ವಿದ್ಯಾರ್ಥಿಗಳ ಕೈಯಲ್ಲಿ ಶುಚಿಯಾಯಿತು ಬಾಲವನ
Team Udayavani, Jun 7, 2018, 2:30 PM IST
ಪರ್ಲಡ್ಕ : ಪುತ್ತೂರು ನಗರಸಭೆಯ ಸ್ವಚ್ಛತಾ ಕಾರ್ಯಕ್ರಮದಡಿ ಬುಧವಾರ ಪರ್ಲಡ್ಕ ಡಾ| ಶಿವರಾಮ ಕಾರಂತರ ಬಾಲವನದ ಮಕ್ಕಳ ಆಟದ ಮೈದಾನದ ಸ್ವಚ್ಛತಾ ಕೆಲಸ ನಡೆಯಿತು.
ನಗರಸಭೆ ಹಾಗೂ ಬಾಲವನದ ಜತೆಗೆ ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಕೈ ಜೋಡಿಸಿದರು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶ್ರಮದಾನದ ಮೂಲಕ ಮೈದಾನ, ಬಾಲವನದ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಬೆಳಗ್ಗಿಯಿಂದ ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಭಾಗವಹಿಸಿದರು. ಕೈಯಲ್ಲಿ ಪೊರಕೆ, ಹಾರೆ ಹಿಡಿದುಕೊಂಡು ಗುಡಿಸಿದರು, ಕಳೆ ಕಿತ್ತರು, ಕಸ ಹೆಕ್ಕಿದರು.
ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ನಂದಣ್ಣ, ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುರಂದರ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ, ಜೂನಿಯರ್ ಎಂಜಿನಿಯರ್ ಶ್ರೀಧರ್ ನಾಯಕ್, ನಗರಸಭೆ ಕಚೇರಿ ವ್ಯವಸ್ಥಾಪಕ ಚಂದ್ರ ಕುಮಾರ್, ಗ್ಯಾಲರಿ ಮೇಲ್ವಿಚಾರಕ ಸುಂದರ ನಾಯ್ಕ, ಸ್ಯಾನಿಟರಿ ದಫೇದಾರ್ ಬೊಮ್ಮಣ್ಣ ಮತ್ತು ಐತ್ತಪ್ಪ, ಗುತ್ತಿಗೆದಾರ ಚಿದಾನಂದ್, ಬಾಲವನದ ಮೇಲ್ವಿಚಾರಕ ಅಶೋಕ್, ಸ್ವರ್ಣಮಲೆ ಸ್ವಸಹಾಯ ಸಂಘದ ಸೀತಕ್ಕ ಮೊದಲಾದವರು ಉಪಸ್ಥಿತರಿದ್ದರು.
ಸ್ವಚ್ಛತಾ ಅಭಿಯಾನ
ಪರಿಸರ ದಿನದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಐದು ದಿನಗಳ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ. ಸರಣಿ ಕಾರ್ಯಕ್ರಮದ ಮೊದಲ ಹಂತವಾಗಿ ಮಂಗಳವಾರ ದರ್ಬೆ ಸಮೀಪದ ಪರ್ಲಡ್ಕ, ಪಾಂಗಲಾಯಿ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿಗೆ ಚಾಲನೆ ನೀಡಲಾಯಿತು. ಆಸುಪಾಸಿನ ಪ್ರತಿ ಮನೆಗಳಿಗೆ ತೆರಳಿದ ನಗರಸಭೆ ಅಧಿಕಾರಿ, ಸಿಬಂದಿ ಘನತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಘನತ್ಯಾಜ್ಯ ವಿಂಗಡಣೆ ಬಗ್ಗೆ ಸಂದೇಶ, ಜಾಗೃತಿ ಕರಪತ್ರಗಳನ್ನು ಹಂಚಿದರು. ಇದರ ಮುಂದುವರಿದ ಭಾಗವಾಗಿ ಬುಧವಾರ ಪರ್ಲಡ್ಕದ ಡಾ| ಕೆ. ಶಿವರಾಮ ಕಾರಂತರ ಬಾಲವನದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರಸಭೆಯ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ನಡೆಸಿದರು.
ಚಿಂದಿ ಆಯುವವರಿಗೆ ತರಬೇತಿ
ಸರಣಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ, ಚಿಂದಿ ಆಯುವ ವ್ಯಕ್ತಿಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಚಿಂದಿ ಆಯುವ ವ್ಯಕ್ತಿಗಳನ್ನು ಹುಡುಕಿ ಅವರಿಗೆ ತರಬೇತಿ ನೀಡುವ ವಿಶಿಷ್ಟ ಕಾರ್ಯಕ್ರಮವನ್ನೂ ಇದೇ ಅಭಿಯಾನದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಗುಜರಿ ಸಾಮಾನು ಖರೀದಿ ಅಂಗಡಿಗಳನ್ನು ಸಂಪರ್ಕಿಸಿ ಅವರಿಗೆ ಗುಜರಿ ವಸ್ತುಗಳನ್ನು ತಂದು ಮಾರುವ ಕಾರ್ಮಿಕರ ಪಟ್ಟಿ ತಯಾರಿಸಲಾಗುತ್ತಿದೆ. ಈ ಮೂಲಕ ಚಿಂದಿ ಆಯುವ ಮಂದಿಯನ್ನು ಒಟ್ಟುಗೂಡಿಸಿ ಅವರಿಗೆ ಜೂನ್ 11ರಂದು ತರಬೇತಿ ನೀಡಲಾಗುತ್ತದೆ. ಚಿಂದಿ ಆಯುವ ಸಂದರ್ಭ ಅನುಸರಿಸಬೇಕಾದ ವಿಧಾನಗಳು, ಆರೋಗ್ಯ ಸಂರಕ್ಷಣೆ ಕಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆ ಅಂಶಗಳನ್ನು ತರಬೇತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
ಜೂ. 11ರಂದು ಸಮಾರೋಪ
ಜೂನ್ 11ರಂದು ಬೃಹತ್ ಸ್ವಚ್ಛತಾ ಜಾಥಾ ನಡೆಸುವ ಮೂಲಕ ಕಾರ್ಯಕ್ರಮ ಸಮಾಪನಗೊಳ್ಳಲಿದೆ. ಅಂದು ಬೊಳುವಾರು ವೃತ್ತದಿಂದ ದರ್ಬೆ ವೃತ್ತದವರೆಗೆ ಜಾಥಾ ನಡೆಯಲಿದೆ. ನಗರಸಭೆ ಅಧಿಕಾರಿಗಳು, ಸಿಬಂದಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು. ಸ್ವಚ್ಛತೆಯ ಸಂದೇಶ ಸಾರುವ ಫಲಕಗಳ ಪ್ರದರ್ಶನ, ಕರಪತ್ರ ವಿತರಣೆ ಇತ್ಯಾದಿ ನಡೆಯಲಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುರಂದರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.