Bantwala:ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೂ ಗುಡ್ಡ ಕುಸಿತ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ

ಬಿ.ಸಿ.ರೋಡ್‌-ಪುಂಜಾಲಕಟ್ಟೆ ರಾ.ಹೆ.

Team Udayavani, Aug 13, 2023, 4:01 PM IST

14-bantwala

ಬಂಟ್ವಾಳ: ಬಿ.ಸಿ. ರೋಡ್‌- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು 2-3 ವರ್ಷವಾದರೂ ಇನ್ನೂ ಕೂಡ ಹೆದ್ದಾರಿ ಬದಿಯ ಅಪಾ ಯಕಾರಿ ಗುಡ್ಡ ಕುಸಿತದ ಸಮಸ್ಯೆಗೆ ಶಾಶ್ವತ ಪರಿಹಾರ ಲಭ್ಯವಾಗಿಲ್ಲ. ಬಂಟ್ವಾಳದ ನಾವೂರು ಗ್ರಾಮದ ಮಣಿಹಳ್ಳದಿಂದ ವಗ್ಗವರೆಗೂ ಈ ರೀತಿ ಪದೇ ಪದೆ ಗುಡ್ಡ ಕುಸಿಯುತ್ತಲೇ ಇದೆ.

ಹೆದ್ದಾರಿ ಅಭಿವೃದ್ಧಿಯ ವೇಳೆ ವಿಸ್ತರಣೆಗೆ ಹತ್ತಾರು ಅಡಿ ಎತ್ತರದ ಗುಡ್ಡ ಗಳನ್ನು ನೇರವಾಗಿ ತೆಗೆದ ಪರಿಣಾಮ ಪ್ರಸ್ತುತ ಮಳೆಗಾಲದಲ್ಲಿ ಮಣ್ಣು ಹದ ಗೊಂಡು ಗುಡ್ಡವು ಹೆದ್ದಾರಿಗೆ ಬೀಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರ ಜತೆಗೆ ಮರಗಳು ಗುಡ್ಡದ ಮೇಲಿದ್ದು, ಕುಸಿಯುವ ಸಂದರ್ಭ ಅವುಗಳು ಹೆದ್ದಾರಿಗೆ ಬಿದ್ದು, ಜೀವಹಾನಿ ಸಂಭವಿಸುವ ಆತಂಕವೂ ಇದೆ.

ಹೆದ್ದಾರಿಯಲ್ಲಿ ಧರ್ಮಸ್ಥಳ, ಚಿಕ್ಕಮಗಳೂರು, ಚಾರ್ಮಾಡಿ ಘಾಟ್‌ ರಸ್ತೆಯ ಮೂಲಕ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳು ಸೇರಿದಂತೆ ಸಾವಿರಾರು ವಾಹನಗಳು ರಾತ್ರಿ-ಹಗಲು ಸಂಚರಿಸುತ್ತಿದ್ದು, ಒಂದು ವೇಳೆ ವಾಹನಗಳು ಸಾಗುವ ವೇಳೆ ಈ ಗುಡ್ಡ ಕುಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಭೂ ಸ್ವಾಧೀನಕ್ಕೆ ಅನುಮತಿ

ಬಿ.ಸಿ.ರೋಡ್‌-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗಾಗಿ 2018-19ರ ಸುಮಾರಿಗೆ ಕಾಮಗಾರಿ ಆರಂಭಗೊಂಡಿದ್ದು, ಆ ಸಂದರ್ಭದಲ್ಲಿ ಯೋಜಿತ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ 2020ರ ಸಮಯದಲ್ಲಿ ಸುಮಾರು 50 ಅಡಿಯಷ್ಟು ಉತ್ತರದ ಗುಡ್ಡ ಪ್ರದೇಶವು ಕುಸಿಯುವುದಕ್ಕೆ ಆರಂಭಗೊಂಡ ವೇಳೆ ಖಾಸಗಿ ಜಾಗಗಳು ಮತ್ತೆ ರಸ್ತೆ ಪಾಲಾಗುತ್ತವೆ ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ ಗುಡ್ಡ ಪ್ರದೇಶವನ್ನು ತಗ್ಗುಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು ಉಪವಿಭಾಗದಿಂದ ಹೆಚ್ಚು ವರಿ ಭೂ ಸ್ವಾಧೀನಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಪ್ರಸ್ತುತ ಭೂ ಸ್ವಾಧೀನಕ್ಕೆ ಅನುಮತಿ ದೊರಕಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಜಾಗದ ಮಾಲಕರಿಗೆ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾ ಧಿಕಾರಿಗಳ ಮೂಲಕ ಜಾಗದ ಮೊತ್ತ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಗುಡ್ಡ ತೆರವಿಗೆ ಸಂಬಂಧಿಸಿ ದಂತೆ ಹೆಚ್ಚುವರಿ ಅನುದಾನ ಲಭ್ಯವಾಗಬೇಕಿರು ವುದರಿಂದ ಅದರ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದೆ. ಗುಡ್ಡ ಕುಸಿದ ಸಂದರ್ಭದಲ್ಲಿ ಹೆದ್ದಾರಿ ಇಲಾಖೆಯೇ ಮಣ್ಣು ತೆರವು ಮಾಡುತ್ತದೆಯೇ ವಿನಃ ಅಪಾಯಕಾರಿಯಾಗಿರುವ ಗುಡ್ಡಗಳ ಕುರಿತು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಇಲಾಖೆಯ ವತಿಯಿಂದ ಮಣ್ಣು ತೆರವು ಹೆಚ್ಚುವರಿ ಭೂಸ್ವಾಧೀನಕ್ಕೆ ಸಂಬಂಧಿಸಿ ಪ್ರಸ್ತುತ ಅನುಮೋದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಮೂಲಕ ಜಾಗದ ಮಾಲಕರಿಗೆ ಮೊತ್ತ ಸಂದಾಯವಾಗಲಿದೆ. ಮಳೆಗಾಲ ದಲ್ಲಿ ಮಣ್ಣು ಹದಗೊಂಡು ಗುಡ್ಡ ಕುಸಿಯುತ್ತಿದ್ದು, ಕುಸಿದ ಮಣ್ಣನ್ನು ಇಲಾಖೆಯೇ ತೆರವು ಮಾಡುತ್ತಿದೆ. -ಮಹಾಬಲ ನಾಯ್ಕ, ಎಇಇ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು

ಮಣಿಹಳ್ಳ ಭಾಗದಲಿ ಕುಸಿತ

2020ರಿಂದಲೇ ಗುಡ್ಡ ಕುಸಿಯುತ್ತಿದ್ದು, ಬಡಗುಂಡಿ ಭಾಗದಲ್ಲಿ ಅರ್ಧಕ್ಕೆ ನಿರ್ಮಾಣಗೊಂಡಿರುವ ತಡೆಗೋಡೆಯನ್ನೂ ದೂಡುವಷ್ಟರ ಮಟ್ಟಿಗೆ ಗುಡ್ಡ ಹೆದ್ದಾರಿಗೆ ಬಾಗಿಕೊಂಡಿದೆ. ಕಳೆದ ವರ್ಷ ಈ ಭಾಗದಲ್ಲಿ ಗುಡ್ಡ ಕುಸಿದು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು. ಜತೆಗೆ ಗುಡ್ಡದ ತಳಭಾಗದಲ್ಲಿ ಹೆದ್ದಾರಿ ಬದಿಗೆ ಹಾಕಲಾಗಿದ್ದ ವಿದ್ಯುತ್‌ ಕಂಬಗಳ ಮೇಲೂ ಗುಡ್ಡ ಕುಸಿದು ಹಾನಿಯಾಗಿತ್ತು. ಈ ವರ್ಷದ ಮಳೆ ಪ್ರಾರಂಭದ ಸಂದರ್ಭದಲ್ಲೇ ಮಣಿಹಳ್ಳ ಭಾಗದಲ್ಲಿ ಗುಡ್ಡ ಕುಸಿದಿದ್ದು, ಅದರ ಜತೆಗೆ ಮರಗಳು ಕೂಡ ಹೆದ್ದಾರಿಗೆ ಬಿದ್ದಿತ್ತು. ಪ್ರಸ್ತುತ ಅದನ್ನು ತೆರವು ಮಾಡಿದ್ದರೂ, ಇನ್ನೂ ಕೂಡ ಗುಡ್ಡ ಅಪಾಯದ ಸ್ಥಿತಿಯಲ್ಲೇ ಇದ್ದು, ಮತ್ತೆ ಯಾವಾಗ ಕುಸಿಯುತ್ತದೆ ಎಂದು ಹೇಳುವಂತಿಲ್ಲ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.