ನಿರ್ವಹಣೆಯಿಲ್ಲದೆ ನೇತಾಡುತ್ತಿದೆ ತಗಡು ಶೀಟ್
ತುಂಬೆಯಲ್ಲಿ ಹೆದ್ದಾರಿ ದಾಟುವ ಪಾದಚಾರಿ ಮೇಲ್ಸೇತುವೆ
Team Udayavani, Jan 30, 2022, 6:51 PM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುವ ಸಂದರ್ಭ ರಸ್ತೆ ದಾಟುವುದು ಅಪಾ ಯಕಾರಿ ಎಂಬ ಕಾರಣಕ್ಕೆ ತುಂಬೆಯಲ್ಲಿ ವಿದ್ಯಾಸಂಸ್ಥೆಯೊಂದರ ಪಕ್ಕ ಪಾದಚಾರಿ ಮೇಲ್ಸೇ ತುವೆ ನಿರ್ಮಿಸಲಾಗಿದೆ. ಆದರೆ ಈಗ ಅದೇ ಅಪಾಯಕಾರಿಯಾಗಿ ಪರಿಣಮಿಸಿದೆ. ಅದರ ನಿರ್ವಹಣೆ ಮಾಡ ಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಜನರ ಜೀವಕ್ಕೂ ಸಂಚಕಾರ ತರುವ ಅಪಾಯ ಎದುರಾಗಿದೆ.
ಮೇಲ್ಸೇತುವೆಯ ಮೇಲೆ ಅಳ ವಡಿಸಲಾಗಿರುವ ತಗಡು ಶೀಟ್‌ಗಳು ಗಾಳಿ, ಮಳೆಗೆ ಕಿತ್ತು ಹೋಗಿ ಕೆಳಗೆ ಬೀಳುತ್ತಿದ್ದು, ಕೆಲವು ಅಲ್ಲೇ ನೇತಾಡಿಕೊಂಡಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಅಂದರೆ ಮೇಲ್ಸೇತುವೆ ಅಥವಾ ಹೆದ್ದಾರಿಯ ಬದಿ ಯಾರಾದರೂ ಸಾಗುವ ಸಂದರ್ಭ ನೇತಾಡುತ್ತಿರುವ ಶೀಟ್‌ಗಳು ಬಿದ್ದರೆ ಅವರ ಪ್ರಾಣಕ್ಕೇ ಕುತ್ತು ತರುವ ಅಪಾಯವಿದೆ.
ಈ ಸೇತುವೆಯ ಮೂಲಕ ನಿತ್ಯ ನೂರಾರು ವಿದ್ಯಾರ್ಥಿಗಳು ಹೆದ್ದಾರಿ ದಾಟುತ್ತಿದ್ದು, ಹೀಗಾಗಿ ಅಪಾಯದ ಸಾಧ್ಯತೆ ಹೆಚ್ಚಿದೆ. ಈ ಕುರಿತು ಹಲವು ಬಾರಿ ಹೆದ್ದಾರಿ ಪ್ರಾಧಿಕಾರವನ್ನು ಎಚ್ಚರಿಸುವ ಕಾರ್ಯ ಮಾಡಿದರೂ, ಅಲ್ಲಿನ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಹೆದ್ದಾರಿಯಲ್ಲಿ ಸಾಗುವ ಜನಪ್ರತಿನಿಧಿಗಳು ಕೂಡ ಇದನ್ನು ಗಮನಿಸದೆ ಇರುವುದು ವಿಪರ್ಯಾಸ.
ಇಂತಹ ಶೀಟ್‌ಗಳು ಯಾರಧ್ದೋ ತಲೆಗೆ ಬಿದ್ದು ಅದರ ಬಳಿಕ ಎಚ್ಚೆತ್ತುಕೊಂಡು ಪಶ್ಚತ್ತಾಪ ಪಡುವುದಕ್ಕಿಂತ ಅಪಾಯ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿದರೆ ಉತ್ತಮ ಎಂದು ಸ್ಥಳೀಯ ನಾಗರಿಕರು ಆಗ್ರಹಿಸುತ್ತಿದ್ದಾರೆ. ಜತೆಗೆ ತುಂಬೆ ಗ್ರಾ.ಪಂ.ಕೂಡ ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಗೆ ಮುಟ್ಟಿಸುವ ಕಾರ್ಯವನ್ನೂ ಮಾಡಬೇಕಿದೆ.
2014ರಲ್ಲಿ ನಿರ್ಮಾಣ
ಸುಮಾರು 20 ವರ್ಷಗಳ ಹಿಂದೆ ಹೆದ್ದಾರಿ ದಾಟುವ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಹೀಗಾಗಿ ಚತುಷ್ಪಥ ಹೆದ್ದಾರಿಯ ಕಾಮಗಾರಿಯ ವೇಳೆ ತುಂಬೆ ವಿದ್ಯಾಸಂಸ್ಥೆಯು ಅಂದಿನ ಕೇಂದ್ರ ಸಚಿವ ಮುನಿಯಪ್ಪ ಅವರಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿತ್ತು. ಹೀಗಾಗಿ 2014ರಲ್ಲಿ ಮೇಲ್ಸೇತುವೆ ನಿರ್ಮಾಣಗೊಂಡಿತ್ತು. ಅದರ ಬಳಿಕ ಸಂಸ್ಥೆಯು ಬೆಳಗ್ಗೆ ಹಾಗೂ ಸಂಜೆ ವಾಚ್‌ಮ್ಯಾನ್‌ಗನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಇದೇ ಮೇಲ್ಸೇತುವೆಯ ಮೂಲಕ ದಾಟಿಸುವ ಕಾರ್ಯ ಮಾಡುತ್ತಿದೆ. ಆದರೆ ಪ್ರಸ್ತುತ ಇದೇ ಮೇಲ್ಸೇತುವೆಯಿಂದ ಅಪಾಯದ ಸಂಭವಿಸುವ ಸಾಧ್ಯತೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.