ಜೋಡುಪಾಲ ಸಂತ್ರಸ್ತರಿಗೆ ಸಂಘ-ಸಂಸ್ಥೆಯಿಂದ ನೆರವು
Team Udayavani, Oct 6, 2018, 3:58 PM IST
ನರಿಮೊಗರು: ಇಲ್ಲಿನ ಪ್ರಖ್ಯಾತಿ ಯುವತಿ ಮಂಡಲ ಮತ್ತು ಮುಕ್ವೆ ಫ್ರೆಂಡ್ಸ್ ಕ್ಲಬ್ ತಂಡವು ಜೋಡುಪಾಲ ಸಂತ್ರಸ್ತರಿಗೆ ಧನಸಹಾಯ ನೀಡಿತು. ನೆರೆಯಿಂದಾಗಿ ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡ 2 ಕುಟುಂಬಗಳಿಗೆ ಈ ತಂಡವು ಜೋಡುಪಾಲಕ್ಕೆ ಭೇಟಿಯಿತ್ತು ಧನ ಸಹಾಯ ಮಾಡಿತು.
ಪ್ರಕೃತಿ ವಿಕೋಪಕ್ಕೆ ಜೋಡುಪಾಲದ ಹಲವಾರು ಮನೆಗಳು ಹಾನಿಗೀಡಾಗಿದ್ದು, ಮನೆಯನ್ನು ಕಳೆದು ಕೊಂಡವರಲ್ಲಿ ಜಾರಪ್ಪ ಹಾಗೂ ವಸಂತ ಅವರ ಕುಟುಂಬವೂ ಇದೆ. ಮನೆಯೊಂದಿಗೆ ಅಪಾಯ ಪ್ರಮಾಣದ ಬೆಳೆಯನ್ನು ಕಳೆದುಕೊಂಡಿರುವ ಈ ಕುಟುಂಬವು ನಿರಾಶ್ರಿತರ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಜಾರಪ್ಪ ಅವರ ಕುಟುಂಬದಲ್ಲಿ 7 ಜನ ಸದಸ್ಯರಿದ್ದರೆ, ವಸಂತ ಎಂಬವರ ಕುಟುಂಬದಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ ಒಟ್ಟು 5 ಜನ ಸದಸ್ಯರಿದ್ದಾರೆ. ಈ ಕುಟುಂಬಕ್ಕೆ ಪ್ರಖ್ಯಾತಿ ಯುವತಿ ಮಂಡಲ ಹಾಗೂ ಮುಕ್ವೆ ಫ್ರೆಂಡ್ಸ್ ಕ್ಲಬ್ ಊರವರಿಂದ ಸಂಗ್ರಹಿಸಿದ 22 ಸಾವಿರ ರೂ. ನೆರವನ್ನು ನೀಡಿ ಸಾಂತ್ವನ ಹೇಳಿದರು.
ಯುವತಿ ಮಂಡಲದ ಗೌರವ ಸಲಹೆಗಾರರಾದ ವಿದ್ಯಾ ನಾಯಕ್, ಸರೋಜಿನಿ ಪುರುಷರಕಟ್ಟೆ, ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಸದಸ್ಯರಾದ ಖುಷಿತಾ ನರಿಮೊಗರು, ಪ್ರಿಯಾ ಕೂಡುರಸ್ತೆ, ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಕೀರ್ತೀಶ್ ಬಂಗೇರ, ಕಾರ್ಯದರ್ಶಿ ಸುಭಾಶ್ ಅಳಕೆ, ಸದಸ್ಯ ಅಭಿ ಪುರುಷರಕಟ್ಟೆ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ., ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.