ನರಹರಿ ಪರ್ವತ: ಅಮಾವಾಸ್ಯೆ ವಿಶೇಷ ತೀರ್ಥಸ್ನಾನ
Team Udayavani, Aug 12, 2018, 1:20 PM IST
ಬಂಟ್ವಾಳ : ಪಾಣೆಮಂಗಳೂರು ರಾ.ಹೆ.ಯ, ಸಮುದ್ರ ಮಟ್ಟದಿಂದ ಒಂದು ಸಹಸ್ರ ಅಡಿ ಎತ್ತರದ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆ. 11ರಂದು ಆಟಿ ಆಮಾವಾಸ್ಯೆ ವಿಶೇಷ ತೀರ್ಥಸ್ನಾನ ನಡೆಯಿತು. ಮುಂಜಾನೆ ಸೂರ್ಯ ಮೂಡುವ ಮುನ್ನವೇ ಆರಂಭವಾದ ಜನ ಪ್ರವಾಹ ಅಪರಾಹ್ನದ ಹೊತ್ತಿನ ತನಕವೂ ಆಗಮಿಸುತ್ತಲೇ ಇತ್ತು. ಸಹಸ್ರಾರು ಮಂದಿ ಭಕ್ತರು ಬೆಟ್ಟವನ್ನೇರಿ ಬಂದು ತೀರ್ಥಕೊಳಕ್ಕೆ ವೀಳ್ಯದೆಲೆ ಮತ್ತು ಹಣ್ಣು ಅಡಿಕೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಶ್ರೀ ವಿನಾಯಕ, ನರಹರಿ ಸದಾಶಿವ, ನಾಗರಾಜನಿಗೆ ಭಕ್ತರು ಪೂಜೆ ಸಲ್ಲಿಸುವ ಮೂಲಕ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನ ನಡೆಸಿ ತಮ್ಮ ಹರಕೆಯನ್ನು ಸಲ್ಲಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಪ್ರಶಾಂತ್ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಆತ್ಮರಂಜನ್ ರೈ ಮತ್ತು ಪದಾಧಿಕಾರಿಗಳು ವಿಶೇಷ ತೀರ್ಥ ಸ್ನಾನದ ವ್ಯವಸ್ಥೆಯನ್ನು ನಿರ್ವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.