Bantwal: ಜಕ್ರಿಬೆಟ್ಟು ಬ್ಯಾರೇಜ್‌ಗೆ ಶೀಘ್ರ ಗೇಟ್‌!

5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸುವ ಸಾಧ್ಯತೆ; ನದಿ ದಡಕ್ಕೆ ಕಲ್ಲು ಹಾಸುವಿಕೆ ಪ್ರಗತಿಯಲ್ಲಿ

Team Udayavani, Jan 13, 2025, 12:49 PM IST

2

ಬಂಟ್ವಾಳ: ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್‌) ನಿರ್ಮಾಣ ಪೂರ್ಣಗೊಂಡಿದೆ.

ಕಿಂಡಿ ಅಣೆಕಟ್ಟಿನ ಗೇಟ್‌ ಹಾಕಿದ ಸಂದರ್ಭದಲ್ಲಿ ಹಿನ್ನೀರು ಖಾಸಗಿ ಭೂಮಿಗಳಿಗೆ ನುಗ್ಗದಂತೆ ನರಿಕೊಂಬು ಭಾಗದಲ್ಲಿ ಕಲ್ಲು ಹಾಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ಐದಾರು ದಿನಗಳಲ್ಲಿ ಅದರ ಕೆಲಸ ಪೂರ್ಣಗೊಳ್ಳುತ್ತದೆ. ಪೂರ್ಣಗೊಂಡ ತತ್‌ಕ್ಷಣ ಗೇಟ್‌ ಅಳವಡಿಸಿ ನೀರು ಸಂಗ್ರಹಿಸಲಿದ್ದೇವೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.

2022ರ ನವೆಂಬರ್‌ನಲ್ಲಿ ಅಂದಿನ ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದ್ದು, ಕಳೆದ ವರ್ಷ ಸೇತುವೆಯ ಕಾಮಗಾರಿಯೂ ಪೂರ್ಣಗೊಂಡಿತ್ತು. ಪೂರ್ಣಗೊಂಡ ಬಳಿಕ ಕಳೆದ ಜೂನ್‌ನಲ್ಲಿ ಸಣ್ಣ ನೀರಾವರಿ ಇಲಾಖೆಯು ಪ್ರಾಯೋಗಿಕವಾಗಿ ಗೇಟ್‌ ಅಳವಡಿಕೆಯ ಕಾರ್ಯ ನಡೆಸಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಲಾಗುತ್ತಿದೆ. ಮುಂದಿನ ಬೇಸಗೆಯಲ್ಲಿ ಮಂಗಳೂರು ನಗರ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲ್ಲಿ ಸಂಗ್ರಹಿಸಲ್ಪಟ್ಟ ನೀರು ಸಹಕಾರಿಯಾಗಲಿದೆ. ಜತೆಗೆ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.

166 ಎಂಸಿಎಫ್‌ಟಿ ನೀರು ಶೇಖರಣೆ
- ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದೆ.
- ಪೂರ್ತಿ ಗೇಟ್‌ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ.
- ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ.
- 12 ಮೀ. ಅಗಲದ ವರ್ಟಿಕಲ್‌ ಲಿಫ್ಟ್‌ ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕವರ್ ಸ್ಲೂಯಿಸ್‌ ಗೇಟ್‌ಗಳಿರುತ್ತವೆ. ಪ್ರವಾಹ ಸಂದರ್ಭ ನೀರನ್ನು ಕೆಳಗೆ ಕಳುಹಿಸಲು ಇದನ್ನು ಬಳಸಲಾಗುತ್ತದೆ.
- ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವಂತೆ ಈ ಗೇಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
- ಬ್ಯಾರೇಜಿನಲ್ಲಿ ಸಂಗ್ರಹವಾದ ನೀರಿನಿಂದ ಬಂಟ್ವಾಳ ನಗರವೂ ಸೇರಿದಂತೆ ತಾಲೂಕಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ.

ಎರಡೂ ಬದಿ ಸಂಪರ್ಕ ರಸ್ತೆ ಆಗಿಲ್ಲ
ಪುಂಜಾಲಕಟ್ಟೆ-ಬಿ.ಸಿ.ರೋಡು ಹೆದ್ದಾರಿಯ ಸನಿಹದಲ್ಲೇ ಸೇತುವೆ ನಿರ್ಮಾಣವಾಗುತ್ತಿದ್ದು, ಮತ್ತೂಂದು ಬದಿಯಲ್ಲಿ ನರಿಕೊಂಬು ಪುಳಿಕುಕ್ಕು ಪ್ರದೇಶವನ್ನು ಸಂಪರ್ಕಿಸಲಿದೆ. ನೂತನ ಸೇತುವೆಯಲ್ಲಿ ಸುಮಾರು ಒಟ್ಟು 7.50 ಮೀ. ಅಗಲದಲ್ಲಿ ವಾಹನ ಸಾಗುವುದಕ್ಕೆ ಅವಕಾಶವಿದ್ದು, ಜಕ್ರಿಬೆಟ್ಟು ಭಾಗದಲ್ಲಿ 50 ಮೀ. ಹಾಗೂ ನರಿಕೊಂಬು ಭಾಗದಲ್ಲಿ 100 ಮೀ.ನಷ್ಟು ಉದ್ದದ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ.

ನರಿಕೊಂಬು ಭಾಗದಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಭಾಗದಲ್ಲಿ ರಸ್ತೆ ನೇರ ಸಂಪರ್ಕಕ್ಕೆ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಹಾಲಿ ಪುರಸಭಾ ವ್ಯಾಪ್ತಿಯ ಜಾಕ್‌ವೆಲ್‌ ಬಳಿಯ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸೇತುವೆ ಸಂಪರ್ಕಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

ಐದಾರು ದಿನಗಳಲ್ಲಿ ಕಲ್ಲು ಹಾಸುವಿಕೆ ಪೂರ್ಣ
ಪ್ರಸ್ತುತ ನದಿ ದಂಡೆಯಲ್ಲಿ ಹಲ್ಲು ಹಾಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದು ಐದಾರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದರ ಬಳಿಕ ಗೇಟ್‌ ಹಾಕುವ ಕಾರ್ಯ ನಡೆಸಲಿದ್ದೇವೆ. ಸೇತುವೆ ಸಂಪರ್ಕಕ್ಕೆ ಸಂಬಂಧಿಸಿ ನರಿಕೊಂಬು ಭಾಗದಲ್ಲಿ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಭಾಗದಲ್ಲಿ ಹಾಲಿ ಇರುವ ರಸ್ತೆಯನ್ನೇ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಸುತ್ತಿದ್ದೇವೆ.
– ಶಿವಪ್ರಸನ್ನ, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ದ.ಕ.

ಟಾಪ್ ನ್ಯೂಸ್

6 ನಕ್ಸಲರ ಶರಣಾಗತಿ ಹಿಂದೆ ದನಾಗಾಯಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Pranavananda Swamiji demands grants for backward class corporations in the budget

ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Jammu Kashmir: Prime Minister Modi inaugurated the Z-Morh tunnel in Sonmargl

Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ಪ್ರೇಯಸಿಯ ಪತಿಯನ್ನು ಹತ್ಯೆಗೈಯಲು ಕರೆದಿದ್ದ ಬಾಡಿಗೆ ಹಂತಕರು ಕೊಂಡಿದ್ದು ರಿಕ್ಷಾ ಚಾಲಕನನ್ನು

ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು

ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2

Sanju Weds Geetha 2: ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aranthodu: A woman from Alletti village goes missing with two children

Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ

ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Sullia ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

1

Puttur-ಸುಬ್ರಹ್ಮಣ್ಯ; 4 ರೈಲ್ವೇ ಮೇಲ್ಸೇತುವೆ

14

Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Eddelu Manjunatha 2 movie releasing soon

Eddelu Manjunatha 2: ತೆರೆಯತ್ತ ʼಮಠʼ ಗುರುಪ್ರಸಾದ್‌ ಕೊನೆಯ ಕನಸು

6 ನಕ್ಸಲರ ಶರಣಾಗತಿ ಹಿಂದೆ ದನಾಗಾಯಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

7(1

Kundapura: ಸಂಕ್ರಾಂತಿಗೆ ನಿರೀಕ್ಷೆಯಷ್ಟು ಅರಳದ ಹೆಮ್ಮಾಡಿ ಸೇವಂತಿಗೆ

Aranthodu: A woman from Alletti village goes missing with two children

Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ

6

Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್‌ ಬಳಸುವಂತಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.