Bantwal ಉಕ್ಕಿ ಹರಿದ ನೇತ್ರಾವತಿ: ಹಲವೆಡೆ ತಗ್ಗು ಪ್ರದೇಶ ಜಲಾವೃತ್ತ; ರಸ್ತೆ ಸಂಚಾರ ವ್ಯತ್ಯಯ
Team Udayavani, Jul 19, 2024, 11:23 PM IST
ಬಂಟ್ವಾಳ: ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಶುಕ್ರವಾರ ಬಂಟ್ವಾಳ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು, ಕೆಲವು ಕಡೆ ರಸ್ತೆ ಸಂಚಾರ ಕಡಿತಗೊಂಡಿತ್ತು.
ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8.5 ಮೀ. ಆಗಿದ್ದು, ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ 8.6 ಮೀ.ಗೆ ತಲುಪಿತ್ತು. ಹೀಗಾಗಿ ಬಂಟ್ವಾಳ ಬಡ್ಡಕಟ್ಟೆಯಲ್ಲಿ ಸಾಕಷ್ಟು ಅಂಗಡಿಗಳು, ಮೀನು ಮಾರುಕಟ್ಟೆ, ಸಾರ್ವಜನಿಕ ಶೌಚಾಲಯಗಳು ಜಲಾವೃತಗೊಂಡವು. ಪಾಣೆಮಂಗಳೂರಿನ ಆಲಡ್ಕದಲ್ಲಿ ಜು. 18ರಂದೇ ಮನೆಗಳು ಮುಳುಗಡೆಯಾಗಿದ್ದು, ಅಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು.
ಅಜಿಲಮೊಗರು ಮಸೀದಿ ಆವರಣಕ್ಕೆ ನೀರು ಬಂದು ಅಜಿಲಮೊಗರು-ಉಪ್ಪಿನಂಗಡಿ ರಸ್ತೆಯ ಸಂಚಾರ ಕಡಿತಗೊಂಡಿತ್ತು. ಬಂಟ್ವಾಳ ಪೇಟೆಗೆ ಸಂಪರ್ಕ ರಸ್ತೆಯ ಕೋಟೆಕಣಿ, ಬಸ್ತಿಪಡು³-ಗೂಡಿನಬಳಿ ಸಂಪರ್ಕ ರಸ್ತೆಯ ಕಂಚಿಗಾರಪೇಟೆ, ಪಾಣೆಮಂಗಳೂರು-ಮೆಲ್ಕಾರ್ ಸಂಪರ್ಕ ಆಲಡ್ಕ ಸೇತುವೆ ಬಳಿ ರಸ್ತೆಗೆ ನೀರು ಹರಿದ ಪರಿಣಾಮ ಸರಪಾಡಿ-ಬೀಯಪಾದೆ ಸಂಪರ್ಕ ಕಡಿತಗೊಂಡಿತ್ತು.
ತಾಲೂಕಿನ ಮಣಿನಾಲ್ಕೂರು, ಸರಪಾಡಿ, ಬರಿಮಾರು, ನಾವೂರು, ಸಜೀಪಮುನ್ನೂರು, ನರಿಕೊಂಬು, ಬಾಳ್ತಿಲ, ಶಂಭೂರು, ಕಡೇಶ್ವಾಲ್ಯ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭತ್ತದ ಗದ್ದೆಗಳು, ಅಡಿಕೆ ತೋಟಗಳಿಗೆ ನೀರು ನುಗ್ಗಿತ್ತು. ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂಟ್ವಾಳಕ್ಕೆ ಭೇಟಿ ನೀಡಿ ನೆರೆಬಾಧಿತ ಪ್ರದೇಶಗಳನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.