರಿಕೆ ಉತ್ತರ ಎದುರಾಗಿತ್ತು.

ಆಶ್ರಯಿಸಿದ ಸ್ತ್ರೀ ಶಕ್ತಿ
ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಸ್ತ್ರೀಶಕ್ತಿ ಸಂಘಟನೆ ನೇತೃತ್ವದಲ್ಲಿ ಮಕ್ಕಳ ಹೆತ್ತವರು ಸ್ಥಳೀಯ ದಾನಿಗಳ ನೆರವಿ ನಿಂದ ಒಂದೇ ದಿನದಲ್ಲಿ ಛಾವಣಿ ದುರಸ್ತಿ ಗೊಳಿಸಿದ್ದಾರೆ. 10ರಿಂದ 12 ಸಾವಿರ ರೂ. ಸಂಗ್ರಹಿಸಿ 50 ಹೆಂಚು, 1.20 ಕ್ವಿಂಟಲ್‌ ರಾಡ್‌ ಬಳಸಿ ಛಾವಣಿ ನಿರ್ಮಿಸಿದ್ದಾರೆ.

ಸ್ಥಳೀಯ 4 ಸ್ತ್ರೀ ಶಕ್ತಿ ಸಂಘಟನೆಗಳ
ಸದಸ್ಯೆ ಯರು ಹಾಗೂ ಮಕ್ಕಳ ತಾಯಂದಿರು 30 ಮಂದಿ ಸೇರಿ 10 ಮಂದಿ ಪುರುಷರ ಸಹಾಯದಿಂದ ಮಾ. 17ರಂದು ಒಂದೇ ದಿನದಲ್ಲಿ ಛಾವಣಿ ಯನ್ನು ದುರಸ್ತಿಗೊಳಿಸಿದ್ದಾರೆ.

ಕಾಂಕ್ರೀಟ್‌ ಛಾವಣಿಗೆ ಆಗ್ರಹ
ಕಾನರ್ಪ ಅಂಗನವಾಡಿಯಲ್ಲಿ 3ರಿಂದ 6 ವರ್ಷ ಪ್ರಾಯದ 19 ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗುತ್ತಿದ್ದು, 0-3 ವರ್ಷ ಪ್ರಾಯದ 32 ಕಂದಮ್ಮಗಳು, 3-6 ವರ್ಷ ಪ್ರಾಯದ 19 ಮಕ್ಕಳು ಇದೇ ಅಂಗನವಾಡಿ ಆಶ್ರಯಿಸಿದ್ದಾರೆ. ಇಷ್ಟಾದರೂ ಕಟ್ಟಡ ಛಾವಣಿ ದುರಸ್ತಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ದುರಂತ. ಮಂದಿನ ದಿನಗಳಲ್ಲಿ ಕಾಂಕ್ರೀಟ್‌ ಛಾವಣಿ ನಿರ್ಮಿಸುವಂತೆ ಹೆತ್ತವರು ಆಗ್ರಹಿಸಿದ್ದಾರೆ.

ಪ್ರತಿವರ್ಷ ಅನುದಾನ
ಪ್ರತಿ ವರ್ಷ ಅಂಗನವಾಡಿ ಕಟ್ಟಡ ದುರಸ್ತಿಗೆ ಇಲಾಖೆ ಅನುದಾನ ಒದಗಿಸು ತ್ತದೆ. ಕಳೆದ ವರ್ಷ 68 ಅಂಗನವಾಡಿ ದುರಸ್ತಿಗೆ 74 ಲಕ್ಷ ರೂ., ಈ ವರ್ಷ 48 ಅಂಗನವಾಡಿ ದುರಸ್ತಿಗೆ 22 ಲಕ್ಷ ರೂ. ಅನುದಾನ ನೀಡಲಾಗಿದೆ. ಸಂಬಂಧ ಪಟ್ಟ ತಾ.ಪಂ. ಸದಸ್ಯರು ಅನುದಾನ ಹಂಚುವ ಜವಾಬ್ದಾರಿ ಹೊಂದಿರುತ್ತಾರೆ.
 - ಪ್ರಿಯಾ ಆಗ್ನೆಸ್‌, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ದಾನಿಗಳು, ಹೆತ್ತವರ ಸಹಕಾರ
ಕಟ್ಟಡ ಛಾವಣಿ ದುರಸ್ತಿಗೆ ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮಕ್ಕಳ ಜೀವ ಹಾನಿ ಸಂಭವಿಸುವ ಮುನ್ನ ಅನಿವಾರ್ಯವಾಗಿ ಸ್ಥಳೀಯ ದಾನಿಗಳು, ಹೆತ್ತವರ ಸಹಕಾರ ದಿಂದ ಕಟ್ಟಡ ದುರಸ್ತಿಗೊಳಿಸಲಾಗಿದೆ.
– ಗೌರಿ ಆರ್‌.ಕೆ., ಕಾನರ್ಪ ಅಂಗನವಾಡಿ ಕಾರ್ಯಕರ್ತೆ

 ಒಂದೇ ದಿನದಲ್ಲಿ ಛಾವಣಿ ನಿರ್ಮಾಣ ಮಳೆಗಾಲಕ್ಕೂ ಮುನ್ನ ಅಂಗನವಾಡಿ ದುರಸ್ತಿ ಅನಿವಾರ್ಯವಾದ್ದರಿಂದ ಸ್ಥಳೀಯ ದಾನಿಗಳ ನೆರವಿನಿಂದ, ಸ್ತ್ರೀಶಕ್ತಿಯರ ಕರ ಸೇವೆಯಿಂದ 12 ಸಾವಿರ ರೂ. ವೆಚ್ಚದಲ್ಲಿ ಒಂದೇ ದಿನದಲ್ಲಿ ಛಾವಣಿ ನಿರ್ಮಿಸಿದ್ದೇವೆ.
 -ರಾಘವೇಂದ್ರ ಭಟ್‌, ಹೆತ್ತವರು

ಮಕ್ಕಳ ಹೆತ್ತವರಿಂದಲೇ ಅಂಗನವಾಡಿ ದುರಸ್ತಿ ಕಾರ್ಯ.

- ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.