ಸ್ವಚ್ಛತೆಗೆ ಆದ್ಯತೆ: ಚಂದ್ರಹಾಸ ಕರ್ಕೇರ
Team Udayavani, Feb 3, 2019, 6:32 AM IST
ಬಂಟ್ವಾಳ: ತ್ಯಾಜ್ಯ ವಿಲೇವಾರಿ ಯಲ್ಲಿ ಸಾಮೂಹಿಕ ಪ್ರಯತ್ನದ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಬೇಕು. ಕಸವನ್ನು ವಿಂಗಡಿಸಿ ಅದನ್ನು ಮರು ಪರಿವರ್ತನೆ ಮೂಲಕ ಆದಾಯ ಮಾಡಿಕೊಳ್ಳುವ ವ್ಯವಸ್ಥೆ ಸಂಬಂಧಪಟ್ಟ ಗ್ರಾ.ಪಂ.ಗೆ ಪ್ರಯೋಜನ ತರುತ್ತದೆ. ನಾವು ಸ್ವಚ್ಛತೆಗೆ ಆದ್ಯತೆಯಾಗಿ ತ್ಯಾಜ್ಯ ವಿಲೇವಾರಿಯಲ್ಲಿಯೂ ಮಹತ್ವದ ಹೆಜ್ಜೆ ಇಡಬೇಕು ಎಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಫೆ. 2ರಂದು ತಾ.ಪಂ. ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್ ಆಶ್ರಯದಲ್ಲಿ ನಡೆದ ನಮ್ಮ ತ್ಯಾಜ್ಯ ನಮ್ಮ ಹೊಣೆ ಪರಿಕಲ್ಪನೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ತರಬೇತಿ ಕಾರ್ಯಾಗಾರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ವಾರಂಬಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹೇಶ್, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ತಮ್ಮ ಗ್ರಾಮದಲ್ಲಿ ಹಸಿ, ಘನ, ದ್ರವ ಕಸವನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಿದೆ. ಅದರಿಂದ ಕಂಡಿರುವ ಪರಿವರ್ತನೆಗಳು, ಅದನ್ನು ಮತ್ತೆ ವಿಲೇವಾರಿ ಮಾಡಿ ಪಡೆದಿರುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿ ವಿವರಿಸಿದರು.
ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳು ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ವಿಲೇವಾರಿ ಮಾಡುವಲ್ಲಿ ಗಂಭೀರ ಕ್ರಮಗಳು ಆಗಬೇಕು. ಎಲ್ಲ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ವಿಚಾರವಾಗಿ ಚರ್ಚಿಸಿ, ಜನರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡುವ ಮೂಲಕ ಅವರ ಕರ್ತವ್ಯಗಳ ಬಗ್ಗೆ ತಿಳಿಸಿ ಎಂದರು.
ಜಿ.ಪಂ. ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯರಾದ ಕೆ. ಸಂಜೀವ ಪೂಜಾರಿ, ರತ್ನಾವತಿ ಜಯರಾಮ ಶೆಟ್ಟಿ, ಯಶವಂತ ಪೂಜಾರಿ, ಲಕ್ಷ್ಮೀ ಗೋಪಾಲಾಚಾರ್ಯ, ಹೈದರ್ ಕೈರಂಗಳ ಮತ್ತು ವನಜಾಕ್ಷಿ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು. ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ಎಲ್ಲರ ಸಹಭಾಗಿತ್ವ
ಕಾರ್ಯಕ್ರಮವು ಒಂದು ವ್ಯವಸ್ಥೆಗೆ ಸೀಮಿತ ಎಂದು ಭಾವಿಸಿ ಪಿಡಿಒ, ಜನಪ್ರತಿನಿಧಿಗಳು ಮಾಡಲಿ ಎಂದು ಚಿಂತಿಸುವ ಬದಲು, ಎಲ್ಲರ ಸಹಭಾಗಿತ್ವ ಬೇಕು. ಪ್ರತಿ ಮನೆಗೆ ಇದರ ಸೌಲಭ್ಯ ಮುಟ್ಟಬೇಕು. ಜನರಲ್ಲಿ ನಮ್ಮ ಒಳ್ಳೆಯದಕ್ಕೆ ಇಂತಹ ಯೋಜನೆ ಇದೆ ಎಂಬ ಭಾವನೆ ಹುಟ್ಟುವಂತೆ ಮನವರಿಕೆ ಮಾಡುವಂತಾಗಬೇಕು.
– ಚಂದ್ರಹಾಸ ಕರ್ಕೇರ
ಬಂಟ್ವಾಳ ತಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.