ಬಂಟ್ವಾಳ ಪುರಸಭೆ ಚುನಾವಣೆ: ಶಾಂತಿಯುತ ಮತದಾನ
Team Udayavani, Sep 1, 2018, 12:56 PM IST
ಬಂಟ್ವಾಳ : ಬಂಟ್ವಾಳ ಪುರಸಭೆ ಚುನಾವಣೆ ಮತದಾನ ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಶಾಂತವಾಗಿ ನಡೆದಿದೆ. ಶುಕ್ರವಾರ ಬೆಳಗ್ಗೆ 7ಕ್ಕೆ ಆರಂಭಗೊಂಡಿದ್ದು, ಎಲ್ಲಿಯೂ ಇವಿಎಂ ಯಂತ್ರ ಕೈಕೊಟ್ಟ ಘಟನೆ ಸಂಭವಿಸಿಲ್ಲ. ಎಲ್ಲ 27 ವಾರ್ಡ್‌ಗಳಲ್ಲಿ ಬೆಳಗ್ಗೆ ಸರತಿ ಸಾಲು ಕಂಡುಬಂದಿತ್ತು. ಪಾಣೆಮಂಗಳೂರು, ಬಿ. ಮೂಡ, ಬಿ. ಕಸ್ಬಾ , ಅಗ್ರಾರ್ ಸಹಿತ ವಿವಿಧ ಮತಗಟ್ಟೆಗಳಲ್ಲಿ ಪಕ್ಷಗಳು ಕಾರ್ಯಕರ್ತರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.
ಬಿಗು ಬಂದೊಬಸ್ತು
ಪೊಲೀಸರು ಬಿಗು ಬಂದೋಬಸ್ತು ಮಾಡಿದ್ದರು. ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪರ್ಲಿಯಾ ಮತಗಟ್ಟೆಯಲ್ಲಿ ಮತದಾರರನ್ನು ವಾಹನದಲ್ಲಿ ಕರೆದು ತರುತ್ತಿರುವ ಬಗ್ಗೆ, ಮತಚೀಟಿ ನೀಡುವ ಬಗ್ಗೆ ಕಾರ್ಯಕರ್ತರೊಳಗೆ ಮಾತಿನ ಚಕಮಕಿ ಸಂಭವಿಸಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿದರು. ಇದೇ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಬಂದ ವ್ಯಕ್ತಿಯೊಬ್ಬರು ನಿರ್ದಿಷ್ಟ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸುವಂತೆ ಬೂತ್ ಹತ್ತಿರವೇ ಪ್ರಚಾರ ನಡೆಸಿದ್ದು, ಪೊಲೀಸರು ಆ ವ್ಯಕ್ತಿಯನ್ನು ಬಳಿಕ ಸ್ಥಳದಿಂದ ತೆರಳುವಂತೆ ಕ್ರಮ ಕೈಗೊಂಡರು.
ಸಂಚಾರ ಅಡಚಣೆ
ಅಜ್ಜಿಬೆಟ್ಟು ಮತಗಟ್ಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮತದಾನಕ್ಕೆ ಬಂದವರ ವಾಹನಗಳಿಂದ ಸಂಚಾರ ಅಡಚಣೆ ಉಂಟಾಯಿತು. ಸಾರ್ವಜನಿಕರೇ ಪರಸ್ಪರ ಸಹಕರಿಸಿ ಸಂಚಾರ ಸುವ್ಯವಸ್ಥೆ ಮಾಡಿಕೊಟ್ಟರು. ಬಹುತೇಕ ಬೂತ್‌ನಲ್ಲಿಯೂ ಅಭ್ಯರ್ಥಿಗಳು ಪರಸ್ಪರ ಒಟ್ಟಿಗೆ ಇದ್ದುಕೊಂಡು ಮತ ಚಲಾಯಿಸುವಂತೆ ಮತದಾರರಲ್ಲಿ ವಿನಂತಿಸುತ್ತಿದ್ದುದು ಕಂಡುಬಂತು.
ಡಿಸಿ ಭೇಟಿ
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಾಮಾನ್ಯ ವೀಕ್ಷಕ ಬಾಲಚಂದ್ರ (ಖರ್ಚುವೆಚ್ಚ ವಿಭಾಗ), ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಪುರಸಭೆ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.