Bantwal: ಬಿ.ಸಿ.ರೋಡ್ ಸರ್ಕಲ್ ಅಡ್ಡಾದಿಡ್ಡಿ!
ನಾಲ್ಕೂ ಭಾಗದಿಂದ ನುಗ್ಗಿ ಬರುವ ವಾಹನಗಳಿಗೆ ಸದ್ಯಕ್ಕೆ ತಡೆ ಇಲ್ಲ
Team Udayavani, Jan 6, 2025, 12:49 PM IST
ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಬಿ.ಸಿ.ರೋಡಿನ ಸರ್ಕಲ್ ಬಳಿ ನಡೆಯುತ್ತಿರುವ ಕಾಮಗಾರಿ ಅಯೋಮಯವಾಗಿದ್ದು, ಮುಂದಿನ ದಿನಗಳಲ್ಲಿ ಟ್ರಾಫಿಕ್ ಜಾಮ್, ಅಪಘಾತಗಳ ತಾಣವಾಗಬಹುದು ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಬಿ.ಸಿ.ರೋಡು ಸರ್ಕಲ್ ಬಳಿ ರಾ.ಹೆ.75ಕ್ಕೆ ಬಿ.ಸಿ.ರೋಡು-ಕಡೂರು ಹೆದ್ದಾರಿಯೂ ಸೇರುತ್ತಿದ್ದು, ಮತ್ತೂಂದೆಡೆ ಪಾಣೆಮಂಗಳೂರು ಭಾಗದಿಂದ ಆಗಮಿಸುವ ರಸ್ತೆ, ಬಂಟ್ವಾಳ ಪೇಟೆಯಿಂದ ಆಗಮಿಸಿದ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುತ್ತಿದೆ. ಹೀಗಾಗಿ ಸರ್ಕಲ್ ನಾಲ್ಕೂ ಭಾಗದಿಂದಲೂ ವಾಹನಗಳು ವೇಗವಾಗಿ ನುಗ್ಗಿ ತಾವು ಸಾಗಬೇಕಾದ ಹಾದಿಗೆ ತಿರುವು ಪಡೆದುಕೊಳ್ಳುತ್ತಿವೆ.
ಸದ್ಯಕ್ಕೆ ಕಾಮಗಾರಿ ನಡೆಯುತ್ತಿದೆ ಎಂದು ವಾಹನಗಳು ನಿಧಾನಕ್ಕೆ ಬಂದರೂ ಮುಂದೆ ಕಾಮಗಾರಿ ಪೂರ್ತಿಗೊಂಡ ಬಳಿಕ ವೇಗವಾಗಿ ನುಗ್ಗಿದರೆ ಅಪಘಾತದ ಸಾಧ್ಯತೆ ಹೆಚ್ಚಿದೆ. ವಾಹನಗಳು ನಿಧಾನಕ್ಕೆ ಸಾಗಿದರೆ ಟ್ರಾಫಿಕ್ ಜಾಮ್‌ನ ಆತಂಕವಿದೆ. ಮತ್ತೂಂದೆಡೆ ಒಂದು ಸಣ್ಣ ಅಪಘಾತ ಉಂಟಾದರೂ ವಾಹನಗಳು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಅಪಾಯವೂ ಎದುರಾಗಬಹುದು.
ಈಗಲೂ ಕೆಲವೊಂದು ಹೊತ್ತಿನಲ್ಲಿ ಸರ್ಕಲ್ ಭಾಗ ದಲ್ಲಿ ಟ್ರಾಫಿಕ್ ಜಾಮ್ ಉಂಟಾ ಗುತ್ತಿದ್ದು, ಮುಂದೆ ಟ್ರಾಫಿಕ್ ಸಿಗ್ನಲ್ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ವರ್ಷ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಈ ಕುರಿತು ಈಗಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಓವರ್‌ಪಾಸ್ ಪ್ರಸ್ತಾವವಿತ್ತು
ಹಿಂದೆ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಯ ಸಂದರ್ಭದಲ್ಲಿ ಅಲ್ಲಿನ ಕಾಮಗಾರಿಯನ್ನು ಗಾಣದಪಡ್ಪುವರೆಗೆ ನಿಲ್ಲಿಸಿ ಮುಂದೆ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಯ ಸಂದರ್ಭ ರಸ್ತೆಯನ್ನು ವಿಸ್ತರಿಸುವ ಜತೆಗೆ ಸರ್ಕಲ್‌ನಲ್ಲಿ ಓವರ್‌ಪಾಸ್ ನಿರ್ಮಾಣಗೊಳ್ಳುತ್ತದೆ ಎನ್ನಲಾಗಿತ್ತು. ಬಳಿಕ ಹೆದ್ದಾರಿ ಕಾಮಗಾರಿಯ ಸಂದರ್ಭ ಅಂತಹ ಯಾವುದೇ ಪ್ರಸ್ತಾವವಿಲ್ಲದೆ ಬರೀ ಸರ್ಕಲ್ ಮಾತ್ರ ಅಭಿವೃದ್ಧಿ ಪಡಿಸಲಾಗುತ್ತಿದೆ. ಓವರ್‌ಪಾಸ್, ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಸ್ಥಳೀಯವಾಗಿರುವ ರೈಲ್ವೇ ಸೇತುವೆ ಅಡ್ಡಿಯಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ಪ್ರಸ್ತುತ ಸರ್ಕಲ್ ಭಾಗದಲ್ಲಿ ಹೆದ್ದಾರಿ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡು ಸರ್ಕಲ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿದೆ. ಆದರೆ ಸರಕಾರದ ಬೇರೆ ಇಲಾಖೆಗಳ ಎಂಜಿನಿಯರ್‌ಗಳು ಸರ್ಕಲ್ ಕಾಮಗಾರಿಯಿಂದ ಮುಂದೆ ಸುಗಮ ಸಂಚಾರಕ್ಕೆ ತೊಂದರೆಯಾಗುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಿರ್ವಹಿಸುವ ಸಂಸ್ಥೆ ಒಮ್ಮೆ ಮುಗಿಸಿ ಹೋದರೆ ಬಳಿಕ ಇಲ್ಲಿನ ಜನತೆಗೆ ನಿರಂತರವಾಗಿ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತಿದೆ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್ ಧನ್‌ಕರ್
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.