![Cancer ಔಷಧವನ್ನೇ ಡ್ರಗ್ ಆಗಿ ಬಳಸುವ ಯುವಕರು: ಅಶೋಕ್](https://www.udayavani.com/wp-content/uploads/2024/12/ashok-a-415x248.jpg)
ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಅಪರಿಚಿತ ಗುಂಪು
Team Udayavani, Aug 4, 2023, 10:48 PM IST
![ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಅಪರಿಚಿತ ಗುಂಪು](https://www.udayavani.com/wp-content/uploads/2023/08/auto-1-620x351.jpg)
ಬೆಳ್ತಂಗಡಿ: ಆಟೋ ಚಾಲಕನೋರ್ವ ಯುವತಿಯೋರ್ವಳನ್ನು ಉಜಿರೆಯಿಂದ ಧರ್ಮಸ್ಥಳಕ್ಕೆ ಬಾಡಿಗೆಗೆ ಕರೆದೊಯ್ಯುದ್ದು, ವಾಪಾಸ್ಸು ಉಜಿರೆ ಕಡೆಗೆ ತೆರಳುತ್ತಿರುವ ಸಮಯ ಅಪರಿಚಿತರ ಗುಂಪೊದು ಆಟೋ ರಿಕ್ಷವನ್ನು ತಡೆದು ಹಲ್ಲೆ ಮಾಡಿದ ಘಟನೆ ಆ.2ರಂದು ರಾತ್ರಿ ನಡೆದಿದೆ.
ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಮಹಮ್ಮದ್ ಆಸಿಕ್ ಹಲ್ಲೆಗೊಳಗಾದ ಆಟೋ ಚಾಲಕ.
ಬೆಂಗಳೂರಿನ ನಿವಾಸಿ ವಿದ್ಯಾರ್ಥಿನಿ ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಆ.2ರಂದು ರಾತ್ರಿ ತನ್ನ ಊರಾದ ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಮಹಮ್ಮದ್ ಆಸಿಕ್ ಆಟೋದಲ್ಲಿ ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಬಾಡಿಗೆಗೆಂದು ಪ್ರಯಾಣಿಸಿದ್ದಳು.
ರಾತ್ರಿ 9 ಗಂಟೆಗೆ ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ತಂಡವೊಂದು ರಿûಾ ಚಾಲಕನಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದೆ. ಚಾಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಧರ್ಮಸ್ಥಳ ಉಪನಿರೀಕ್ಷಕರಾದ ಅನಿಲ್ ಕುಮಾರ್ ಮತ್ತು ತಂಡ ಧರ್ಮಸ್ಥಳ ಸುತ್ತಮುತ್ತ ಸಿಸಿ ಕ್ಯಾಮರಾ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಟಾಪ್ ನ್ಯೂಸ್
![Cancer ಔಷಧವನ್ನೇ ಡ್ರಗ್ ಆಗಿ ಬಳಸುವ ಯುವಕರು: ಅಶೋಕ್](https://www.udayavani.com/wp-content/uploads/2024/12/ashok-a-415x248.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.