

Team Udayavani, Jan 30, 2025, 1:02 PM IST
ಬಡಗನ್ನೂರು: ಕುಡಿಯುವ ನೀರಿಗಾಗಿ ಒಂದೇ ಮನೆಗೆ ಎರಡೆರಡು ನಳ್ಳಿ ಸಂಪರ್ಕಗಳಿದ್ದು ಅಂತವುಗಳ ತೆರವಿಗೆ ಒಳಮೊಗ್ರು ಗ್ರಾ. ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕುಡಿಯುವ ನೀರಿನ ಬಗ್ಗೆ ಪ್ರಸ್ತಾವಿಸಿದ ಸುಂದರಿ ಅವರು ಕೆಲವೊಂದು ಮನೆಗಳಲ್ಲಿ ಎರಡೆರಡು ನಳ್ಳಿ ನೀರಿನ ಸಂಪರ್ಕ ಇದೆ. ಕೊಳವೆ ಬಾವಿ ಇದ್ದವರ ಮನೆಗೂ ನಳ್ಳಿ ನೀರಿನ ಸಂಪರ್ಕ ಇದೆ ಎಂದಾಗ ಪ್ರತಿಕ್ರಿಯಸಿದ ಅಧ್ಯಕ್ಷೆ ನೀರಿನ ಸಮಿತಿ ಸಭೆ ಕರೆದು ಎಲ್ಲೆಲ್ಲಿ ಈ ರೀತಿ ಇದೆ ಎಂಬುದನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಅಂತಹ ಸಂಪರ್ಕಗಳನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.
ನೀರಿನ ಶುಲ್ಕ ಪಾವತಿಸಿ
ನೀರಿನ ಶುಲ್ಕ ಪಾವತಿಸದೆ ಬಾಕಿ ಇರಿಸಿಕೊಂಡವರಿಗೆ ಶುಲ್ಕ ಪಾವತಿಗೆ ಸೂಚನೆ ನೀಡಿದ್ದೇವೆ. ಹೆಚ್ಚು ಶುಲ್ಕ ಪಾವತಿಗೆ ಬಾಕಿ ಇರುವವರ ಸಂಪರ್ಕವನ್ನೂ ತಾತ್ಕಾಲಿಕವಾಗಿ ಕಡಿತ ಮಾಡಬೇಕಾಗುತ್ತದೆ. ನೀರಿನ ಶುಲ್ಕವನ್ನು ಶೀಘ್ರವಾಗಿ ಪಾವತಿಸುವಂತೆ ಪಿಡಿಒ ಮನ್ಮಥ ಅಜಿರಂಗಳ ತಿಳಿಸಿದರು.
ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಮೊದಲಾದವರು ವಿವಿಧ ಸಲಹೆಗಳನ್ನು ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಸಂಘಟಕರು ಗ್ರಾಮ ಪಂಚಾಯತ್‌ನಿಂದ ಅನುಮತಿಗಾಗಿ ಬಂದಾಗ ಕೆಲವೊಂದು ಷರತ್ತು ವಿ ಧಿಸಿ ಅನುಮತಿ ನೀಡುವುದು ಎಂದು ನಿರ್ಣಯಿಸಲಾಯಿತು.
ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸದಸ್ಯರುಗಳಾದ ಲತೀಫ್ ಕುಂಬ್ರ, ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ವನಿತಾ, ನಳಿನಾಕ್ಷಿ, ಶಾರದಾ, ಸಿಬಂದಿ ಕೇಶವ, ಗುಲಾಬಿ, ಜಾನಕಿ, ಲೋಕನಾಥ, ಮೋಹನ್ ಮತ್ತಿತರರು ಉಪಸ್ಥಿàತರಿದ್ದರು.
ಪ್ರಮುಖ ವಿಷಯಗಳು
– ದರ್ಬೆತ್ತಡ್ಕ, ಅಜ್ಜಿಕಲ್ಲು ಶಾಲೆಯ ಶಿಕ್ಷಕರ ಕೊರತೆ ನೀಗಿಸಿ: ಮಹೇಶ್ ರೈ ಕೇರಿ
– ಅಜ್ಜಿಕಲ್ಲು ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹರಿಸಿ: ಅಶ್ರಫ್
– ಪರ್ಪುಂಜ- ಕುಂಬ್ರ ರಸ್ತೆ ಬದಿ ಸ್ವತ್ಛಗೊಳಿಸಿ: ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ
– ತೆರಿಗೆ ವಸೂಲಿ ಅಭಿಯಾನ ನಡೆಸಲು ನಿರ್ಣಯ
ಸರಕಾರಿ ಬಸ್ಸು ಬೇಕು
ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರ ನಿಷೇಧದ ಬಳಿಕ ಈ ಭಾಗದ ಜನರ ಬೇಡಿಕೆಯಂತೆ ಪುತ್ತೂರಿನಿಂದ ದೇವಸ್ಯ ಮಾರ್ಗವಾಗಿ ಗುಮ್ಮಟೆಗದ್ದೆಗೆ ಸರಕಾರಿ ಬಸ್ಸು ಬಂದು ಹೋಗುತ್ತಿತ್ತು. ಆದರೆ ಈಗ ಸಂಚಾರ ನಿಲ್ಲಿಸಿದೆ ಎಂದು ಸದಸ್ಯೆ ನಳಿನಾಕ್ಷಿ ಸಭೆಯ ಗಮನಕ್ಕೆ ತಂದಾಗ ಬಸ್ ಸಂಚಾರದ ಬಗ್ಗೆ ಕೆಎಸ್‌ಆರ್‌ಟಿಸಿ ಹಾಗೂ ಶಾಸಕರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು.
Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ
Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
You seem to have an Ad Blocker on.
To continue reading, please turn it off or whitelist Udayavani.