![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Feb 24, 2024, 10:07 PM IST
ಬಂಟ್ವಾಳ: ಮಂಗಳೂರಿನಲ್ಲಿ 2 ವರ್ಷಗಳಿಂದ ನ್ಯಾಯವಾದಿಯಾಗಿರುವ ಬಂಟ್ವಾಳದ ಬರಿಮಾರಿನ ಅನಿಲ್ ಜಾನ್ ಸಿಕ್ವೇರಾ ಅವರು 2023ರ ನವೆಂಬರ್‌ನಲ್ಲಿ ನಡೆದ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ.
ಕಿರಿಯ ವಯಸ್ಸಿಗೇ ನ್ಯಾಯಾಧೀಶರಾದ ಹಿರಿಮೆ ಅವರದು.
ಬಲ್ಯ ನಿವಾಸಿ ಎವರೆಸ್ಟ್ ಸಿಕ್ವೇರಾ ಹಾಗೂ ಐವಿ ಸಿಕ್ವೇರಾ ದಂಪತಿಯ ಪುತ್ರರಾದ ಅನಿಲ್ ಮಂಗಳೂರು ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು.
ಪ್ರಾರಂಭದಲ್ಲಿ ನ್ಯಾಯವಾದಿ ವರದರಾಜ ಅದಮ ಜತೆ ಕಿರಿಯ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಬಳಿಕ ನ್ಯಾಯವಾದಿಗಳಾದ ದೀಪಕ್ ಡಿ’ಸೋಜಾ ಹಾಗೂ ನವೀನ್ ಪಾಯಸ್ ಬಳಿ ಕಾರ್ಯನಿರ್ವಹಿಸುತ್ತಿದ್ದರು.
You seem to have an Ad Blocker on.
To continue reading, please turn it off or whitelist Udayavani.