Bantwal: ಶಂಭೂರಿನ ಎಂಆರ್‌ಎಫ್ ತಿಂಗಳಲ್ಲಿ ಸಿದ್ಧ
ಬಂಟ್ವಾಳ-ಉಳ್ಳಾಲ ತಾ; 57 ಗ್ರಾಪಂನ ಘನ ತ್ಯಾಜ್ಯ ನಿರ್ವಹಣೆ; 1.95 ಕೋ. ರೂ. ಗಳಲ್ಲಿ ಅನುಷ್ಠಾನ
Team Udayavani, Nov 14, 2024, 12:59 PM IST
ಬಂಟ್ವಾಳ: ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳ ಒಟ್ಟು 57 ಗ್ರಾಪಂಗಳ ಘನ ತ್ಯಾಜ್ಯಗಳನ್ನು ನಿರ್ವಹಿಸುವ ದೃಷ್ಟಿಯಿಂದ ನರಿಕೊಂಬು ಗ್ರಾಪಂ ವ್ಯಾಪ್ತಿಯ ಶಂಭೂರಿನಲ್ಲಿ ಸುಮಾರು 1.95 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ(ಎಂಆರ್‌ಎಫ್)ದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಘಟಕವು ತಿಂಗಳೊಳಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ.
ಶಂಭೂರಿನ ಮುಂದೆಜೋರ ಪ್ರದೇಶ ದಲ್ಲಿ ಸ.ನಂ. 24/1ಜಿರಲ್ಲಿ ಘಟಕಕ್ಕೆ 1 ಎಕ್ರೆ ನಿವೇಶನವಿದ್ದು, ಸುಮಾರು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನು ಷ್ಠಾನಗೊಂಡಿದೆ. ಘಟಕವು ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬಂಟ್ವಾಳ ತಾಲೂಕಿನ 40 ಹಾಗೂ ಉಳ್ಳಾಲ ತಾಲೂಕಿನ 17 ಗ್ರಾಪಂಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾಪಂಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.
ಕಳೆದ ಹಲವು ತಿಂಗಳ ಹಿಂದೆಯೇ ಕಾರ್ಯಾರಂಭಗೊಳ್ಳಬೇಕಾದ ಘಟಕದ ಕಾಮಗಾರಿ ಹಲವು ಕಾರಣಕ್ಕೆ ವಿಳಂಬ ವಾಗಿದ್ದು, ಪ್ರಸ್ತುತ ಯಂತ್ರೋಪಕರಣ ಜೋಡಣೆಯ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಘಟಕದ ಮೇಲ್ಛಾವಣಿ(ಟ್ರಸ್), ಇನ್ನಿತರ ಸಿವಿಲ್ ಕೆಲಸಗಳು ಪೂರ್ಣಗೊಂಡಿದೆ. ಮಂಗಳೂರಿನ ತೆಂಕಎಡಪದವು ಗ್ರಾಮದಲ್ಲಿ ದ.ಕ.ಜಿಲ್ಲೆಯ ಮೊದಲ ಎಂಆರ್‌ಎಫ್ ಘಟಕ ಅನುಷ್ಠಾನಗೊಂಡಿದ್ದು, 2ನೇ ಹಂತದಲ್ಲಿ ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ ಹಾಗೂ ಬಂಟ್ವಾಳದ ಶಂಭೂರಿಗೆ ಎಂಆರ್‌ಎಫ್ ಘಟಕಗಳು ಮಂಜೂರಾಗಿದ್ದವು.
ಗ್ರಾಪಂಗಳಿಗಿಲ್ಲ ಆರ್ಥಿಕ ಹೊರೆ
ಈಗಾಗಲೇ ಪ್ರತೀ ಗ್ರಾಪಂಗಳಲ್ಲಿ ಸ್ವತ್ಛವಾಹಿನಿ ವಾಹನಗಳು ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯಾ ಮಾಡುತ್ತಿದ್ದು, ಅವುಗಳನ್ನು ಪಂಚಾಯತ್‌ನ ಸ್ವತ್ಛ ಸಂಕೀರ್ಣ ತ್ಯಾಜ್ಯ ಘಟಕದಲ್ಲಿ ವಿಂಗಡನೆ ಮಾಡಿ ಚೀಲದಲ್ಲಿ ಶೇಖರಿಸಿಡಲಾಗುತ್ತಿದೆ. ಮುಂದೆ ಅವುಗಳೆಲ್ಲವನ್ನೂ ಎರಡೂ ತಾಲೂಕುಗಳಿಗೆ ಹೊಂದಾಣಿಕೆ ಮಾಡಿ ರೂಟ್ ಮ್ಯಾಪ್ ಸಿದ್ಧಪಡಿಸಿ ಎಂಆರ್‌ಎಫ್ ಘಟಕಕ್ಕೆ ಸಾಗಿಸುವ ಕಾರ್ಯ ನಡೆಯಲಿದೆ. ಬಳಿಕ ಎಂಆರ್‌ಎಫ್ ಘಟಕದಲ್ಲಿ ಯಂತ್ರಗಳ ಮೂಲಕ ಕಣವಾಗಿ ಪರಿವರ್ತಿಸಿ ಅದನ್ನು ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿಸಿ ಮರು ಉತ್ಪಾದನೆ, ಸಿಮೆಂಟ್ ಉತ್ಪಾದನ ಘಟಕಗಳಿಗೆ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಘಟಕದ ನಿರ್ವಹಣೆಗಾಗಿ ತಾಂತ್ರಿಕ ಮತ್ತು ಆಡಳಿತ ಸಮಿತಿ ರಚನೆಗೊಂಡಿರುತ್ತದೆ.
ಸಾಮಾನ್ಯವಾಗಿ ಇಂತಹ ಘಟಕಗಳು ಗ್ರಾಪಂ ಹಣ ಪಾವತಿಸಿ ಒಣ ತ್ಯಾಜ್ಯ ನೀಡುವುದು ಅಥವಾ ಘಟಕದ ನಿರ್ವಹಣ ಸಂಸ್ಥೆಯೇ ಹಣ ಪಾವತಿಸಿ ತ್ಯಾಜ್ಯವನ್ನು ಸಂಗ್ರಹ ಮಾಡುವ ಮೂಲಕ ನಡೆಯುತ್ತದೆ. ಆದರೆ ದ.ಕ.ಜಿ.ಪಂ. ರಾಜ್ಯದಲ್ಲೇ ಮೊದಲ ಬಾರಿಗೆ ಶುಲ್ಕ ರಹಿತ ಮಾದರಿ(ಝೀರೊ ರೂಪೀಸ್ ಮಾಡೆಲ್)ಯನ್ನು ಪರಿಚಯಿಸಿದೆ. ಇದರಿಂದ ಗ್ರಾಪಂಗಳು ಆರ್ಥಿಕ ಹೊರೆಯಾಗದಂತೆ ಒಡಂಬಡಿಕೆಯ ರೀತಿ ಒಣ ತ್ಯಾಜ್ಯ ನೀಡಬಹುದಾಗಿದೆ.
ಯಂತ್ರೋಪಕರಣ ವ್ಯವಸ್ಥೆ
ಎಂಆರ್‌ಎಫ್ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅನುಷ್ಠಾನ ಕಾರ್ಯ ನಡೆಯುತ್ತಿದೆ. ನಿರೀಕ್ಷಿತವಾಗಿ ಕೆಲಸ ಪೂರ್ಣಗೊಂಡರೆ ಮುಂದಿನ ಒಂದು ತಿಂಗಳೊಳಗೆ ಘಟಕ ಕಾರ್ಯಾರಂಭಗೊಳ್ಳಲಿದೆ.
– ಸಚಿನ್ ಕುಮಾರ್, ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ. ಬಂಟ್ವಾಳ
ಅನುದಾನ ವಿಂಗಡಣೆ ಹೀಗೆ
ದ.ಕ.ಜಿ.ಪಂ.ನ ಸ್ವತ್ಛ ಭಾರತ್ ಮಿಷನ್(ಗ್ರಾಮೀಣ) ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಎಂಆರ್‌ಎಫ್ ಘಟಕವನ್ನು ಅನುಷ್ಠಾನಗೊಳಿಸಿದ್ದು, ಇದರ ಒಟ್ಟು ಅನುಷ್ಠಾನ ವೆಚ್ಚ 1.95 ಕೋ.ರೂ. ಅದರಲ್ಲಿ 1.46 ಕೋ.ರೂ.ಸಿವಿಲ್ ಹಾಗೂ 48.50 ಲಕ್ಷ ರೂ. ಯಂತ್ರೋಪಕರಣಗಳಿಗೆ ಬಳಕೆಯಾಗಲಿದೆ. 98 ಲಕ್ಷ ರೂ.ಗಳನ್ನು ಗ್ರಾ.ಪಂ.ಗಳಿಂದ, 32 ಲಕ್ಷ ರೂ. ಸ್ವತ್ಛ ಭಾರತ್ ಮಿಷನ್(ಗ್ರಾಮೀಣ), 35 ಲಕ್ಷ ರೂ. ತಾ.ಪಂ.ಅನುದಾನ ಹಾಗೂ 30 ಲಕ್ಷ ರೂ.ಜಿ.ಪಂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಪ್ರತೀ ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ವಾಹನದ ಆವಶ್ಯಕತೆ ಇದ್ದು, ಅದಕ್ಕಾಗಿ ಎಂಸಿಎಫ್‌ನಿಂದ 24 ಲಕ್ಷ ರೂ.ಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.