ಅರಂತೋಡು: ಗುಡ್ಡ ಕುಸಿದು ಸಂಚಾರಕ್ಕೆ ತಡೆ
Team Udayavani, Jul 10, 2018, 1:23 PM IST
ಅರಂತೋಡು: ಅರಂತೋಡು ಸಮೀಪದ ಬಳಿಯಾರು ಎಂಬಲ್ಲಿ ಮಾಣಿ- ಮೈಸೂರು ರಾಜ್ಯ ಹೆದ್ದಾರಿಗೆ ರವಿವಾರ ರಾತ್ರಿ ಗುಡ್ಡ ಕುಸಿದು ಬಿದ್ದ ಪರಿಣಾಮ ಘನ ವಾಹನ ಸಂಚಾರಕ್ಕೆ ತಡೆಯುಂಟಾದ ಘಟನೆ ವರದಿಯಾಗಿದೆ.
ನಾಲ್ಕು ದಿನಗಳಿಂದ ಅರಂತೋಡು ಪರಿಸರದಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಪರಿಣಾಮವಾಗಿ ಬಿಳಿಯಾರು ಸಮೀಪ ಗುಡ್ಡ ಸಹಿತ ಮುರಕಲ್ಲು ಉರುಳಿ ರಸ್ತೆ ಮೇಲೆ ಬಿತ್ತು. ಇದರಿಂದ ಘನ ಸಂಚಾರಕ್ಕೆ ತೊಡಕಾಗಿ ರಸ್ತೆ ತಡೆಯುಂಟಾಗಿತ್ತು. ವಾಹನಗಳು ಬಹುದೂರ ಸಾಲುಗಟ್ಟಿ ನಿಂತಿದ್ದವು. ಪತ್ರಕರ್ತರು ಈ ಕುರಿತು ಪೊಲೀಸರಿಗೆ
ಮಾಹಿತಿ ನೀಡಿದ ಬಳಿಕ ಧಾರಾಕಾರ ಮಳೆಯಲ್ಲೇ ಸುಳ್ಯ ಠಾಣೆ ಉಪ ನಿರೀಕ್ಷಕ ಮಂಜುನಾಥ್ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರಾದ ತಾಜುದ್ದೀನ್ ಟರ್ಲಿ ಹಾಗೂ ಇತರರ ಸಹಕಾರದಿಂದ ರಸ್ತೆಗೆ ಉರುಳಿ ಬಿದ್ದ ಗುಡ್ಡದ ಮಣ್ಣು, ಮರ, ಕಲ್ಲುಗಳನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.