ಕುಡಿಯುವ ನೀರು ಸರಬರಾಜು: ಕ್ರಮಕ್ಕೆ ಸೂಚನೆ

Team Udayavani, Feb 13, 2019, 6:47 AM IST

13-february-8.jpg

ಬಂಟ್ವಾಳ : ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ವಿದ್ಯುತ್‌ ಸರಬರಾಜು ಟವರ್‌ ಕುಸಿದಿದ್ದು, ಅದನ್ನು ಸ್ಥಳಾಂತ ರಿಸಿ ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದಕ್ಕೆ ತಡೆಯಾಜ್ಞೆ ತರಲಾ ಗಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಸಮಸ್ಯೆ ಎದುರಾಗಿದೆ. ಅಧಿಕಾರಿ ವರ್ಗ ಸಮಸ್ಯೆಯನ್ನು ಪರಿಹರಿ ಸಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ತಾ.ಪಂ. ಸದಸ್ಯ ಉಸ್ಮಾನ್‌ ಕರೋಪಾಡಿ ಆರೋಪಿಸಿದರು.

ಅವರು ಫೆ. 12ರಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದರು.

ಮೆಸ್ಕಾಂ ಕಾ.ನಿ. ಎಂಜಿನಿಯರ್‌ ಮತ್ತು ಜಿ.ಪಂ. ಸ.ಕಾ.ನಿ. ಎಂಜಿನಿಯರ್‌ ಮಾತುಕತೆ ನಡೆಸಿ ಪರ್ಯಾಯ ಕ್ರಮ ಮೂಲಕ ವಿದ್ಯುತ್‌ ಸರಬರಾಜು ಆಗು ವಂತೆ ಮಾಡಿ ಕುಡಿಯುವ ನೀರು ಸರಬರಾಜಿಗೆ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯ ನಿರ್ವ ಹಣಾಧಿಕಾರಿ ಸೂಚನೆ ನೀಡಿದರು.

ಕುಡಿಯುವ ನೀರು ಸರಬರಾಜಿಗೆ ಅಡ್ಡಿಯಾಗುವ ಸಮಸ್ಯೆ ಬಂದಾಗ ಅದನ್ನು ಆದ್ಯತೆಯಲ್ಲಿ ನಿವಾರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಪೋಡಿಮುಕ್ತ ಗ್ರಾಮ
ತಾಲೂಕನ್ನು ಪೋಡಿಮುಕ್ತ ಗ್ರಾಮವಾಗಿ ಮಾಡಲಾಗಿದೆ ಎಂದು ಈ ಹಿಂದೆಯೇ ಘೋಷಿಸಿದ್ದರೂ ಸಮರ್ಪಕ ಪ್ರಗತಿ ಆಗಿಲ್ಲ. 94 ಸಿ ಜಮೀನು ಮಂಜೂರಾದರೂ ಅದರ ಫಲಾನುಭವಿಗೆ ಮತ್ತು ಅಕ್ರಮ-ಸಕ್ರಮ ಜಮೀನಿಗೆ ವಿಂಗಡಿಸಿ ನೀಡುವ ಪ್ರಕ್ರಿಯೆ ವಿಳಂಬದಿಂದ ಸಮಸ್ಯೆ ಎದುರಾಗಿದೆ ಎಂದು ಉಸ್ಮಾನ್‌ ಪ್ರಸ್ತಾವಿಸಿದರು.

ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಮಾಹಿತಿ ನೀಡಿ, ನಿಮ್ಮ ದೂರಿನ ಬಗ್ಗೆ ಪರಿಶೀಲನೆ ಮಾಡುತ್ತೇನೆ. ತಾಲೂಕಿನ 84 ಗ್ರಾಮಗಳಲ್ಲಿ 32 ಗ್ರಾಮಗಳು ಪೋಡಿಮುಕ್ತ ಆಗಿವೆೆ. ವಿವಿಧ ಕಾರಣಗಳಿಂದ ಸರ್ವೆಯರ್‌ಗಳನ್ನು ಇತರ ಕೆಲಸದಲ್ಲಿ ತೊಡಗಿಸಿದ್ದರಿಂದ ಭೂಮಿ ಅಳತೆ ಕೆಲಸ ವಿಳಂಬವಾಗಿದೆ ಎಂದರು.

ಪ್ರತ್ಯೇಕ ಗ್ರಾಮಕರಣಿಕ
ಒಬ್ಬರೇ ಗ್ರಾಮಕರಣಿಕರು ಕರಿಯಂಗಳ ಗ್ರಾ.ಪಂ. 5 ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದ್ದು, ಕರಿಯಂ ಗಳಕ್ಕೆ ಪ್ರತ್ಯೇಕ ಗ್ರಾಮ ಕರಣಿಕರನ್ನು ನೇಮಿಸಬೇಕು ಎಂದು ಯಶವಂತ ಪೂಜಾರಿ ಪೊಳಲಿ ಸಭೆಯಲ್ಲಿ ಪ್ರಸ್ತಾವಿಸಿದರು.

5 ಮಂದಿ ಗ್ರಾಮಕರಣಿಕರು ಬಂಟ್ವಾಳಕ್ಕೆ ನಿಯುಕ್ತಿ ಆಗಿದ್ದು, ಅವರಲ್ಲಿ ಒಬ್ಬರನ್ನು ವಿಸ್ತಾರ ವ್ಯಾಪ್ತಿಯುಳ್ಳ ಕರಿಯಂಗಳಕ್ಕೆ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ತಿಳಿಸಿದರು.

ಸರಕಾರಿ ಜಮೀನು, ಶ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಜಮೀನು ಹಂಚಿಕೆ ಬಗ್ಗೆ ಗಡಿ ಗುರುತು ತೋರಿಸಲು ಗ್ರಾಮ ಕರಣಿಕರು ನಿರಾಕರಿಸುತ್ತಾರೆ. ನಮಗೆ ತಹಶೀಲ್ದಾರ್‌ ನಿರ್ದೇಶನ ನೀಡಿದರೆ ಮಾತ್ರ ಅಳತೆ ಸಾಧ್ಯ ಎಂದು ಹೇಳುತ್ತಾರೆ.

ಆದರೆ 94 ಸಿ ಸಹಿತ ಇತರ ಉದ್ದೇಶದಲ್ಲಿ ಗಡಿ ಗುರುತು ತೋರಿಸುತ್ತಾರೆ ಎಂದು ಇಡ್ಕಿದು ತಾ.ಪಂ. ಸದಸ್ಯೆ ಬಿ. ವನಜಾಕ್ಷಿ ಆರೋಪಿಸಿದರು. ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ ನಮ್ಮ ಗ್ರಾಮದಲ್ಲಿಯೂ ಅದೇ ಸಮಸ್ಯೆ ಇದೆ ಎಂದರು.

ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅವರು ಅನುಮತಿ ನೀಡಿದರೆ ಗ್ರಾಮ ಕರಣಿಕರಿಗೆ ಕರ್ತವ್ಯ ನಿರ್ವಹಿಸಲು ಆದೇಶಿಸಬಹುದು. ಸದ್ಯ ಸರ್ವೆಯರ್‌ಗಳ ಸಹಾಯದಿಂದ ಅಳತೆ ಗಡಿ ಗುರುತಿಗೆ ತುರ್ತು ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಹಶೀಲ್ದಾರ್‌ ಹೇಳಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳ ಬಗ್ಗೆ ಸರಿಯಾದ ಸ್ಪಂದನವಿಲ್ಲ. ಆರೋಗ್ಯ ಕೇಂದ್ರ ಸಿಬಂದಿ ಅಸ್ಥೆ ವಹಿಸುವುದಿಲ್ಲ ಎಂದು ಬಿ. ವನಜಾಕ್ಷಿ ತಿಳಿಸಿದರು.

ಪಿಲಾತಬೆಟ್ಟು ಸದಸ್ಯ ರಮೇಶ ಕುಡುಮೇರು ಮಾತನಾಡಿ, ನೂತನ ಗ್ರಾ.ಪಂ.ಗೆ ಪೀಠೊಪಕರಣ ಒದಗಿಸುವ ಬಗ್ಗೆ ಆದೇಶವಾಗಿದ್ದು, ಅದನ್ನು ಸ್ವೀಕರಿಸಿ ಬಿಲ್‌ ಪಾವತಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯ ನಿರ್ವಹಣಾಧಿಕಾರಿ ಅವರು ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡುವುದಾಗಿ ತಿಳಿಸಿದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಜಿ.ಪಂ. ಸದಸ್ಯರಾದ ಮಂಜುಳಾ ಮಾಧವ ಮಾವೆ, ರವೀಂದ್ರ ಕಂಬಳಿ, ಎಂ. ತುಂಗಪ್ಪ ಬಂಗೇರ ಉಪಸ್ಥಿತರಿದ್ದರು. ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಸಮನ್ವಯತೆ
ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಇದರಿಂದ ಹೆಚ್ಚಿನ ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹಾರ ಕಾಣುತ್ತವೆ. ಸರಕಾರ ದಿಂದ ಆಗಬೇಕಾದ, ನಿರ್ದೇಶನ ಪಡೆಯಬೇಕಾದ ವಿಚಾರ ಬಂದಾಗ ನಮ್ಮ ಜತೆ ಚರ್ಚಿಸಿ.
– ಕೆ. ಚಂದ್ರಹಾಸ ಕರ್ಕೇರ
ಅಧ್ಯಕ್ಷರು, ತಾ.ಪಂ. ಬಂಟ್ವಾಳ

ಸಮಸ್ಯೆ ಪರಿಹರಿಸಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಸಮಸೆಗಳಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು. ಮೆಸ್ಕಾಂ ಜನಸಂಪರ್ಕ ಸಭೆಗೆ ಜನಪ್ರತಿನಿಧಿಗಳನ್ನು ಕರೆದು ಸಮಸ್ಯೆ ಪರಿಹಾರ ಆಗ‌ಬೇಕು.
– ಅಬ್ಟಾಸ್‌ ಅಲಿ
ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ

ಟಾಪ್ ನ್ಯೂಸ್

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.