Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!
ಪರಿವಾರಕಾನದ ತಂಗುದಾಣ; ನಿರ್ವಹಣೆ ಕೊರತೆ
Team Udayavani, Nov 27, 2024, 12:49 PM IST
ಅರಂತೋಡು: ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಕೊಡುಗೆಯಾಗಿ ನೀಡಿದ ಪ್ರಯಾ ಣಿಕರ ತಂಗುದಾಣದ ವ್ಯವಸ್ಥೆಯೊಂದು ಸ್ಥಳೀಯಾಡಳಿತದಿಂದ ಸರಿಯಾಗಿ ನಿರ್ವಹಣೆ ಆಗದೆ ಜನರಿಂದ ದೂರ ಉಳಿಯುವಂತಾಗಿದೆ.
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿವಾರ ಕಾನದಲ್ಲಿ ಜನರು ವಾಹನಕ್ಕಾಗಿ ಬಿಸಿಲು-ಮಳೆಯಲ್ಲಿ ನಿಲ್ಲುವ ಸ್ಥಿತಿ ಇದ್ದಾಗ ಖಾಸಗಿ ವ್ಯವಸ್ಥೆಯು ಒಂದು ತಂಗುದಾಣವನ್ನು ನಿರ್ಮಿಸಿ ಜನಹಿತ ಕಾರ್ಯವನ್ನು ಮಾಡಿತ್ತು. ಅಲ್ಲಿಂದೀಚೆಗೆ ಜನರು ಇದನ್ನು ಉಪಯೋಗಿಸುತ್ತಾ ಬಂದಿದ್ದರೂ ಇತ್ತೀಚೆಗೆ ಅದರ ಪರಿಸರದ ನಿರ್ವಹಣೆ ಸರಿ ಆಗದೆ ಅದರ ಸುತ್ತಲು ಪೊದೆಗಳು ಬೆಳೆದು ತಂಗುದಾಣಕ್ಕೆ ಹೋಗಲು ದಾರಿ ಸರಿಯಾಗಿ ಕಾಣದಾಗಿದೆ. ಪೊದೆಗಳು ಸುತ್ತುವರಿದಿರುವುದರಿಂದ ಆ ಕಡೆ ತೆರಳಲು ಹಾವುಗಳ ಭಯವೂ ಜನರನ್ನು ಕಾಡುತ್ತಿದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಜನ ಅದರತ್ತ ಹೋಗುವುದು ಕಡಿಮೆ ಆಗುತ್ತಿದ್ದಂತೆ ಅಲ್ಲಿ ಬೀದಿ ನಾಯಿಗಳು ಸೇರಿಕೊಳ್ಳಲಾರಂಭಿಸಿವೆ. ಇದರಿಂದಾಗಿ ಜನರು ಮತ್ತೆ ರಸ್ತೆ ಬದಿಯಲ್ಲೇ ವಾಹಕ್ಕೆ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸ್ಥಳೀಯಾಡಳಿತ ಇತ್ತ ಗಮನ ಹರಿಸಿ ಇಲ್ಲಿ ಸದ್ಯ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ತಂಗುದಾಣ ಜನರ ಉಪಯೋಗಕ್ಕೆ ದೊರೆಯುವಂತೆ ಮಾಡಬೇಕು ಎಂದು ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಇದರ ಪಕ್ಕದಲ್ಲೇ ವಿದ್ಯುತ್ ಕಂಬವೂ ಇದ್ದು ಅದರ ಸುತ್ತಲೂ ಪೊದೆ ಬೆಳೆದಿದೆ. ಕಾಡು ಬಳ್ಳಿ ಕಂಬ ಹತ್ತಲು ಆರಂಭವಾಗಿದೆ. ಅಪಾಯಕ್ಕೆ ಆಹ್ವಾನ ಸಂಭವಿಸುವ ಮೊದಲೇ ಮೆಸ್ಕಾಂ ಇದನ್ನು ಸರಿ ಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.