Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್!
ಡೀಸೆಲ್ ಇಲ್ಲ ಎಂಬ ಕಾರಣ ನೀಡಿ ನಿರುಪಯುಕ್ತ; ಮಳೆ ಬಿಸಿಲಿಗೂ ರಕ್ಷಣೆ ಇಲ್ಲದೆ ಅನಾಥ
Team Udayavani, Dec 28, 2024, 1:18 PM IST
ಬಂಟ್ವಾಳ: ವಾಹನಗಳು, ಯಂತ್ರೋಪಕರಣಗಳನ್ನು ಉಪಯೋಗಿಸಿದರೆ ಮಾತ್ರ ಅದು ಸುಸ್ಥಿತಿಯಲ್ಲಿರುವ ಸಾಧ್ಯವಿದ್ದು, ಆದರೆ ಒಂದಷ್ಟು ಸರಕಾರಿ ಕಚೇರಿಗಳಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸದೆ ಹಾಗೇ ಬಿಟ್ಟು ಅದು ಕೆಟ್ಟು ಹೋಗಿದ್ದನ್ನು ನಾವು ಕಂಡಿದ್ದೇವೆ. ಇದೀಗ ಈ ಸಾಲಿಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿರುವ ಜನರೇಟರ್ ಸೇರುವ ಸ್ಥಿತಿಯಿದೆ. ಡಿಸೇಲ್ ಇಲ್ಲ ಎನ್ನುವ ಕಾರಣಕ್ಕೆ ಜನರೇಟರ್ ಉಪಯೋಗಿಸುವುದನ್ನೇ ಬಿಡಲಾಗಿದೆ.
ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಉಪಯೋಗಕ್ಕಾಗಿ ಸೌಧ ನಿರ್ಮಾಣದ ಬಳಿಕ ಸೌಧದ ಆವರಣದಲ್ಲೇ ನೂತನ ಜನರೇಟರ್ ಅಳವಡಿಸಲಾಗಿದ್ದು, ಡೀಸೆಲ್ ಇಲ್ಲದೆ ಉಪ ಯೋಗವಾಗುತ್ತಿಲ್ಲ ಎಂಬ ಆರೋಪವೂ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಬಳಿಕ ಒಮ್ಮೆ ಸಾರ್ವಜನಿಕರೇ ಹಣ ಸಂಗ್ರಹಿಸಿ ಡೀಸೆಲ್ ಹಾಕಿದ ಘಟನೆಯೂ ನಡೆದಿತ್ತು. ಆದರೆ ಇದೀಗ ಮತ್ತೆ ಜನರೇಟರನ್ನು ಉಪಯೋಗಿಸದೆ ಹಾಗೇ ಬಿಡಲಾಗಿದೆ.
ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ತಾಲೂಕು ಕಚೇರಿಯ ಕೆಲಸಗಳು ಸರಾಗವಾಗಿ ಸಾಗಲು ಜನರೇಟರ್ ಅನಿವಾರ್ಯವಾದರೂ ಪ್ರಸ್ತುತ ಡೀಸೆಲ್ ಇಲ್ಲವೆಂದು ಉಪಯೋಗಿಸುವುದನ್ನೇ ನಿಲ್ಲಿಸಲಾಗಿದೆ. ತಾಲೂಕು ಆಡಳಿತಕ್ಕೆ ಡೀಸೆಲ್ ಖರೀದಿಸುವ ಶಕ್ತಿ ಇಲ್ಲ ಎಂದಾದರೆ ಜನರೇಟರ್ ಯಾಕೆ ಅಳವಡಿಸಲಾಗಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಡೀಸೆಲ್ ಹಾಕದೆ ಜನರೇಟರ್ ಆಪರೇಟ್ ಆಗುವುದಿಲ್ಲ ಎಂಬ ಸಾಮಾನ್ಯ ಪರಿಜ್ಞಾನವೂ ಬೇಡವೇ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಅಧಿಕಾರಿ ವರ್ಗ ವಿವಿಧ ಕಡೆ ಜನರೇಟರ್ ನಿಂದ ತಮಗೆ ಆದಾಯ ಇಲ್ಲದೇ ಇದ್ದರೂ ಸಂಬಂಧಪಟ್ಟವರು ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಗಮನಹರಿಸಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಜನರೇಟರ್ ಇದ್ದರೆ ಹಿಂಭಾಗದಲ್ಲಿ ನೋಂದಣಿ ಇಲಾಖೆಗೆ ಸೇರಿದ ಜನ ರೇಟರ್ ಕೂಡ ಇದ್ದು, ಅದನ್ನು ಕೂಡ ನಿರ್ವಹಣೆ ಮಾಡುವತ್ತ ಅಧಿಕಾರಿಗಳು ಗಮನಹರಿಸಬೇಕು. ಜತೆಗೆ ಮಳೆ- ಬಿಸಿಲಿನ ರಕ್ಷಣೆಗೆ ಮೇಲ್ಛಾವಣಿಯ ವ್ಯವಸ್ಥೆ ಕಲ್ಪಸಬೇಕು ಎಂಬುದು ನಾಗರಿಕ ಆಗ್ರಹವಾಗಿದೆ.
ಬಳಕೆ ಇಲ್ಲದೆ ತುಕ್ಕು ಹಿಡಿದಿದೆ!
ಬಂಟ್ವಾಳ ತಾ|ಆಡಳಿತ ಸೌಧದ ಆವರಣದಲ್ಲಿ ಜನರೇಟರ್ ಅಳವಡಿಸ ಲಾಗಿದ್ದು, ಕನಿಷ್ಠ ಪಕ್ಷ ಮಳೆ- ಬಿಸಿಲಿನ ರಕ್ಷಣೆಗೆ ಅದಕ್ಕೊಂದು ಮೇಲ್ಛಾವಣಿಯ ವ್ಯವಸ್ಥೆಯೂ ಇಲ್ಲ. ಪ್ರಸ್ತುತ ಜನರೇಟರ್ ಪಾಳು ಬಿದ್ದ ಸ್ಥಿತಿಯಲ್ಲಿದ್ದು, ಉಪಯೋ ಗಿಸದೇ ತುಕ್ಕು ಹಿಡಿದಂತೆ ಕಂಡುಬರುತ್ತಿದೆ. ಸೂಕ್ತ ರೀತಿಯ ಮೇಲ್ಛಾವಣಿ ವ್ಯವಸ್ಥೆ ಇದ್ದಿದ್ದರೆ ಒಂದಷ್ಟು ರಕ್ಷಣೆಯಾದರೂ ಸಿಗುತ್ತಿತ್ತು. ಜನರೇಟರನ್ನು ಪೂರ್ತಿ ಉಪಯೋಗಿ ಸುವುದಕ್ಕೆ ಡೀಸೆಲ್ ಇಲ್ಲವಾದರೂ ಅದರ ನಿರ್ವಹಣೆಗಾದರೂ ಕೊಂಚ ಡೀಸೆಲ್ ಹಾಕಿ 5-10 ನಿಮಿಷ ಸ್ಟಾರ್ಟ್ ಮಾಡಬಹುದಲ್ಲವೇ ಎಂದು ಜನತೆ ಸಲಹೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.