ಡಾ| ಯಶೋವರ್ಮ ಪಂಚಭೂತಗಳಲ್ಲಿ ಲೀನ
Team Udayavani, May 25, 2022, 12:48 AM IST
ಬೆಳ್ತಂಗಡಿ: ಶಿಕ್ಷಣ ಎಂದರೆ ಶಿಸ್ತು ಮತ್ತು ಉತ್ಕೃಷ್ಟ ಸ್ಥಾನಮಾನ ಎಂಬ ನಿಲುವಿನೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗೆ ಬ್ರ್ಯಾಂಡ್ ತಂದುಕೊಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯ
ದರ್ಶಿಯಾಗಿದ್ದ ಡಾ| ಬಿ. ಯಶೋವರ್ಮ (67)ಅವರು ಮಂಗಳವಾರ ಪಂಚಭೂತಗಳಲ್ಲಿ ಲೀನರಾದರು.
ಅಲ್ಪಕಾಲದ ಅಸೌಖ್ಯದಿಂದ ಮೇ 22ರಂದು ತಡರಾತ್ರಿ ಸಿಂಗಾಪುರದಲ್ಲಿ ಮೃತಪಟ್ಟ ಅವರ ಪಾರ್ಥಿವ ಶರೀರವು ಮೇ 24ರಂದು ಬೆಳಗ್ಗೆ 7ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸೇರಿತು. ಅಲ್ಲಿಂದ ವಿಶೇಷ ಆ್ಯಂಬುಲೆನ್ಸ್
ನಲ್ಲಿ ಚಾರ್ಮಾಡಿಗೆ ತಲುಪಿ ಅಲ್ಲಿನ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವಠಾರದಿಂದ ತೆರೆದ ಆ್ಯಂಬು
ಲೆನ್ಸ್‌ನಲ್ಲಿ ಉಜಿರೆ ವೃತ್ತದ ವರೆಗೆ ತಂದು ಬಳಿಕ ಅಲ್ಲಿಂದ ಸಾವಿರಾರು ವಿದ್ಯಾಭಿಮಾನಿಗಳ ಸಮ್ಮುಖದಲ್ಲಿ
ಎಸ್‌ಡಿಎಂ ಕಾಲೇಜು ಒಳಾಂಗಣಕ್ಕೆ ತಂದು ಎನ್‌ಸಿಸಿ ಕೆಡೆಟ್‌ಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.
ಡಿ. ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಹಾಗೂ ಕುಟುಂಬ ವರ್ಗ ಕಾಲೇಜು ಮಹಾದ್ವಾರದಲ್ಲಿ ಗೌರವ ವಂದನೆ ಸಲ್ಲಿಸಿದರು. ಆ ಬಳಿಕ ಗಣ್ಯರ ದರ್ಶನದ ಜತೆಗೆ ಕಾಲೇಜು ಶಿಕ್ಷಕ ವರ್ಗ, ಶಿಷ್ಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.
ಪುತ್ರರಿಂದ ಚಿತೆಗೆ ಅಗ್ನಿಸ್ಪರ್ಶ
ಪಾರ್ಥಿವ ಶರೀರವನ್ನು ಸಂಜೆ ಉಜಿರೆ ಗ್ರಾಮದ ನೀರ ಚಿಲುಮೆ ಬಳಿ ಇರುವ ಅವರ ನಿವಾಸ “ನಿನಾದ’ ವಠಾರದಲ್ಲಿ ಜೈನಾಗಮ ಪದ್ಧತಿಯಂತೆ ಹಿರಿಯರ ನಿರ್ದೇಶನದಂತೆ ಸಕಲ ವಿಧಿವಿಧಾನ ನೆರವೇರಿಸಿ ಪುತ್ರರಾದ ಪೂರಣ್ ವರ್ಮ ಹಾಗೂ ಕೆಯ್ಯೂರ್ ವರ್ಮ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಯಶೋವರ್ಮ ಅವರ ಪತ್ನಿ ಸೋನಿಯಾ ವರ್ಮ, ಕುಟುಂಬ ವಲಯದ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ನೀತಾ ರಾಜೇಂದ್ರ, ಅಮಿತ್ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಜಿತೇಶ್ ಕುಮಾರ್ ಹಾಗೂ ಯಶೋವರ್ಮ ಅವರ ಸಹೋದರರು, ಕುಟುಂಬದ ಬಂಧು ಗಳು ಅಂತಿಮ ನಮನ ಸಲ್ಲಿಸಿದರು.
ಗಣ್ಯರಿಂದ ಶ್ರದ್ಧಾಂಜಲಿ
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ನಾಯಕ್, ಭೋಜೇ ಗೌಡ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಹಂಪಿ ಕನ್ನಡ ವಿ.ವಿ. ನಿವೃತ್ತ ಕುಲಪತಿ ಪ್ರೊ| ಬಿ.ಎ.ವಿವೇಕ ರೈ, ಜಾನಪದ ವಿ.ವಿ. ನಿವೃತ್ತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ, ಮಂಗಳೂರು ವಿ.ವಿ. ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಗಂಗಾಧರ ಗೌಡ, ವಿನಯಕುಮಾರ್ ಸೊರಕೆ, ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮೂಡ ಮಾಜಿ ಅಧ್ಯಕ್ಷ ಕೆ. ಸುರೇಶ ಬಳ್ಳಾಲ್, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ರಾಜೇಂದ್ರ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಲಾ ಪೋಷಕ ಶ್ರೀಪತಿ ಭಟ್ ಮೂಡುಬಿದಿರೆ, ಮಂಗಳೂರು ವಿ.ವಿ. ರಿಜಿಸ್ಟ್ರಾರ್‌ಡಾ| ಕಿಶೋರ್ ಕುಮಾರ್, ನಿಟ್ಟಿ ವಿ.ವಿ. ಸಹ ಕುಲಾಧಿಪತಿ ಎಂ.ಎಸ್.ಮೂಡಿತ್ತಾಯ, ಮಂಗಳೂರು ವಿ.ವಿ.ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಪಿ.ಎಲ್. ಧರ್ಮ, ನಿಟ್ಟೆ ವಿ.ವಿ. ಉಪ ಕುಲಾಧಿಪತಿ ಎಂ.ಎಸ್. ಮೂಡಿತ್ತಾಯ, ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯ್ ಹೆಗ್ಡೆ, ಶಾರದಾ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಬರೋಡ ತುಳು ಕೂಟ ಅಧ್ಯಕ್ಷ, ಉದ್ಯಮಿ ಶಶಿಧರ್‌ಶೆಟ್ಟಿ ಬರೋಡಾ, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನೆ ಕಾರ್ಯ ನಿರ್ವಾ
ಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್.ಜನಾರ್ದನ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಉಪಕಾರ್ಯದರ್ಶಿ ಡಾ| ಸತೀಶ್ಚಂದ್ರ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು, ಸಿಬಂದಿ ವರ್ಗ, ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸಿದರು.
– ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಚಾರ್ಮಾಡಿಗೆ 3-45ಕ್ಕೆ ತಲುಪಿದ ಪಾರ್ಥಿವ ಶರೀರ
– ಸಂಜೆ 4-15: ಉಜಿರೆ ಪೇಟೆ ಪ್ರವೇಶ
-ಸಂಜೆ 4-35: ಉಜಿರೆ ಕಾಲೇಜಿನ ಕ್ಯಾಂಪಸ್
– 4-45ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ
– 5-45: ನಿನಾದ ನಿವಾಸಕ್ಕೆ ಪಾರ್ಥಿವ ಶರೀರ ಆಗಮನ
– ಪಂಚನಮಸ್ಕಾರ ಮಂತ್ರ ಪಠಿಸಿ ಜೈನಾಗಮ ಪದ್ಧತಿಯಂತೆ ಪುತ್ರರಿಂದ ಚಿತೆಗೆ ಅಗ್ನಿಸ್ಪರ್ಶ
– ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಕಂಬನಿ
– ಶಾಸಕ ಹರೀಶ್ ಪೂಂಜ ಅವರಿಂದ ಸಂಪೂರ್ಣ ವ್ಯವಸ್ಥೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.