![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 31, 2023, 6:26 PM IST
ಪುತ್ತೂರು : ಬಡಗನ್ನೂರು ಗ್ರಾಮದ ಕೊಯ್ಲದಲ್ಲಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಡಗನ್ನೂರಿನ ಕೊಯ್ಲ ಮನೆ ಶ್ರವಣ್ ಕೆ(20) , ಬಾಣಪದವು ಜಯಚಂದ್ರ (21), ನಿಡ್ಪಳ್ಳಿ ಡೊಬ್ಬಟ್ಟಗಿರಿಯ ಅಶೋಕ (24), ನಿಡ್ಪಳ್ಳಿ ಕಲ್ಲಮೂಲೆಯ ಪುನೀತ್ (20) ಎಂದು ಗುರುತಿಸಲಾಗಿದೆ.
ಬಂಧಿತರಿಂದ 1,55,925/ರೂ. ಮೌಲ್ಯದ ಅಡಿಕೆ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು, ಮತ್ತು ಆಟೋ ರಿಕ್ಷಾ ಸೇರಿದಂತೆ ಒಟ್ಟು 4,15,925/ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾರದ ಹಿಂದೆ ಆರೋಪಿಗಳು ಬಡಗನ್ನೂರು ಗ್ರಾಮದ ಕೊಯ್ಲ ಎಂಬಲ್ಲಿರುವ ನವೀನ್ ಕುಮಾರ್ ರೈ ಅವರಿಗೆ ಸೇರಿದ ಹಳೆ ಮನೆಯ ಕೊಟ್ಟಿಗೆಯ ಅಟ್ಟದಲ್ಲಿ ಎನ್ ಕೆ ಆರ್ ಎಂದು ಮಾರ್ಕ್ ಮಾಡಿ ಇಟ್ಟಿದ್ದ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಲಾಗಿದ್ದು, ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸತತ ಅಪರಾಧ ಪ್ರಕರಣ
ಪೊಲೀಸ್ ವೈಫಲ್ಯ : ಆತಂಕ?
ಬಡಗನ್ನೂರು ಗ್ರಾಮದಲ್ಲಿ ಕಳೆದ ಕೆಲ ಸಮಯಗಳಿಂದ ದರೋಡೆ, ಕಳ್ಳತನ ಪ್ರಕರಣ ಪದೇ ಪದೇ ಸಂಭವಿಸುತ್ತಿದೆ. ಒಂದು ಘಟನೆ ನಡೆದು ಪೊಲೀಸರು ಆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಇನ್ನೊಂದು ಪ್ರಕರಣ ನಡೆಯುತ್ತಿರುವುದು ಸ್ಥಳೀಯ ಪರಿಸರದಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಪರಿಸರದಲ್ಲಿ ಅಪರಾಧ ಪ್ರಕರಣಗಳಲ್ಲಿ ನಿರತರಾಗುತ್ತಿರುವವರಿಗೆ ಪೊಲೀಸ್ ಭಯ ಇಲ್ಲದಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.