Bantwal: ಅನಧಿಕೃತ ಗೂಡಂಗಡಿ, ಫ್ಲೆಕ್ಸ್ ತೆರವಿಗೆ ಗರುಡ
ಬಿ.ಸಿ.ರೋಡ್‌ನಲ್ಲಿ ಬ್ಯಾನರ್, ಬೀದಿ ಬದಿ ವ್ಯಾಪಾರದ ವಿರುದ್ಧ ಫೆ. 1ರಿಂದ ಕಾರ್ಯಾಚರಣೆ
Team Udayavani, Jan 30, 2025, 12:39 PM IST
![1](https://www.udayavani.com/wp-content/uploads/2025/01/1-53-620x331.jpg)
![1](https://www.udayavani.com/wp-content/uploads/2025/01/1-53-620x331.jpg)
ಬಂಟ್ವಾಳ: ಬಿ.ಸಿ. ರೋಡ್ ಸುತ್ತಮುತ್ತಲಿನ ಅನಧಿಕೃತ ಗೂಡಂಗಡಿಗಳು, ಬ್ಯಾನರ್, ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಬೀದಿ ಬದಿ ವ್ಯಾಪಾರದ ವಿರುದ್ಧ ಫೆ. 1ರಿಂದ ಪುರಸಭಾ ಅಧಿಕಾರಿಗಳ ತಂಡ ಯೋಜನಾಬದ್ಧವಾಗಿ ಗರುಡ ಕಾರ್ಯಾಚರಣೆಯ ಮೂಲಕ ತೆರವು ಮಾಡಲಿದ್ದು, ಫೆ. 20ರೊಳಗೆ ತೆರವು ಕಾರ್ಯ ಪೂರ್ಣಗೊಳಿಸಲಾಗುವುದು . ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಸದಸ್ಯರಿಗೆ ಭರವಸೆ ನೀಡಿದರು.
ಪುರಸಭೆಯ ಸಾಮಾನ್ಯ ಸಭೆ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅನಧಿಕೃತ ವ್ಯಾಪಾರದ ಕುರಿತು ಚರ್ಚೆ ನಡೆಯುವ ವೇಳೆ ಸದಸ್ಯ ರಾಮಕೃಷ್ಣ ಆಳ್ವ ಅವರು ಮಂಗಳೂರಿನಂತೆ ಇಲ್ಲಿಯೂ ಕಾರ್ಯಾ ಚರಣೆ ನಡೆಸಿ ಎಂದು ಪ್ರಸ್ತಾವಿಸಿದರು. ನೀವು ಮಂಗಳೂರಿನಲ್ಲಿ ಫೇಮಸ್ ಆದಂತೆ ಇಲ್ಲೂ ಫೇಮಸ್ ಆಗ ಬೇಕಲ್ಲ ಎಂದು ಕೆಲವು ಸದಸ್ಯರು ರೇಖಾ ಜೆ.ಶೆಟ್ಟಿ ಅವರ ಕಾಲೆಳೆದರು.
ನಮಗೆ ಫೇಮಸ್ ಆಗುವು ದಕ್ಕಿಂತಲೂ ಕೆಲಸ ಆಗಬೇಕು. ಗೂಡಂಗಡಿಗಳ ಜತೆಗೆ ಗುರುತಿನ ಚೀಟಿ ಪಡೆಯದೆ ಇರುವ ಬೀದಿ ಬದಿ ವ್ಯಾಪಾರವನ್ನೂ ತೆರವು ಮಾಡಿ ಮುಂದಿನ ಸಭೆಯೊಳಗೆ ತೆರವು ಕಾರ್ಯ ಪೂರ್ಣಗೊಳಿಸುತ್ತೇವೆ ಎಂದರು. ಈ ವೇಳೆ ಸದಸ್ಯ ಗೋವಿಂದ ಪ್ರಭು ಅವರು, ಮುಂದಿನ ಸಭೆಯೊಳಗೆ ಎಂದರೆ ಸಮಯ ಬಹಳ ಹೆಚ್ಚಾಯಿತು ಎಂದಾಗ ಫೆ. 20ರೊಳಗೆ ಎಂದು ಭರವಸೆ ನೀಡಿದರು.
ಬಿ.ಸಿ.ರೋಡಿನಲ್ಲಿರುವ ಡಾ| ಬಿ.ಆರ್.ಅಂಬೇಡ್ಕರ್ ಭವನವನ್ನು ಪುರಸಭೆಯ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್ ಆಗ್ರಹಿಸಿದರು. ಪುರಸಭಾ ಉಪಾಧ್ಯಕ್ಷ ಮೊನೀಶ್ ಆಲಿ ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೌರ ಕಾರ್ಮಿಕರಿಗೆ ವಸತಿ
ಜಕ್ರಿಬೆಟ್ಟು ಗಿರಿಗುಡ್ಡೆಯಲ್ಲಿ ಮುಚ್ಚಲ್ಪಟ್ಟಿರುವ ಸರಕಾರಿ ಶಾಲೆಯನ್ನು ಪುರಸಭೆಯ ಪೌರ ಕಾರ್ಮಿಕರಿಗೆ ವಸತಿ ಗೃಹವಾಗಿ ಪರಿವರ್ತಿಸೋಣ ಎಂಬ ಸದಸ್ಯ ಜನಾರ್ದನ ಚಂಡ್ತಿಮಾರ್ ಸಲಹೆ ನೀಡಿದರು. ಗೋವಿಂದ ಪ್ರಭು ಮಾತನಾಡಿ, ಅದಕ್ಕೆ ಈಗಾಗಲೇ ಪುರಸಭೆ ನಾಲ್ಕು ಬಾರಿ ಖರ್ಚು ಮಾಡಿದೆ, ಬರೀ ಚುನಾವಣೆಯ ಸಂದರ್ಭ ಮಾತ್ರ ಅದು ಬಳಕೆಯಾಗುತ್ತಿದೆ ಎಂದರು. ಸರಕಾರಿ ಶಾಲೆಯ ಜಾಗವು ಯಾರ ಸೊತ್ತು ಎಂಬುದನ್ನು ತಿಳಿದುಕೊಂಡು ಮುಂದುವರಿಯೋಣ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಲೋಕಾಯುಕ್ತ ತನಿಖೆಗೆ ಆಗ್ರಹ
ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿ ಸದಸ್ಯರು ನೀಡಿದ ಒಂದಾದರೂ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದೀರಾ ಲೋಕಾಯುಕ್ತ ತನಿಖೆಗೆ ನೀಡೋಣ ಎಂದರೆ ಬೇಡ ಹೇಳುತ್ತೀರಿ ಎಂದು ಸದಸ್ಯ ಹರಿಪ್ರಸಾದ್ , ಒಂದಾದರೂ ಸಮಸ್ಯೆ ಸರಿಮಾಡಿದ್ದರೆ ಹೇಳಲಿ ಎಂದು ಸದಸ್ಯ ಗೋವಿಂದ ಪ್ರಭು ಆಗ್ರಹಿಸಿದರು. ಅಬೂಬಕ್ಕರ್ ಸಿದ್ದೀಕ್ ಧ್ವನಿಗೂಡಿಸಿ ಲೋಕಾಯುಕ್ತಕ್ಕೆ ಕೊಡಿ ಎಂದು ಆಗ್ರಹಿಸಿದರು ನನ್ನ ಮೇಲೆ ವಿನಾಃ ಕಾರಣ ಗೂಬೆ ಕೂರಿಸುವುದು ಸರಿಯಲ್ಲ ಎಂದರು. ಲೋಕಾಯುಕ್ತಕ್ಕೆ ಕೊಡಬೇಕು ಎಂದು ಸರ್ವಾನುಮತದಿಂದ ಒಪ್ಪಿಗೆಯಾದರೆ ದೂರು ಕೊಡೋಣ ಎಂದು ಅಧ್ಯಕ್ಷರು ಉತ್ತರಿಸಿದರು. ಪಲ್ಲಮಜಲು ಭಾಗದಲ್ಲಿ ಕೊಳವೆಬಾವಿ ಕೊರೆದಿರುವುದಕ್ಕೆ ಸದಸ್ಯ ಹರಿಪ್ರಸಾದ್ ಆಕ್ಷೇಪಿಸಿದಾಗ, ನಿಮಗೆ ಅಲ್ಲಿನ ವಾಸ್ತವತೆ ಗೊತ್ತಿಲ್ಲ ಎಂದು ರಾಮಕೃಷ್ಣ ಆಳ್ವ ತಿಳಿಸಿದರು.
ಫ್ಲೆಕ್ಸ್-ಬ್ಯಾನರ್ ನಿಷೇಧ; ಬ್ಯಾನರ್ ತಯಾರಕರಿಗೂ ಎಚ್ಚರಿಕೆ
ಫ್ಲೆಕ್ಸ್-ಬ್ಯಾನರ್‌ಗಳಿಗೆ ಸಂಬಂಧಿಸಿ ಯಾವ ನಿಯಮವಿದೆ ಅದನ್ನು ಸ್ಪಷ್ಟಪಡಿಸಿ, ಇದು ಸಾಕಷ್ಟು ಗೊಂದಲ ಗಳಿಗೆ ಎಡೆ ಮಾಡಿಕೊಡುತ್ತಿದೆ. ಯಾವುದೇ ಸ್ಪಷ್ಟ ನಿಲುವಿಲ್ಲದೆ ನಮಗೂ ಕೂಡ ಜನರಿಗೆ ಉತ್ತರ ನೀಡುವುದು ಕಷ್ಟವಾಗುತ್ತಿದೆ ಎಂದು ಸದಸ್ಯ ಹರಿಪ್ರಸಾದ್ ಹೇಳಿದರು. ಈ ವೇಳೆ ಮುಖ್ಯಾಧಿಕಾರಿಗಳು ಉತ್ತರಿಸಿ, ಪ್ಲಾಸ್ಟಿಕ್ ಬ್ಯಾನರ್‌ಗೆ ಅವಕಾಶವಿಲ್ಲ, ಬಟ್ಟೆ ಬ್ಯಾನರ್ ಮಾತ್ರ ಹಾಕಬೇಕು ಎಂದು ಸರಕಾರದ ನಿರ್ದೇಶನವಿದೆ. ಕಾರ್ಯಾಚರಣೆಯ ಸಂದರ್ಭ ಬ್ಯಾನರ್‌ಗಳನ್ನೂ ತೆರವು ಮಾಡಲಾಗುವುದು. ಮುಂದಿನ ದಿನಗಳಲ್ಲಿ ತಹಶೀಲ್ದಾರ್ ನಿರ್ದೇಶನದಂತೆ ಬ್ಯಾನರ್ ತಯಾರಿಯ ಸಂಸ್ಥೆಗಳಿಗೂ ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದರು. ಹೋರ್ಡಿಂಗ್ಸ್‌ಗಳಿಗೆ ಸಂಬಂಧಿಸಿ ಖಾಸಗಿಯವರು ಆ್ಯಪ್ ಮೂಲಕ ಅರ್ಜಿ ಹಾಕಿ ಅನುಮತಿ ಪಡೆಯಬೇಕು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಸಿಸಿ ಕೆಮರಾ ವಿದ್ಯುತ್ ಶುಲ್ಕ
ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಅಳವಡಿಸುವ ಸಿಸಿ ಕೆಮರಾದ ವಿದ್ಯುತ್ ಶುಲ್ಕವನ್ನು ಪುರಸಭೆಯಿಂದ ಪಾವತಿಸುವ ಕುರಿತು ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಕಲೈಮಾರ್ ಪ್ರಸ್ತಾಪಿಸಿದರು. ಸಿಸಿ ಕೆಮರಾ ಎಂಬುದು ಜನತೆಯ ಸುರಕ್ಷತೆಯ ವಿಚಾರವಾಗಿದ್ದು, ನಾವು ಅದಕ್ಕೆ ಸಹಕಾರ ನೀಡಬೇಕು ಎಂದು ಸದಸ್ಯರಾದ ಲುಕ್ಮಾನ್, ಬಂಟ್ವಾಳ ಹಾಗೂ ಅಬೂಬಕ್ಕರ್ ಸಿದ್ದಿಕ್ ತಿಳಿಸಿದರು.
ಅನಧಿಕೃತ ತಿಂಡಿ ತಯಾರಿ
ಕಳೆದ ಕೆಲವು ಸಮಯಗಳ ಹಿಂದೆ ಸಾರ್ವಜನಿಕರು ಅನಧಿಕೃತ ಬೋಟಿ ತಿಂಡಿಯ ಕುರಿತು ಪುರಸಭೆಗೆ ದೂರು ನೀಡಿದ್ದು, ಅದರ ಕುರಿತು ಏನು ಕ್ರಮಕೈಗೊಂಡಿದ್ದೀರಿ ಎಂದು ಮಹಮ್ಮದ್ ಶರೀಫ್ ಪ್ರಶ್ನಿಸಿದರು. ಅದನ್ನು ಸೀಝ್ ಮಾಡಿ 500 ಗ್ರಾಂ.ನಷ್ಟು ಖಾದ್ಯವನ್ನು ಆಹಾರ ಸರಬರಾಜು ಇಲಾಖೆಗೆ ಸ್ಯಾಂಪಲ್ ಕಳುಹಿಸಲಾಗಿದೆ. ಜತೆಗೆ ಆತ ಉದ್ಯಮ ಪರವಾನಿಗೆ ಪಡೆಯದೇ ಇರುವುದಕ್ಕೆ 500 ರೂ. ದಂಡ ವಿಧಿಸಲಾಗಿದೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು. ಆದರೆ ಆತ ಮತ್ತೆ ಬೋಟಿ ತಿಂಡಿಯನ್ನು ಮಾಡಿ ಮಾರಾಟ ಮಾಡುತ್ತಿದ್ದಾನೆ ಎಂದಾಗ ಅದನ್ನು ನಿಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಮುಖ್ಯಾಧಿಕಾರಿಗಳು ಭರವಸೆ ನೀಡಿದರು.
ಪಾರ್ಕಿಂಗ್‌ಗೆ ವ್ಯವಸ್ಥೆಯಾಗುತ್ತದೆ
ಕೈಕುಂಜೆ ರಸ್ತೆಯ ಇಕ್ಕೆಲಗಳ ಅನಧಿಕೃತ ನಿರ್ಮಾಣಗಳನ್ನು ತೆರವು ಮಾಡಿದರೆ ಪಾರ್ಕಿಂಗ್‌ಗೆ ವ್ಯವಸ್ಥೆಯಾಗುತ್ತದೆ ಎಂದು ಸದಸ್ಯ ಗೋವಿಂದ ಪ್ರಭು ತಿಳಿಸಿದಾಗ, ಅನಧಿಕೃತ ತೆರವಿಗೆ ಸಂಬಂಧಿಸಿ ನಾವು ಗೋವಿಂದ ಪ್ರಭುಗಳನ್ನು ಟಾರ್ಗೆಟ್ ಮಾಡದೆ ಎಲ್ಲರೂ ಜತೆಯಾಗಿ ನಿಂತು ಅನಧಿಕೃತ ನಿರ್ಮಾಣಗಳ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಮಹಮ್ಮದ್ ಶರೀಫ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
![Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ](https://www.udayavani.com/wp-content/uploads/2025/02/13-19-150x90.jpg)

Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
![Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ](https://www.udayavani.com/wp-content/uploads/2025/02/Beli-150x97.jpg)
![Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ](https://www.udayavani.com/wp-content/uploads/2025/02/Beli-150x97.jpg)
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
![ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ](https://www.udayavani.com/wp-content/uploads/2025/02/rooster-150x84.jpg)

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
![20-push-up](https://www.udayavani.com/wp-content/uploads/2025/02/20-push-up-150x90.jpg)
![20-push-up](https://www.udayavani.com/wp-content/uploads/2025/02/20-push-up-150x90.jpg)
![20-push-up](https://www.udayavani.com/wp-content/uploads/2025/02/20-push-up-150x90.jpg)
Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್