ಕಡಬ ತಾಲೂಕು ಕಂದಾಯ ಅಧಿಕಾರಿಗಳ ಹಾಜರಾತಿ ಕಡ್ಡಾಯ
Team Udayavani, Jul 13, 2019, 5:00 AM IST
ಸುಳ್ಯ: ಹೊಸದಾಗಿ ರೂಪು ಗೊಂಡಿರುವ ಕಡಬ ತಾಲೂಕಿಗೆ ಸೇರ್ಪಡೆಗೊಂಡಿರುವ ಸುಳ್ಯದ ಏಳು ಗ್ರಾಮಗಳ ಕಂದಾಯ ಇಲಾಖೆಗೆ ಸಂಬಂಧಿಸಿ ಉತ್ತರ ನೀಡಲು ಕಡಬ ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಯ ತಾ.ಪಂ. ಸಾಮಾನ್ಯ ಸಭೆ, ಕೆಡಿಪಿ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾ.ಪಂ. ಮಾಸಿಕ ಕೆಡಿಪಿ ಸಭೆಯು ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಎಡಮಂಗಲದಲ್ಲಿ ಅಂಬೇಡ್ಕರ್ ಭವನಕ್ಕೆ ಗುರುತಿಸಿದ ಸ್ಥಳದ ಕುರಿತಂತೆ ಉಪಾಧ್ಯಕ್ಷೆ ಶುಭದಾ ಎಸ್. ರೈ ಅವರ ಪ್ರಶ್ನೆಗೆ, ಕಡತ ಕಡಬ ಕಂದಾಯ ಇಲಾಖೆಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದಾಗ ಈ ಆಗ್ರಹ ಕೇಳಿ ಬಂತು. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು, ಸುಳ್ಯದ ಏಳು ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಯಾಗಿದೆ. ಅಲ್ಲಿನ ಕಂದಾಯ ಇಲಾಖೆ ಕೆಲಸಗಳು ಕಡಬ ತಾಲೂಕು ಕಚೇರಿಗೆ ವರ್ಗಾವಣೆ ಆಗಿದೆ. ಆದರೆ ತಾ.ಪಂ. ವ್ಯಾಪ್ತಿ ಸುಳ್ಯದಲ್ಲೇ ಇರುವ ಕಾರಣ ತಾ.ಪಂ. ಸಭೆಗಳಿಗೆ ಏಳು ಗ್ರಾಮಕ್ಕೆ ಒಳಪಟ್ಟಂತೆ ಕಡಬ ಕಂದಾಯ ಅಧಿಕಾರಿಗಳು ಹಾಜರಿರಬೇಕು ಎಂದರು.
ಸಿಕ್ಕ ಸಿಕ್ಕಲ್ಲಿ ಕೆಎಫ್‌ಡಿಸಿ ಕಟ್ಟಡ
ತಾ.ಪಂ. ಅಧೀನದ ಕಮ್ಯುನಿಟಿ ಡೆವಲಪ್‌ಮೆಂಟ್ ಪ್ರಾಜೆಕ್ಟ್ ವಿವಿಧ ಇಲಾಖೆಗಳಿಗೆ ವಸತಿಗೃಹದ ಸ್ಥಳದಲ್ಲಿ ಕೆಎಫ್‌ಡಿಸಿ ವಸತಿಗೃಹಗಳು ಇರುವ ಬಗ್ಗೆ ಚರ್ಚೆ ಸಂದರ್ಭ, ನಗರದಲ್ಲಿ ತಾ.ಪಂ.ಗೆ ಒಳಪಟ್ಟ ಖಾಲಿ ಜಾಗದಲ್ಲಿ ಕೆಎಫ್‌ಡಿಸಿಯವರು ತಮ್ಮಗಿಷ್ಟ ಬಂದಂತೆ ಕಟ್ಟಡ ಕಟ್ಟಿದ್ದಾರೆ. ಕೆಲ ಬಾರಿ ನಾವೇ ಕಾಮಗಾರಿ ನಿಲ್ಲಿಸಿದ್ದೇವೆ ಎಂದು ಪಿಡಬ್ಲೂéಡಿ ಅಧಿಕಾರಿ ಎಸ್.ಎಸ್. ಹುಕ್ಕೇರಿ ಹೇಳಿದರು.
2004ರಿಂದ ಕಟ್ಟಡ ಕಟ್ಟಿರುವ ಜಾಗದ ದಾಖಲೆ ಸಲ್ಲಿಸುವಂತೆ ಕೆಎಫ್‌ಡಿಸಿಗೆ ನೋಟಿಸ್ ನೀಡಲಾಗುತ್ತಿದೆ. ಈ ಸಮಸ್ಯೆ ಬಗ್ಗೆ ರಾಧಾಕೃಷ್ಣ ಬೊಳ್ಳೂರು, ಚನಿಯ ಕಲ್ತಡ್ಕ ಮೊದಲಾದವರು ಧ್ವನಿಗೂಡಿಸಿದರು. ಸಭೆ ಮುಗಿದ ಅನಂತರ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಲು ನಿರ್ಧರಿಸಲಾಯಿತು.
94ಸಿ ತಿರಸ್ಕೃತ ಅರ್ಜಿ ಮರು ಪರಿಶೀಲನೆ
94ಸಿಯಲ್ಲಿ 10,235 ಅರ್ಜಿ ಸ್ವೀಕೃತಗೊಂಡಿದ್ದು, ಅದರಲ್ಲಿ 5,082 ಅರ್ಜಿ ಮಂಜೂರುಗೊಂಡಿದೆ. 4703 ಅರ್ಜಿ ತಿರಸ್ಕೃತಗೊಂಡಿದೆ. ಈ ಹಿಂದೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಅವರ ನೀಡಿದ ಸೂಚನೆ ಪ್ರಕಾರ ತಿರಸ್ಕೃತ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿ ಪರಿಶೀಲನೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಕಂದಾಯ ಇಲಾಖಾಧಿಕಾರಿ ದೀಪಕ್ ಮಾಹಿತಿ ನೀಡಿದರು.
ದಾಸ್ತಾನು ದಾಖಲು ಹೊಣೆ
ಅಮರಮುಟ್ನೂರು ಸರಕಾರಿ ಶಾಲೆಯ ಬಿಸಿ ಊಟದ ದಾಸ್ತಾನು ವಹಿಯಲ್ಲಿ ದಾಖಲಿಸ್ಪಟ್ಟಿರುವುದಕ್ಕಿಂತ ಹೆಚ್ಚುವರಿಯಾಗಿ ದಾಸ್ತಾನು ಕಂಡು ಬಂದಿರುವ ವಿಚಾರ ಪ್ರಸ್ತಾವಗೊಂಡು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಅಧಿಕಾರಿಗಳು ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಹೆಚ್ಚುವರಿ ದಾಸ್ತಾನು ಅನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ದೇವರಾಜ ಮುತ್ಲಾಜೆ ಹೇಳಿದರು. ವಿವಿಧ ಶಾಲೆಗಳಲ್ಲಿ ಅಕ್ಷರ ದಾಸೋಹ ಸಾಮಗ್ರಿ ದಾಸ್ತಾನು ನಿರ್ವಹಣೆ ಸಮರ್ಪಕ ಆಗಿಲ್ಲ ಎನ್ನುವ ದೂರು ಇರುವ ಬಗ್ಗೆ ರಾಧಾಕೃಷ್ಣ ಬೊಳ್ಳೂರು, ಚನಿಯ ಕಲ್ತಡ್ಕ ಪ್ರಸ್ತಾವಿಸಿದರು. ಉತ್ತರಿಸಿದ ಬಿಇಒ ಮಹಾದೇವ, ಶಿಕ್ಷಕರು ಈ ಕೆಲಸ ನಿರ್ವಹಿಸಬಾರದು. ಮುಖ್ಯ ಅಡುಗೆಯವರೆ ಇದರ ಜವಬ್ದಾರಿ ನಿರ್ವಹಿಸಬೇಕು ಎಂದು ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಆಹಾರ ಗುಣಮಟ್ಟದ, ಅಡುಗೆ ವ್ಯವಸ್ಥೆ ಬಗ್ಗೆ ಮುಖ್ಯಶಿಕ್ಷಕರು ನಿಗಾ ಇರಿಸುವಂತೆ ತಿಳಿಸಲಾಗಿದೆ ಎಂದರು.
ಅಕ್ಕಿ, ಇತರೆ ಸಾಮಗ್ರಿಗಳಿಗೆ ಗುಗ್ಗುರು ಕಾಟ ಇರುವ ಬಗ್ಗೆಯು ಪ್ರಸ್ತಾವಗೊಂಡಿತ್ತು. 10 ದಿನಗಳಿಗೊಮ್ಮೆ ಸ್ಟಾಕ್ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಾ.ಪಂ. ಇಒ ಅವರು ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚಿಸಿದರು.
110 ಕೆ.ವಿ. ಸಬ್‌ಸ್ಟೇಷನ್ ವರದಿ ಸಲ್ಲಿಕೆ
110 ಕೆ.ವಿ. ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಸಂಬಂಧಿಸಿ ತಾಲೂಕಿನ ವಿದ್ಯುತ್ ಪೂರೈಕೆ, ಬೇಡಿಕೆ, ಸಾಮರ್ಥ್ಯ ಕುರಿತಂತೆ ಕೆಪಿಟಿಸಿಎಲ್ ವತಿಯಿಂದ ವರದಿ ಕೇಳಿದ್ದು, ಅದನ್ನು ಸಲ್ಲಿಸಲಾಗಿದೆ. ಲೈನ್ ಮಾರ್ಗ ಹಾದುಹೋಗುವ ಜಮೀನಿಗೆ ಸಂಬಂಧಿಸಿ ಡಿಸಿ ಕೋರ್ಟ್‌ನಲ್ಲಿ ಎರಡು ಆಕ್ಷೇಪಣೆ ಅರ್ಜಿಗಳು ವಿಚಾರಣೆ ಹಂತದಲ್ಲಿವೆ ಎಂದು ಎಇ ಹರೀಶ್ ನಾಯ್ಕ ಅವರು ಹೇಳಿದರು.
ಬೆಳ್ಳಾರೆ ಹಾಸ್ಟೆಲ್‌ಗೆ ಸಿಸಿ ಕೆಮರಾ
ಬೆಳ್ಳಾರೆ ಸರಕಾರಿ ಹಾಸ್ಟೆಲ್ ಆವರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಿರುವ ಪ್ರಕರಣದ ಬಗ್ಗೆ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಸ್ತಾವಿಸಿದರು. ಹಾಸ್ಟೆಲ್ ಪರಿಸರದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ರಕ್ಷಣಾ ಬೇಲಿ ಹಾಕಲಾಗಿದೆ. ಘಟನೆ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬೀಟ್ ವ್ಯವಸ್ಥೆ ಮೂಲಕ ಮಹಿಳಾ ಪೊಲೀಸ್ ಸಿಬಂದಿಯನ್ನು ನಿಯೋಜಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಹೇಳಿದರು. ಇಒ ಮಧುಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇತನಕ್ಕೆ ಕುತ್ತು ಸುದಿನ ವರದಿ ಪ್ರಸ್ತಾವ
ಆಧಾರ್ ಮತ್ತಿತ್ತರ ಸಮಸ್ಯೆಗಳಿಂದ ತಾಲೂಕಿನ 89 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಕುತ್ತು ಬಂದಿರುವ ಕುರಿತಂತೆ ಶುಕ್ರವಾರ ಪ್ರಕಟಗೊಂಡ “ಉದಯವಾಣಿ’ ಸುದಿನ ವರದಿ ಬಗ್ಗೆ ಪ್ರಸ್ತಾವಿಸಿದ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಶಿಕ್ಷಣಾಧಿಕಾರಿ ಮಹಾದೇವ, 18 ಸಾವಿರ ವಿದ್ಯಾರ್ಥಿಗಳ ಪೈಕಿ 124 ಮಂದಿಗೆ ಆಧಾರ್, ಜಾತಿ, ಆದಾಯ ಮೊದಲಾದ ದಾಖಲೆಗಳಲ್ಲಿ ಸಮಸ್ಯೆ ಉಂಟಾಗಿತ್ತು. ಕೆಲವನ್ನು ಬಗೆಹರಿಸಿದ್ದು, 89 ಮಂದಿಯ ಅರ್ಜಿ ಅಪ್ಡೆàಟ್‌ಗೆ ಬಾಕಿ ಇದೆ. ಇದರ ಬಗ್ಗೆ ಪ್ರತಿದಿನವು ಗಮನ ನೀಡುತ್ತಿದ್ದೇವೆ. ಆಧಾರ್ ಕಾರ್ಡ್‌ನಲ್ಲಿನ ಲೋಪ ವಿಚಾರ ನಮ್ಮ ವ್ಯಾಪ್ತಿಗೆ ಬಾರದಿರುವ ಕಾರಣ ಆ ಸಮಸ್ಯೆ ಸರಿಪಡಿಸುವಿಕೆ ನಮಗೆ ಅಸಾಧ್ಯ ಎಂದರು. ಉತ್ತರಿಸಿದ ಕಂದಾಯ ಇಲಾಖೆಯ ದೀಪಕ್, ತಾಲೂಕು ಕಚೇರಿ, ನ.ಪಂ.ನಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲಾಗಿದೆ. ತಿದ್ದುಪಡಿ, ನೋಂದಣಿ ಸಮಸ್ಯೆ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಸಮಸ್ಯೆ ತೀವ್ರತೆ ಬಿಚ್ಚಿಟ್ಟ ಅಧ್ಯಕ್ಷರು!
ಆಧಾರ್ ಕಾರ್ಡ್ ನೋಂದಣಿ ಕುರಿತಂತೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನಾನು ಐದು ಬಾರಿ ನೋಂದಣಿಗೆ ಬಂದಿದ್ದೇನೆ. ಆದರೂ ಆಗಿರಲಿಲ್ಲ. ಕೊನೆಗೆ ನ.ಪಂ. ಕೇಂದ್ರದಲ್ಲಿ ಹಳೆ ನೋಂದಣಿ ಬದಲಾಯಿಸಿ ಹೊಸ ನೋಂದಣಿ ಮಾಡಿದೆ. ಅರ್ಧ ತಾಸು ಪ್ರಯತ್ನದ ಬಳಿಕ ಹೇಗೋ ನೋಂದಣಿ ಪ್ರತಿ ಸಿಕ್ಕಿ, ಕೆಲ ದಿನಗಳಲ್ಲಿ ಆಧಾರ್ ಕಾರ್ಡ್ ಕೈ ಸೇರಿತ್ತು ಎಂದು ಆಧಾರ್ ಸಮಸ್ಯೆ ತೀವ್ರತೆಯನ್ನು ಬಿಚ್ಚಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.