![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 5, 2023, 11:12 AM IST
ಬಂಟ್ವಾಳ: ಪ್ರತೀ ಮಳೆಗಾಲ ದಲ್ಲೂ ಹಲವು ಬಾರಿ ನೇತ್ರಾವತಿ ನದಿ ತುಂಬಿ ಹರಿದು ಬಂಟ್ವಾಳ ಪೇಟೆ ಸಹಿತ ತಾಲೂಕಿನ ಹಲವು ಪ್ರದೇಶಗಳಲ್ಲಿ ಆತಂಕ ಸೃಷ್ಟಿಸುತ್ತಿತ್ತು. ಆದರೆ ಈ ವರ್ಷ ದಿನೇ ದಿನೆ ನೀರು ಬತ್ತಿ ತಳದಲ್ಲಿರುವ ಕಲ್ಲುಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸೆಪ್ಟಂಬರ್ ವೇಳೆಗೆ 7-8 ಮೀ. ನಲ್ಲಿ ಹರಿಯಬೇಕಾದ ನೀರು 3 ಮೀ.ಗಿಂತಲೂ ಕಡಿಮೆ ಇರುವುದು ಆತಂಕ ಸೃಷ್ಟಿಸಿದೆ.
ನೇತ್ರಾವತಿ ಹರಿಯುವ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಅಣೆಕಟ್ಟು ಗಳಿರುವ ಕಾರಣ ಸದ್ಯ ನದಿಯಲ್ಲಿ ಸ್ವಲ್ಪವಾದರೂ ನೀರಿದೆ. ಇಲ್ಲದಿದ್ದಲ್ಲಿ ನದಿ ಈಗಾಗಲೇ ಮೈದಾನದಂತಾ ಗುತ್ತಿತ್ತು. ಶಂಭೂರಿನಲ್ಲಿರುವ ವಿದ್ಯುತ್ ಉತ್ಪಾದನೆಯ ಎಎಂಆರ್ ಡ್ಯಾಂನಲ್ಲಿ 18. 90 ಮೀ. ನೀರಿದ್ದರೂ ಅಲ್ಲಿನ 12 ಯಂತ್ರಗಳ ಪೈಕಿ ಕೇವಲ 2 ಯಂತ್ರಗಳು ಮಾತ್ರ ಕಾರ್ಯಾಚರಿಸುತ್ತಿವೆ.
ಪುರಸಭಾ ವ್ಯಾಪ್ತಿಗೂ ಬರ !
ಬಂಟ್ವಾಳ ಪುರಸಭೆ ವ್ಯಾಪ್ತಿಗೆ ಜಕ್ರಿಬೆಟ್ಟಿ ನಲ್ಲಿ ನೇತ್ರಾವತಿ ನದಿಯಿಂದ ಜಾಕ್‌ವೆಲ್ ಮೂಲಕ ನೀರನ್ನು ತೆಗೆಯಲಾಗುತ್ತಿದೆ. ಕಳೆದ ವರ್ಷ ಬೇಸಗೆಯಲ್ಲಿ ನೀರು ಬತ್ತಿ ಜಾಕ್‌ವೆಲ್‌ಗೆ ಹೊಂಡಗಳಿಂದ ನೀರು ಹರಿಸಲು ಪ್ರಯತ್ನಿಸಲಾಗಿತ್ತು. ಈಗಲೇ ನೀರು ಗಣನೀಯವಾಗಿ ಇಳಿಕೆಯಾಗಿದೆ. ಮಳೆ ಬಾರದಿದ್ದರೆ ಪುರಸಭಾ ವ್ಯಾಪ್ತಿಗೆ ಡಿಸೆಂಬರ್-ಜನವರಿಯಲ್ಲೇ ನೀರಿನ ಕೊರತೆ ಸೃಷ್ಟಿಯಾಗಲೂಬಹುದು.
ಈಗ ಜಕ್ರಿಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ಆದರೆ ಕಾಮ ಗಾರಿ ಪೂರ್ಣಗೊಳ್ಳದ ಕಾರಣ ಅಲ್ಲಿಯ ವರೆಗೆ ಅದರಲ್ಲಿ ನೀರು ನಿಲ್ಲಿಸಲಾಗದು. ತಾಲೂಕಿನ ಗ್ರಾಮೀಣ ಭಾಗಗಳಿಗೆ ನೀರು ಪೂರೈಸುವ ಸರಪಾಡಿ, ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್‌ವೆಲ್ ಭಾಗದಲ್ಲೂ ನದಿಯಲ್ಲಿ ನೀರು ಕ್ಷೀಣಿಸಿದ ಪರಿಣಾಮ ತೊಂದರೆ ಉಂಟಾಗಿತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗುವ ಆತಂಕ ಬಹುವಾಗಿ ಕಾಡತೊಡಗಿದೆ.
40 ಮೆಗಾವ್ಯಾಟ್ ಉತ್ಪಾದನೆ ಕುಸಿತ
ಆಗಸ್ಟ್-ಸೆಪ್ಟಂಬರ್ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಕಾರಣ ಎಎಂಆರ್ ಪವರ್ ಪ್ರಾಜೆಕ್ಟ್ ನ ಎಲ್ಲ ಯಂತ್ರಗಳು ಕಾರ್ಯಾಚರಿಸಿ ಗಂಟೆಗೆ 47 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಈಗ ನೀರಿನ ಒಳಹರಿವು ಕುಸಿದ ಪರಿಣಾಮ 2 ಯಂತ್ರಗಳು ಕಾರ್ಯಾಚರಿಸಿದರೂ 10 ರ ಬದಲು 7ರಿಂದ 8 ಮೆಗಾ ವ್ಯಾಟ್ ಮಾತ್ರ ವಿದ್ಯುತ್ ಅನ್ನು ಉತ್ಪಾದಿಸಲು ಸಾಧ್ಯವಾಗುತ್ತಿದೆ. ಇದರಿಂದ ಸುಮಾರು 40 ಮೆಗಾ ವ್ಯಾಟ್‌ನಷ್ಟು ಉತ್ಪಾದನೆ ಕುಸಿತ ಕಂಡಿದೆ.
ಶಂಭೂರು ಅಣೆಕಟ್ಟಿನಲ್ಲಿ ತಲಾ 5 ಮೆಗಾ ವ್ಯಾಟ್ ಉತ್ಪಾದನೆಯ 12 ಯಂತ್ರಗಳಿದ್ದು, ಒಟ್ಟು ಉತ್ಪಾದನ ಸಾಮರ್ಥ್ಯ 60 ಮೆಗಾ ವ್ಯಾಟ್ ಗಳು. ಎಎಂಆರ್ ಪವರ್ ಪ್ರಾಜೆಕ್ಟ್ ವಿದ್ಯುತ್ ಉತ್ಪಾದನೆ ಮಾಡಿ ಸರಕಾರಿ ಸ್ವಾಮ್ಯಕ್ಕೆ ಮಾರುತ್ತಿದ್ದು, ಅದರ ಪ್ರಮಾಣ ದೊಡ್ಡದು. ಒಂದುವೇಳೆ ಅಲ್ಲದೇ ಇದ್ದರೂ ಮುಂದಿನ ದಿನಗಳಲ್ಲಿ ಉತ್ಪಾದನೆ ಕಡಿಮೆಯಾಗಿ ತೊಂದರೆ ಸಂಭವಿಸುವ ಸಾಧ್ಯತೆಯನ್ನೂ ಸದ್ಯ ತಳ್ಳಿ ಹಾಕುವಂತಿಲ್ಲ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.