ಡಂಪಿಂಗ್‌ ಯಾರ್ಡ್‌ಗಾಗಿ ವಿಶೇಷ ಗ್ರಾಮಸಭೆ

Team Udayavani, Jul 14, 2018, 12:17 PM IST

14-july-9.jpg

ಸಂಪ್ಯ : ಆರ್ಯಾಪು ಗ್ರಾಮ ವ್ಯಾಪ್ತಿಯಲ್ಲಿ ಡಂಪಿಂಗ್‌ ಯಾರ್ಡ್‌ ನಿರ್ಮಾಣ ಮಾಡಲು, ಬಲ್ಲೇರಿ ಮಲೆಯ ತಪ್ಪಲಿನ ಕಿನ್ನಿಮಜಲಿನಲ್ಲಿ ಜಾಗ ನೋಡಲಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ವಿಶೇಷ ಗ್ರಾಮ ಸಭೆ ಕರೆಯಲು ನಿರ್ಧರಿಸಲಾಯಿತು.

ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಮರಿಕೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.  ಕಿನ್ನಿಮಜಲಿನಲ್ಲಿ ಡಂಪಿಂಗ್‌ ಯಾರ್ಡ್‌ ಹಾಗೂ ಸ್ಮಶಾನ ಭೂಮಿ ನಿರ್ಮಾಣ ಮಾಡುವುದು ಹಾಗೂ ಅಲ್ಲಿಗೆ ರಸ್ತೆ ನಿರ್ಮಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಇದರಿಂದಾಗಿ ಗ್ರಾ.ಪಂ. ವ್ಯಾಪ್ತಿಯ ಡಂಪಿಂಗ್‌ ಯಾರ್ಡ್‌ ಮತ್ತು ಸ್ಮಶಾನ ಭೂಮಿ ಮಾಡುವ ವಿಚಾರದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಯಿತು. ಸದಸ್ಯ ಇಸ್ಮಾಯಿಲ್‌ ಮಲಾರು ಮಾತನಾಡಿ, ಗ್ರಾ.ಪಂ.ಗೆ ಡಂಪಿಂಗ್‌ ಯಾರ್ಡ್‌ ಅತೀ ಅಗತ್ಯ. ಇದರ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟು ಅಲ್ಲೆ ಮಾಡಿದರೆ ಉತ್ತಮ ಎಂದರು.

ಧ್ವನಿಗೂಡಿಸಿದ ಸದಸ್ಯ ಜಯಂತ ಶೆಟ್ಟಿ, ಆ ಭಾಗದ ಜನರನ್ನು ಕರೆಸಿ ಮನವರಿಕೆ ಮಾಡಿಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಆಕ್ಷೇಪ ಮಾಡುವವರಿಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದರು. ಇಸ್ಮಾಯಿಲ್‌ ಮಲಾರು ಮಾತನಾಡಿ, ಗ್ರಾ.ಪಂ. ಚುನಾವಣೆ, ಎಂ.ಪಿ. ಚುನಾವಣೆ ಬಂದಾಗ ಮತ್ತೆ ಸಭೆ ನಡೆಸಲು ಆಗುವುದಿಲ್ಲ. ಆದ್ದರಿಂದ ಬೇಗ ಸಮಸ್ಯೆ ಪರಿಹಾರ ಮಾಡಿಕೊಳ್ಳೋಣ ಎಂದರು. ಸದಸ್ಯೆ ಭಾರತಿ ಮಾತನಾಡಿ, ಡಂಪಿಂಗ್‌ ಯಾರ್ಡ್ ಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ವಿಶೇಷ ಸಭೆ ಕರೆಯಲು ತೀರ್ಮಾನಿಸಲಾಯಿತು.

ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಮಾತನಾಡಿ, ಫಲಾನುಭವಿಗಳು ಸಕಾಲದಲ್ಲಿ ಮನೆ ಕಾಮಗಾರಿ ನಡೆಸದಿದ್ದರೆ ವಸತಿ ಯೋನೆಯಡಿ ಮನೆ ಮಂಜೂರಾತಿಗೆ ಸಮಸ್ಯೆ ಉಂಟಾಗುತ್ತಿದೆ. ಇದು ನಮ್ಮ ಗ್ರಾ.ಪಂ.ಗೆ ಕಪ್ಪುಚುಕ್ಕೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಮನವರಿಕೆ ಕೆಲಸ ಆರಂಭಿಸುವಂತೆ ಸೂಚಿಸಬೇಕಾಗಿದೆ ಎಂದರು.

ಮೊತ್ತ ವಾಪಸ್‌!
ಈ ಬಗ್ಗೆ ಮೊದಲಿಗೆ ನೊಟೀಸ್‌ ನೀಡುವುದು ಹಾಗೂ ಅದಕ್ಕೂ ಸ್ಪಂಧಿ ಸದಿದ್ದಲ್ಲಿ ಮನೆಯನ್ನೇ ಕ್ಯಾನ್ಸಲ್‌ ಮಾಡಲಾಗುವುದು. ಈಗಾಗಲೇ ಗ್ರಾ.ಪಂ.ನಿಂದ ದೊರಕುವ ಅನುದಾನದ ಕಂತು ಅರ್ಧ ಪಡಕೊಂಡವರು ಮನೆಯ ಕಾಮಗಾರಿ ಆರಂಭಿಸದೇ ಹೋದಲ್ಲಿ ಅದರ ಮೊತ್ತವನ್ನು ವಾಪಸ್‌ ಪಡೆಯಲಾಗುವುದು ಎಂದು ತೀರ್ಮಾನಿಸಲಾಯಿತು.

ವೈದ್ಯರ ಸರ್ಟಿಫಿಕೇಟ್‌
ಕೋಳಿ ಫಾರಂ ಮಾಡುವವರು ಕಡ್ಡಾಯವಾಗಿ ವೈದ್ಯರ ಸರ್ಟಿಫಿಕೇಟ್‌ ಮೊದಲೇ ಪಡದುಕೊಂಡಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ವೈದ್ಯರ ಸಟಿಫಿಕೇಟ್‌ ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಭೆ ನಿರ್ಣಯ ಕೈಗೊಂಡಿತು. 

ಕೋಳಿ ತ್ಯಾಜ್ಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ. ಇದನ್ನು ಪತ್ತೆ ಹಚ್ಚುವ ಕಾರ್ಯ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಲ್ಪವಾದರೂ ಬುದ್ದಿ ಜ್ಞಾನ ಇರುವವರು ಒಟ್ಟಾರೆಯಾಗಿ ಕೋಳಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಲು ಸಾಧ್ಯವಿಲ್ಲ, ಅವರಾಗಿಯೇ ಬದಲಾಗಬೇಕಷ್ಟೇ ಎಂದು ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಹೇಳಿದರು. ಪಿಡಿಒ ಜಗದೀಶ್‌ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುಷಾ ಡಿ. ವರದಿ ವಾಚಿಸಿದರು. ಗುಮಾಸ್ತೆ ಮಮತಾ ಸಹಕರಿಸಿದರು.

ಪರವಾನಿಗೆ ಬೇಡ
ಕಾರ್ಪಾಡಿ ಬಳಿಯ ಬಸ್‌ ತಂಗುದಾಣಕ್ಕೆ ತಾಂತ್ರಿಕ ಕಾರಣದಿಂದ ಬಸ್‌ ನಿಲ್ಲಿಸಲು ಸಂಬಂಧಪಟ್ಟ ಇಲಾಖೆ ನಿರಾಕರಿಸಿದೆ. ಇದೇ ತಂಗುದಾಣಕ್ಕೆ ಗ್ರಾ.ಪಂ. ಪರವಾನಿಗೆ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ ಗ್ರಾ.ಪಂ. ಪರವಾನಿಗೆ ನೀಡಿದರೆ ಸಮಸ್ಯೆ ಆಗಬಹುದು. ಆದ್ದರಿಂದ ಅನುಮತಿ ನೀಡುವುದು ಬೇಡ ಎಂದು ಸಭೆ ನಿರ್ಣಯ ಕೈಗೊಂಡಿತು.

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.