ಬಂಟ್ವಾಳ: ನಿರ್ಗತಿಕರಿಗೆ 2 ಹೊತ್ತು ಅನ್ನ ನೀಡುವ ಯುವಕ
Team Udayavani, Apr 30, 2021, 7:30 AM IST
ಬಂಟ್ವಾಳ: ಲಾಕ್‌ಡೌನ್ ಮಾದರಿಯ ಕರ್ಫ್ಯೂನಿಂದಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಮಂದಿಗೆ ತೊಂದರೆ ಉಂಟಾಗಿದ್ದು, ಅಂತಹ ನಿರ್ಗತಿಕರಿಗೆ ಯುವಕನೋರ್ವ ನಿತ್ಯ ಎರಡು ಹೊತ್ತು ಊಟ ನೀಡುತ್ತಿದ್ದು, ಅವರ ಮಾನವೀಯ ಗುಣ ಪ್ರಶಂಸೆಗೆ ಪಾತ್ರವಾಗಿದೆ.
ಬಿ.ಸಿ.ರೋಡ್‌ನ ಪರ್ಲಿಯಾ ನಿವಾಸಿ ಇಕ್ಬಾಲ್ ಪರ್ಲಿಯಾ ಅವರೇ ನಿರ್ಗತಿಕರಿಗೆ ಆಹಾರ ನೀಡುತ್ತಿರುವ ವ್ಯಕ್ತಿ. ಬಿ.ಸಿ.ರೋಡ್‌ನ ಬಸ್ ನಿಲ್ದಾಣದಲ್ಲಿರುವ ನಿರ್ಗತಿಕರು ಸೇರಿ ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಸುಮಾರು 14 ಮಂದಿ ನಿರ್ಗತಿಕರು, ಭಿಕ್ಷು ಕರಿದ್ದು, ಅವರಿಗೆ ಈಗ ನಿತ್ಯವೂ ಎರಡು ಹೊತ್ತಿನ ಊಟ ನೀಡುತ್ತಾರೆ.
ಭಿಕ್ಷಕರು ತಾವು ಭಿಕ್ಷೆ ಬೇಡಿ ಬಂದ ಹಣದಿಂದ ಹೊಟೇಲ್‌ಗೆ ಹೋಗಿ ಊಟ ಮಾಡುತ್ತಾರೆ. ಆದರೆ ಕರ್ಫ್ಯೂ ಸಂದರ್ಭ ಭಿಕ್ಷೆ ಬೇಡಲು ಜನವೂ ಇಲ್ಲ, ಊಟ ನೀಡು ವುದಕ್ಕೆ ಹೊಟೇಲ್‌ಗಳೂ ಇಲ್ಲ. ಹೀಗಾಗಿ ಅವರ ಹಸಿವನ್ನು ನೀಗಿಸುವ ದೃಷ್ಟಿ ಯಿಂದ ಇಕ್ಬಾಲ್ ಮನೆಯಲ್ಲೇ ಊಟವನ್ನು ತಯಾರಿಸಿ ತಂದು ನೀಡುತ್ತಿದ್ದಾರೆ.
ಬಂಟ್ವಾಳ ಪುರಸಭೆಯ ಎಂಜಿನಿಯರ್ ಅವರ ಸಹಾಯಕರಾಗಿ ದುಡಿಯುತ್ತಿರುವ ಇಕ್ಬಾಲ್ ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲೂ ಹಲವು ಮಂದಿಗೆ ನೆರವು ನೀಡಿದ್ದರು. ಕಳೆದ ವರ್ಷ ಇಂತಹ ನಿರ್ಗತಿಕರಿಗೆ ಪುರಸಭೆಯ ಮೂಲಕವೇ ಆಹಾರವನ್ನು ನೀಡಲಾಗಿತ್ತು. ಈ ಬಾರಿ ಇಕ್ಬಾಲ್ ಅವರೇ ಊಟ ನೀಡುತ್ತಿದ್ದು, ಜತೆಗೆ ಬೀದಿ ಬದಿಯ ನಾಯಿಗಳಿಗೆ ಬೇಕರಿ ತಿನಸುಗಳನ್ನೂ ಹಾಕುತ್ತಿದ್ದಾರೆ. ಅಕ್ಕಂದಿರು ಹಾಗೂ ಭಾವ ಸಹಕಾರ ನೀಡುತ್ತಿದ್ದಾರೆ. ಇದು ನಿರ್ಗತಿಕರಿಗೆ ನೆರವು ನೀಡಲು ಸಹಕಾರಿ ಎಂದು ಇಕ್ಬಾಲ್ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.