Bantwal: ಸೇತುವೆಯ ಸಾಮರ್ಥ್ಯ ತಪಾಸಣೆ ಯಂತ್ರ ಆಗಮನ
Team Udayavani, Sep 10, 2024, 12:30 PM IST
ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಸಾಮರ್ಥ್ಯ ಪರಿಶೀಲನೆಗಾಗಿ ಬೆಂಗಳೂರಿನಿಂದ ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀನದ ಸೇತುವೆ ತಪಾಸಣೆ ಯಂತ್ರವು ಆಗಮಿಸಿ ಸೋಮವಾರದಿಂದ ಸಾಮರ್ಥ್ಯ ತಪಾಸಣೆಯ ಕಾರ್ಯ ಆರಂಭಿಸಿದ್ದು, ಸುಮಾರು 3 ದಿನಗಳ ಕಾಲ ಈ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ.
ಸೇತುವೆಯಲ್ಲಿ 11 ಸ್ಪಾನ್‌ಗಳಿದ್ದು, ಪ್ರತಿಯೊಂದರ ಕೋರ್ ಮಾದರಿ ಪಡೆದು ಬಳಿಕ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿ ತಪಾಸಣೆ ಮಾಡಲಾಗುತ್ತದೆ. ಅವರು ಪರಿಶೀಲನ ವರದಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿ ದ.ಕ. ಡಿಸಿಗೆ ಒಪ್ಪಿಸಲಿದ್ದಾರೆ. ಬಳಿಕ ಡಿಸಿ ಸಂಚಾರದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಮೊದಲ ದಿನ 2 ಸ್ಪಾನ್‌ಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಆಗಾಗ ಮಳೆಯಾಗುತ್ತಿದ್ದು, ತಪಾಸಣೆ ವೇಗಕ್ಕೆ ಅಡ್ಡಿಯಾಗಿದೆ ಎಂದು ಮೂಲವು ತಿಳಿಸಿದೆ.
ಅಡ್ಡೂರು ಸೇತುವೆ ತಪಾಸಣೆಯ ಬಳಿಕ ಮಂಗಳೂರು ಉಪವಿಭಾಗ ವ್ಯಾಪ್ತಿಯ ಉಳಾಯಿಬೆಟ್ಟು, ಮರವೂರು, ಪಲಿಮಾರು ಸೇತುವೆಗಳ ತಪಾಸಣೆಯ ಕಾರ್ಯ ನಡೆಯಲಿದೆ. ಮೊದಲ ದಿನ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಗೋಕುಲ್‌ದಾಸ್, ಕಾರ್ಯನಿರ್ವಾಹಕ ಎಂಜಿನಿಯರ್ ಅಮರನಾಥ ಜೈನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಬಿ.ನಾಗರಾಜ್, ಸಹಾಯಕ ಎಂಜಿನಿಯರ್ ಹೇಮಂತ್‌ಕುಮಾರ್ ಮತ್ತಿತರರು ಸ್ಥಳದಲ್ಲಿದ್ದರು.
ಹೋರಾಟ ಸಮಿತಿ ರಚನೆ
ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದಿಂದ ತೊಂದರೆಯಾಗುತ್ತಿದ್ದು, ಸ್ಥಳೀಯರು ಬಸ್ಸು ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. ಬಳಿಕ ದ.ಕ.ಜಿಲ್ಲಾಧಿಕಾರಿಗಳು, ಮಂಗಳೂರು ಪೊಲೀಸ್ ಕಮೀಷನರ್ ಅವರು ಅಡ್ಡೂರಿಗೆ ಭೇಟಿ ನೀಡಿ ತಪಾಸಣ ವರದಿಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆ. 26ರಂದು ತಪಾಸಣಾ ಯಂತ್ರ ಆಗಮಿಸಲಿದೆ ಎಂದು ಹೇಳಲಾಗಿದ್ದು, ಯಂತ್ರದ ಆಗಮನ ವಿಳಂಬಕ್ಕೂ ಆಕ್ರೋಶ ವ್ಯಕ್ತವಾಗಿತ್ತು. ಸೋಮವಾರ ಪೊಳಲಿಯಲ್ಲಿ ಸ್ಥಳೀಯರು ಸಮಾಲೋಚನಾ ಸಭೆ ನಡೆಸಿ ಫಲ್ಗುಣಿ ಸೇತುವೆ ಹೋರಾಟ ಸಮಿತಿಯನ್ನೂ ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.