![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Dec 6, 2023, 11:12 PM IST
ವಿಟ್ಲ: ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಉಳಿಯತ್ತಡ್ಕ ಹೊಳೆಯಲ್ಲಿ ಮರಳು ಸಾಗಾಟದ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿಂಡಿ ಅಣೆಕಟ್ಟಿನ ಬಳಿಯಿಂದ ಮರಳು ಸಾಗಾಟ ಪ್ರಕ್ರಿಯೆ ಸ್ಥಗಿತಗೊಂಡಿದೆ. ಉದಯವಾಣಿಯಲ್ಲಿ ಪ್ರಕಟವಾದ ವರದಿಯ ಫಲಶ್ರುತಿಯಾಗಿದ್ದು ಅಕ್ರಮ ಚಟುವಟಿಕೆಗಳು ಸದ್ಯ ಸ್ಥಗಿತವಾಗಿದೆ. ಸ್ಥಳೀಯ ನಾಗರಿಕರು ನಿಟ್ಟುಸಿರುಬಿಟ್ಟಿದ್ದಾರೆ.
ಇದೀಗ ಹೊಳೆಯಲ್ಲಿ ಜೆಸಿಬಿ ಕಾರ್ಯವೆಸಗುತ್ತಿಲ್ಲ. ಹಗಲು-ರಾತ್ರಿ ಕೇರಳಕ್ಕೆ ಮರಳು ಸಾಗಾಟ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಲಾರಿಗಳು ಮಾಯವಾಗಿವೆ. ಆದರೆ ಅಕ್ರಮವಾಗಿ ಮರಳು ಶೇಖರಿಸಿದ ಆರೋಪದಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣ
ವಿಟ್ಲ ಠಾಣಾ ಪೊಲೀಸ್ ಉಪ-ನಿರೀಕ್ಷಕರು ಹಾಗೂ ಸಿಬಂದಿಯ ತಂಡ ಬಂಟ್ವಾಳ ತಾಲೂಕು, ಸಾಲೆತ್ತೂರು ಗ್ರಾಮದ ಬೊಳಾ¾ರು ನಿವಾಸಿ ಸುದೇಶ್ ಭಂಡಾರಿ ಅವರ ಜಾಗದಲ್ಲಿ, ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅಕ್ರಮವಾಗಿ ಶೇಖರಿಸಿರುವ, ಅಂದಾಜು 1.25 ಲಕ್ಷ ಮೌಲ್ಯದ ಸುಮಾರು 20 ರಿಂದ 25 ಲೋಡ್ ಮರಳನ್ನು ಪತ್ತೆಹಚ್ಚಿದ್ದಾರೆ. ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿರುವ ಆರೋಪಿಗಳಾದ ಸುದೇಶ್ ಭಂಡಾರಿ, ಶರೀಫ್ ಮತ್ತು ನಾರಾಯಣ ಪೂಜಾರಿ ಅವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.