ಅರಂತೋಡು: ಬ್ರಿಟಿಷ್ ಕಾಲದ ಗ್ರಾಮ ಕರಣಿಕರ ಕಚೇರಿ ಶಿಥಿಲ
ವಿಎ ಕಚೇರಿಗೆ ವಿದ್ಯುತ್ ಸಂಪರ್ಕವಿಲ್ಲ; ಶೀಘ್ರ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
Team Udayavani, Feb 5, 2020, 4:29 AM IST
ಅರಂತೋಡು: ಅರಂತೋಡು ಪೇಟೆಯಲ್ಲಿರುವ ಶತಮಾನದಷ್ಟು ಹಳೆಯ ಗ್ರಾಮಕರಣಿಕರ ಕಚೇರಿಗೆ ಇನ್ನೂ ದುರಸ್ತಿ ಭಾಗ್ಯ ದೊರೆತಿಲ್ಲ. ಅರಂತೋಡು ಮುಖ್ಯ ಪೇಟೆಯಲ್ಲಿಯೇ ಗ್ರಾಮಕರಣಿಕರ ಕಚೇರಿ ಕಟ್ಟಡ ಇದೆ. ಇದು ಬ್ರಿಟಿಷರ ಕಾಲದ ಕಟ್ಟಡವಾಗಿದ್ದು, ಶಿಥಿಲಗೊಂಡಿದೆ. ನೆಲದ ಸಿಮೆಂಟ್ ಸಾರಣೆ ಕಿತ್ತು ಹೋಗಿದ್ದು, ದೊಡ್ಡ ಹೊಂಡಗಳಾಗಿವೆ.
ಇಲಿ, ಹೆಗ್ಗಣ ಕಾಟ
ಛಾವಣಿಯ ರೀಪು, ಪಕ್ಕಾಸುಗಳಿಗೆ ಗೆದ್ದಲು ಹಿಡಿದಿದೆ. ಈ ಕಟ್ಟಡದಲ್ಲಿ ಹೆಗ್ಗೆಣ, ಇಲಿಗಳು ವಾಸವಾಗಿದ್ದು, ಮಣ್ಣು ಅಗೆದು ಹಾಕಿವೆ.
ಕಡತಗಳಿಗೆ ಅಪಾಯ
ಅರಂತೋಡು ಗ್ರಾಮಕರಣಿಕರ ಕಚೇರಿಯಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮದ ಇಬ್ಬರು ಗ್ರಾಮಕರಣಿಕರು ಹಾಗೂ ಅವರ ಇಬ್ಬರು ಸಹಾಯಕರು ಕೆಲಸ ಮಾಡುತ್ತಾರೆ. ಎರಡು ಗ್ರಾಮಗಳ ರೈತರ ದಾಖಲಾತಿಗಳು ಈ ಕಚೇರಿಯಲ್ಲಿ ಇವೆ. ಕಟ್ಟಡ ಏನಾದರೂ ಮುರಿದು ಬಿದ್ದರೆ ದಾಖಲಾತಿ ನಾಶವಾಗುವ ಸಾಧ್ಯತೆ ಇದೆ. ದಿನ ನಿತ್ಯ ಅನೇಕ ರೈತರು ಕೆಲಸಗಳಿಗೆ ಈ ಕಚೇರಿಗೆ ಭೇಟಿ ಕೊಡುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ಕಚೇರಿಯಲ್ಲಿ ಕುಳಿತುಕೊಳ್ಳಲು ಸಿಬಂದಿಗೆ ಭಯವಾಗುತ್ತಿದೆ.
ವಿದ್ಯುತ್ ಇಲ್ಲ
ಒಂದು ಶತಮಾನದಷ್ಟು ಹಳೆಯ ಕಟ್ಟಡವಾಗಿದ್ದರೂ ಈ ಕಚೇರಿಗೆ ಇನ್ನೂ ವಿದ್ಯುತ್ ಭಾಗ್ಯ ದೊರೆಯದೇ ಇರುವುದು ವಿಪರ್ಯಾಸ. ವಿದ್ಯುತ್ ಇಲ್ಲದೆ ಸಿಬಂದಿ ಕಡು ಬೇಸಗೆಯಲ್ಲಿ ಸೆಕೆ, ಮಳೆಗಾಲದಲ್ಲಿ ಕತ್ತಲೆಯಲ್ಲಿ ಕೆಲಸ ಮಾಡಬೇಕಿದೆ. ಕಟ್ಟಡವೂ ಸೋರುವುದರಿಂದ ಅಪಾಯ ಹೆಚ್ಚು.
ಜಿಲ್ಲಾಧಿಕಾರಿಗೆ ಮನವಿ
ಕೆಲವು ವರ್ಷಗಳ ಹಿಂದೆಯೇ ಅರಂತೋಡು ವಿಎ ಕಟ್ಟಡದ ಸಮಸ್ಯೆಯ ಬಗ್ಗೆ ಗ್ರಾಮಕರಣಿಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಈ ತನಕ ಸ್ಪಂದನೆ ದೊರೆತಿಲ್ಲ. ರೈತರೂ ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಸಮಸ್ಯೆಗೆ ಸರಕಾರ ತತ್‌ಕ್ಷಣ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪರಿಶೀಲಿಸಿದ್ದಾರೆ
ನಮ್ಮ ಕಚೇರಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ನಾನು ಪತ್ರ ಬರೆದಿದ್ದೇನೆ. ಬಳಿಕ ಸಂಬಂಧಪಟ್ಟವರು ಬಂದು ಪರಿಶೀಲಿಸಿ ಹೋಗಿದ್ದಾರೆ. ಇದಾಗಿ ವರ್ಷ ಕಳೆದರೂ ಈ ತನಕ ಯಾವುದೇ ಮಾಹಿತಿ ನಮಗೆ ಬಂದಿಲ್ಲ.
– ಗಿರಿಜಾಕ್ಷಿ, ವಿ.ಎ. ತೊಡಿಕಾನ
ಹೊಸ ಕಟ್ಟಡವಾಗಲಿ
ಶತಮಾನಗಳಷ್ಟು ಹಳೆಯ ಕಟ್ಟಡ ಇದಾಗಿದ್ದು, ಸರಕಾರ ಇದರ ಬಗ್ಗೆ ಗಮನ ಹರಿಸದಿರುವುದು ಬೇಸರದ ವಿಷಯ. ನಾನೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಎ.ಸಿ.ಗೆ ಅರಂತೋಡು ವಿ.ಎ. ಕಚೇರಿಯ ಸಮಸ್ಯೆಯ ಬಗ್ಗೆ ಬರೆದಿದ್ದೇನೆ.
– ತಾಜುದ್ದೀನ್, ಅರಂತೋಡು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್ ಸುತ್ತ ಸ್ವಚ್ಛತೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.