Aranthodu: ಅಸೌಖ್ಯ; ಆಟೋ ಚಾಲಕ ಸಾವು
Team Udayavani, Dec 18, 2024, 10:40 PM IST
ಅಸೌಖ್ಯ: ಆಟೋ ಚಾಲಕ ಸಾವು
ಅರಂತೋಡು: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ನಿವಾಸಿ ಪ್ರೇಮಚಂದ್ರ ರೈ ಅವರು ಅಸೌಖ್ಯದಿಂದ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲವು ಸಮಗಳಿಂದ ಅಸೌಖ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸುಳ್ಯದಲ್ಲಿ ಹಲವು ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದರು.
ಕಿಟಕಿ ಬಡಿದ ಕಳ್ಳರು ?
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಪೇಟೆ ಸಮೀಪ ಅಪರಿಚಿತರು ಮನೆಯೊಂದರ ಕಿಟಕಿ ಬಡಿದಿದ್ದು, ಮನೆಯವರು ಎಚ್ಚರಗೊಂಡಾಗ ತಂಡ ಪರಾರಿಯಾಗಿದ್ದು, ಕಳ್ಳರ ಕೃತ್ಯ ಎಂದು ಶಂಕಿಸಲಾಗಿದೆ. ಡಿ. 17ರಂದು ಮುಂಜಾನೆ 3 ಗಂಟೆ ವೇಳೆಗೆ ಬಳ್ಪದ ಧನಂಜಯ ಅವರ ಮನೆಯ ಎರಡು ಕಿಟಕಿಗಳ ಬಡಿದಿದ್ದು, ಮನೆಯವರು ಎಚ್ಚರಗೊಂಡಾಗ ತಂಡ ಪರಾರಿಯಾಗಿದೆ ಎನ್ನಲಾಗಿದೆ.
ಬಾರ್ ಸಿಬಂದಿಗೆ ಹಲ್ಲೆ
ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ದರ್ಬೆ ವೃತ್ತದ ಬಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಿಬಂದಿಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೆಸ್ಟೋರೆಂಟ್ ಸಿಬಂದಿ ಜಗದೀಶ್ ರೈ ಅವರು ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ರಾಜಾರಾಮ್ ಭಟ್ ಮತ್ತು ಅವರ ತಂಡದವರು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಜಗದೀಶ್ ರೈ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.