ಬಿ.ಸಿ. ರೋಡ್, ಬಂಟ್ವಾಳ ಪೇಟೆ ರಸ್ತೆಗಳಲ್ಲಿ ಹೊಂಡ
ಸುಗಮ ವಾಹನ ಸಂಚಾರಕ್ಕೆ ಸಮಸ್ಯೆ ; ಶೀಘ್ರ ದುರಸ್ತಿಗೆ ಆಗ್ರಹ
Team Udayavani, Jan 23, 2020, 11:29 PM IST
ಬಂಟ್ವಾಳ : ಗ್ರಾಮೀಣ ಭಾಗ ಗಳಲ್ಲಿ ಸಾಮಾನ್ಯವಾಗಿ ರಸ್ತೆಗಳಲ್ಲಿ ಹೊಂಡ ಬಿದ್ದರೆ ಅದರ ದುರಸ್ತಿಗೆ ಕ್ರಮ ಕೈಗೊಳ್ಳುವುದು ಕಡಿಮೆ. ಆದರೆ ಪ್ರಸ್ತುತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ, ಬಿ.ಸಿ. ರೋಡ್ ಪೇಟೆಯ ರಸ್ತೆಗಳಲ್ಲಿ ಹೊಂಡ ಸೃಷ್ಟಿಯಾಗಿದ್ದರೂ, ಕನಿಷ್ಠ ತೇಪೆ ಕಾರ್ಯವೂ ಆಗಿಲ್ಲ ಎಂಬ ಆರೋಪಗಳಿವೆ.
ಬಂಟ್ವಾಳ ನಗರದಲ್ಲಿ ಸಾಗುವ ಮುಖ್ಯ ರಸ್ತೆಯ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಿ.ಸಿ. ರೋಡ್-ಕೈಕುಂಜೆ ರಸ್ತೆಯ ಬಿ.ಸಿ. ರೋಡ್ ಜಂಕ್ಷನ್‌ನಲ್ಲೇ ಸಾಕಷ್ಟು ಹೊಂಡಗಳು ಸೃಷ್ಟಿ ಯಾಗಿದ್ದು, ವಾಹನಗಳು ಎದುಬಿದ್ದು ಸಾಗುತ್ತಿವೆ. ಇದರ ಜತೆಗೆ ಇತರ ಒಳರಸ್ತೆಗಳ ಹೊಂಡಗಳಿಗೂ ಮುಕ್ತಿ ನೀಡಬೇಕಿದೆ.
ಬಿ.ಸಿ. ರೋಡ್ ಜಂಕ್ಷನ್‌ನಿಂದ ಮಿನಿ ವಿಧಾನಸೌಧದವರೆಗೂ ಸಾಕಷ್ಟು ಹೊಂಡ ಗಳಿವೆ. ತಾ.ಪಂ. ಸಂಪರ್ಕ ರಸ್ತೆಯಲ್ಲೂ ಹೊಂಡ ಸೃಷ್ಟಿಯಾಗಿದೆ. ಶಾಶ್ವತ ಪರಿಹಾರಕ್ಕೆ ಯೋಜನೆ ರೂಪು ಗೊಂಡಿದ್ದರೂ ತಾತ್ಕಾಲಿಕ ಪರಿ ಹಾರ ನೀಡುವ ನಿಟ್ಟಿನಲ್ಲಿ ಕನಿಷ್ಠ ತೇಪೆ ಕಾರ್ಯವನ್ನಾದರೂ ಮಾಡಬೇಕಿದೆ ಎಂದು ಸಾರ್ವ ಜನಿಕರು ಆಗ್ರಹಿಸುತ್ತಿದ್ದಾರೆ.
ಬಂಟ್ವಾಳ ಬೈಪಾಸ್ ಮೂಲಕ ಸಾಗುವ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆ ಯುತ್ತಿರುವುದರಿಂದ, ಹೆದ್ದಾರಿಯಲ್ಲಿ ಸಾಗ ಬೇಕಿರುವ ಹೆಚ್ಚಿನ ಸಂಖ್ಯೆಯ ವಾಹನಗಳು ಬಂಟ್ವಾಳ ಪೇಟೆ ಮೂಲಕವೇ ಸಾಗುತ್ತಿರುವುದರಿಂದ ಹೊಂಡ ಮುಚ್ಚಲು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
ಮಳೆಗಾಲದ ದುರಸ್ತಿಯಾಗಿಲ್ಲ !
ಕಳೆದ ಮಳೆಗಾಲದಲ್ಲೇ ಈ ಹೊಂಡಗಳು ಕಂಡುಬಂದಿದ್ದು, ಅದರಲ್ಲಿ ನೀರು ನಿಂತ ಪರಿಣಾಮ ವಾಹನಗಳು ಸಾಗುವ ವೇಳೆ ನೀರು ಎರಚಿ ಪಾದಾಚಾರಿಗಳು ಒದ್ದೆಯಾದ ಘಟನೆಯೂ ಸಂಭವಿಸಿತ್ತು. ನೀರು ನಿಂತು ಹೊಂಡಗಳಿರುವುದು ತಿಳಿಯದೆ ವಾಹನ ಚಾಲಕರು, ಸವಾರ ರಿಗೂ ತೊಂದರೆಯುಂಟಾಗಿತ್ತು.
ಸಾಮಾನ್ಯವಾಗಿ ಮಳೆ ಕಾರಣದಿಂದ ಹಾನಿಯಾದ ರಸ್ತೆಗಳಿಗೆ ತೇಪೆ ಕಾರ್ಯ ನಡೆಯುತ್ತದೆಯಾದರೂ ಇಲ್ಲಿ ತೇಪೆ ಕಾರ್ಯವೂ ನಡೆದಿಲ್ಲ. ಹೆದ್ದಾರಿ ಸಮಸ್ಯೆ ಗಳಿಗೆ ಮುಕ್ತಿ ಸಿಕ್ಕರೂ ನಗರ ಒಳಭಾಗದ ರಸ್ತೆಗಳಲ್ಲಿ ತೊಂದರೆ ಸಾಕಷ್ಟಿದೆ. ಈ ಕುರಿತು ಪುರಸಭೆ ಗಮನಹರಿಸಬೇಕಿದೆ ಎಂದು ಜನತೆ ಅಭಿಪ್ರಾಯಿಸುತ್ತಿದ್ದಾರೆ.
ರಸ್ತೆಯಲ್ಲೇ ಮ್ಯಾನ್‌ಹೋಲ್
ಬಿ.ಸಿ. ರೋಡ್‌ನಿಂದ ಬಂಟ್ವಾಳ ಪೇಟೆಗೆ ಸಾಗುವ ರಸ್ತೆಯಲ್ಲಿ ಮೇಲ್ಭಾಗಕ್ಕೆ ಕಾಣುವ ರೀತಿಯಲ್ಲಿ ರಸ್ತೆಯಲ್ಲೇ ಮ್ಯಾನ್‌ಹೋಲ್‌ಗಳಿದ್ದು, ಇದೂ ವಾಹನಗಳ ಸಂಚಾರಕ್ಕೆ ತೊಂದರೆ ನೀಡುತ್ತಿದೆ. ರಸ್ತೆಯ ಹೊಂಡಗಳು, ಮ್ಯಾನ್‌ಹೋಲ್‌ಗಳು ದೊಡ್ಡ ವಾಹನಗಳ ಸಂಚಾರಕ್ಕೆೆR ತೊಂದರೆ ನೀಡದೇ ಇದ್ದರೂ ಸಣ್ಣ ವಾಹನಗಳಿಗೆ ಸಾಕಷ್ಟು ತೊಂದರೆ ನೀಡುತ್ತಿವೆ. ಪೈಪ್ ಕಾಮಗಾರಿ ವೇಳೆ ರಸ್ತೆಯನ್ನು ಅಗೆದು ಹಾಗೇ ಬಿಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅನುದಾನ ಬಂದರೆ ದುರಸ್ತಿ
ಅನುದಾನ ಬಂದ ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಯಾವುದೇ ಅನುದಾನಗಳು ಬಂದಿಲ್ಲ. ಶಾಸಕರ ನಗರ ಸುಂದರೀಕರಣ ಯೋಜನೆಯಲ್ಲಿ ಬಿ.ಸಿ. ರೋಡ್‌ನ ಕೈಕುಂಜೆ ರಸ್ತೆಯ ಪ್ರಾರಂಭದ ಭಾಗಕ್ಕೆ 2 ಕೋ. ರೂ.ಗಳ ಕ್ರಿಯಾಯೋಜನೆ ಆಗಿದೆ ಎನ್ನಲಾಗುತ್ತಿದೆ. ಅನುದಾನ ಬಂದರೆ ರಸ್ತೆಗಳ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗುವುದು.
- ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.