![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 22, 2022, 12:07 PM IST
ಬಂಟ್ವಾಳ : ಕೆಜೆ ಹಳ್ಳಿ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಹಾಗೂ ವಿಟ್ಲ ಪೋಲೀಸರ ತಂಡ ಗುರುವಾರ ಬೆಳಂಬೆಳಗ್ಗೆ ಬೊಳಂತೂರಿನ ಮಹಮ್ಮದ್ ತಪ್ಸೀರ್ ಅವರ ಮನೆ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳ ಸಹಿತ ಮಹಮ್ಮದ್ ತಪ್ಸೀರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯ ಪೋಲೀಸ್ ನಿರ್ದೇಶನದಂತೆ ಬೊಳಂತೂರು ನಿವಾಸಿ ಮಹಮ್ಮದ್ ಕುಂಟ್ಟಿ ಅವರ ಪುತ್ರನಾಗಿರುವ ಮಹಮ್ಮದ್ ತಪ್ಸೀರ್ ಮನಗೆ ಗುರುವಾರ ಮುಂಜಾನೆ ಮೂರು ಗಂಟೆ ವೇಳೆ ಪೋಲೀಸ್ ದಾಳಿ ನಡೆಸಿ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿ ತಪ್ಸೀರ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಮನೆಯಲ್ಲಿದ್ದ ಕೆಲವೊಂದು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ತಪ್ಸೀರ್ ಅವರನ್ನು ವಶಕ್ಕೆ ಪಡೆದ ಬಂಟ್ವಾಳ ಹಾಗೂ ವಿಟ್ಲ ಪೋಲೀಸರ ತಂಡ ಹೆಚ್ಚಿನ ವಿಚಾರಣೆಗೆ ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ನಗರ ಠಾಣಾ ಪೋಲೀಸ್ ಪಿಎಸ್ಐಗಳಾದ ಅವಿನಾಶ್, ಹರೀಶ್ ಸಹಿತ ಇಡೀ ಪೋಲೀಸ್ ತಂಡ, ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್ ಇದ್ದರು.
You seem to have an Ad Blocker on.
To continue reading, please turn it off or whitelist Udayavani.