Bantwala: ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ

ಕಾಮಗಾರಿ ಅವ್ಯವಸ್ಥೆ: ರಸ್ತೆ ಬದಿಯ ಮನೆಗಳ ಅಡಿಪಾಯವನ್ನೇ ಅಲುಗಾಡಿಸಿದ ಜೆಸಿಬಿಗಳು; ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೇ ಮಣ್ಣು, ದಾರಿಯೇ ಇಲ್ಲ; ತೋಟ, ಗದ್ದೆ ತುಂಬ ಕೆಸರು!

Team Udayavani, Oct 22, 2024, 12:18 PM IST

1(1)

ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಮನೆಗಳು, ಪೆರ್ನೆ ಸಮೀಪದ ದೋರ್ಮೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕೆಸರು ನೀರು

ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಹೆದ್ದಾರಿಯಲ್ಲಿ ಸಾಗುವವರು ಒಂದು ರೀತಿಯ ಸಮಸ್ಯೆ ಎದುರಿಸಿದರೆ ಹೆದ್ದಾರಿಯ ಇಕ್ಕೆಲಗಳಲ್ಲಿ ಮನೆ, ಕೃಷಿ ಭೂಮಿ, ವ್ಯವಹಾರ ನಡೆಸುತ್ತಿರುವವರು ನಿತ್ಯ ನರಕಯಾತನೆ ಅನುಭವಿಸಬೇಕಾದ ಸ್ಥಿತಿ ಇದೆ. ಹೆದ್ದಾರಿ ಅಂಚಿನ ಎಷ್ಟೋ ಮನೆಗಳು ಅಪಾಯದಲ್ಲಿವೆ. ದಾರಿಯನ್ನು ಕಳೆದುಕೊಂಡಿವೆ. ಸಾಕಷ್ಟು ಕೃಷಿ ಭೂಮಿಗಳಿಗೆ ಮಳೆ ನೀರಿನ ಜತೆಗೆ ಕೆಸರು ನುಗ್ಗಿ ಇಡೀ ಕೃಷಿಯೇ ನಾಶವಾಗುವ ಸ್ಥಿತಿ ಎದುರಾಗಿದೆ.

ನೇರವಾದ ಹೆದ್ದಾರಿಯ ನಿರ್ಮಾಣ, ಏರು- ತಗ್ಗುಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಹೆದ್ದಾರಿ ಅಂಚಿನ ನಿವಾಸಿಗಳ ಹಿತವನ್ನು ನೋಡದೆ ವಿನ್ಯಾಸ ಮಾಡಲಾಗಿದೆ. ಇದರ ಪರಿಣಾಮ ಎತ್ತರದಲ್ಲಿರುವ ಮತ್ತು ತಗ್ಗಿನಲ್ಲಿರುವ ಮನೆಗಳು ಸಂಪರ್ಕದ ದಾರಿಯನ್ನೇ ಕಳೆದುಕೊಂಡಿವೆ. ಎತ್ತರದಲ್ಲಿರುವ ಮನೆಗಳ ಬುಡಕ್ಕೇ ಜೆಸಿಬಿ ನುಗ್ಗಿದೆ. ಹೀಗಾಗಿ ಕೆಲವು ಮನೆಗಳ ಪಂಚಾಂಗವೇ ಅಪಾಯದಲ್ಲಿದೆ. ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೆ ಮಣ್ಣು ನುಗ್ಗಿ ಈಗಲೂ ಅಂಗಳದಲ್ಲಿ ಮಣ್ಣಿನ ರಾಶಿ ಕಾಣಬಹುದಾಗಿದೆ. ಸಾಕಷ್ಟು ಕೃಷಿ ತೋಟಗಳು, ಗದ್ದೆಗಳಲ್ಲಿ ಮಣ್ಣು, ಕೆಸರು ತುಂಬಿದ್ದು, ಬೆಳೆ ನಾಶದ ಜತೆಗೆ ಮತ್ತೆ ಕೃಷಿ ಮಾಡಲಾಗದ ಸ್ಥಿತಿ ಇದೆ.

ಮನೆ, ಕೃಷಿಯ ಜತೆಗೆ ಹೆದ್ದಾರಿ ಬದಿ ಸಣ್ಣ ಅಂಗಡಿ, ಉದ್ಯಮ ಸಂಸ್ಥೆಗಳ ಸ್ಥಿತಿಯೂ ನೆಲಕಚ್ಚಿ ಹೋಗಿದ್ದು, ಸಾಕಷ್ಟು ಕಡೆ ಸಂಪರ್ಕ ರಸ್ತೆ, ಕಾಲು ದಾರಿಯೂ ಇಲ್ಲದೆ ವ್ಯಾಪಾರಕ್ಕೂ ಬಲುದೊಡ್ಡ ಹೊಡೆತ ಬಿದ್ದಿದೆ. ಕೆಸರಿನ ಕಾರಣಕ್ಕೆ ಹೆದ್ದಾರಿಯಲ್ಲಿ ಸಾಗುವವರು ವಾಹನವನ್ನು ನಿಲ್ಲಿಸಲು ಹಿಂದೇಟು ಹಾಕಿ ವ್ಯಾಪಾರ ಬೇರೆಡೆಗೆ ಹೋಗುತ್ತಿದೆ. ಇನ್ನು ವಿಪರೀತ ಧೂಳಿನ ಪರಿಣಾಮ ಬೇಕರಿ ಮಳಿಗೆಗಳು, ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಳಿಗೆಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.

ಮಾಣಿ ಜಂಕ್ಷನ್‌: ನೂರಾರು ಟೆನ್ಶನ್‌
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಾಣಿ ಜಂಕ್ಷನ್‌ನಲ್ಲಿ ರಾ.ಹೆ.75ರಿಂದ ಮತ್ತೂಂದು ಹೆದ್ದಾರಿ ಕವಲೊಡೆಯುತ್ತಿದ್ದು, ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ವಾಹನಗಳು ಡೈವರ್ಶನ್‌ ತೆಗೆದುಕೊಳ್ಳುತ್ತಿದೆ. ಹೀಗಾಗಿ ಬಿ.ಸಿ.ರೋಡು ಭಾಗದಿಂದ ಉಪ್ಪಿನಂಗಡಿಗೆ ಹೋಗುವ ವಾಹನಗಳು, ಪುತ್ತೂರು ಕಡೆಗೆ ಸಾಗುವ ವಾಹನಗಳು, ಎರಡೂ ಭಾಗದಿಂದಲೂ ಬಿ.ಸಿ.ರೋಡು ಕಡೆಗೆ ಆಗಮಿಸುವ ವಾಹನಗಳು ಹೀಗೆ ಎಲ್ಲವೂ ಗೊಂದಲಮಯವಾಗಿದೆ.

ಮಾಣಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸಿ ಹೆದ್ದಾರಿಯು ನೇರವಾಗಿ ಮೇಲಿಂದಲೇ ಸಾಗಲಿದ್ದು, ಎರಡೂ ಬದಿಯಲ್ಲೂ ಸರ್ವೀಸ್‌ ರಸ್ತೆ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಒಂದೇ ಬದಿಯಲ್ಲಿ ವಾಹನ ಬಿಡಲಾಗಿದ್ದು, ಮತ್ತೂಂದು ಬದಿಯ ಸರ್ವೀಸ್‌ ರಸ್ತೆ ನಿರ್ಮಾಣಗೊಂಡಿಲ್ಲ. ಇದು ಬಲುದೊಡ್ಡ ಸಮಸ್ಯೆಯಾಗಿದ್ದು, ಹೆಚ್ಚಿನ ವಾಹನದೊತ್ತಡ ಉಂಟಾದಾಗ ಸರತಿಯಲ್ಲಿ ನಿಲ್ಲಬೇಕಿದೆ. ಮತ್ತೂಂದೆಡೆ ಡಾಮಾರು ಹಾಕಿದರೂ ಒಂದೇ ದಿನದಲ್ಲಿ ಎದ್ದು ಹೋಗಿ ಹೊಂಡಗಳು ಸೃಷ್ಟಿಯಾಗುತ್ತಿದೆ. ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವ ಸಮಸ್ಯೆಯೂ ಇದೆ.

ಶಬ್ದಕ್ಕೆ ಮನೆಯಲ್ಲೇ ನಿಲ್ಲಲಾಗದ ಸ್ಥಿತಿ!
ಸಾಮಾನ್ಯವಾಗಿ ಯಾವುದೇ ಹೆದ್ದಾರಿಯ ಬದಿ ಮನೆಗಳಿದ್ದರೆ ಹಗಲು-ರಾತ್ರಿ ವಾಹನ ಸದ್ದು ಸಾಮಾನ್ಯ. ಆದರೆ ಇಲ್ಲಿ ಕೇಳುವ ಶಬ್ದ ಎದೆಯನ್ನೇ ನಡುಗಿಸಿ ಬಿಡುತ್ತಿದೆ. ಹೆದ್ದಾರಿಯು ಸಂಪೂರ್ಣ ಹೊಂಡಗಳಿಂದ ತುಂಬಿರುವುದರಿಂದ ಬೃಹತ್‌ ಗಾತ್ರದ ಕಂಟೈನರ್‌ಗಳು ಸಾಗುವ ವೇಳೆ ಬಾಂಬ್‌ ಬಿದ್ದಷ್ಟೇ ದೊಡ್ಡ ಶಬ್ದ ಕೇಳುತ್ತಿದೆ. ಘನ ವಾಹನಗಳು ರಾತ್ರಿಯಲ್ಲೇ ಹೆಚ್ಚಾಗಿ ಸಾಗುವುದರಿಂದ ಮನೆಯಲ್ಲಿ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ ಎಂಬುದು ಹೆದ್ದಾರಿಯಂಚಿನ ನಿವಾಸಿಗಳ ಅಳಲಾಗಿದೆ.

ಕುಸಿಯುವ ಭೀತಿಯಲ್ಲಿ ಮನೆಗಳು
ಹೆದ್ದಾರಿಯನ್ನು ತಗ್ಗಿಸುವ ಉದ್ದೇಶದಿಂದ ಧರೆಗಳನ್ನು ನೇರವಾಗಿ ಅಗೆದು ಹಾಕಲಾಗಿದ್ದು, ಸಾಕಷ್ಟು ಮನೆಗಳು ಕುಸಿಯುವ ಭೀತಿಯಲ್ಲಿವೆ. ಒಂದಷ್ಟು ಕಡೆಗಳಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಾಣಗೊಂಡಿದ್ದರೂ, ಅವುಗಳನ್ನು ಮೀರಿ ಗುಡ್ಡ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಕುಸಿತ ಉಂಟಾದರೆ ಸಾಕಷ್ಟು ಮನೆಗಳು ಕುಸಿದು ಬೀಳುವ ಅಪಾಯವಿದೆ. ಹೆಚ್ಚುವರಿ ಭೂಸ್ವಾಧೀನ ನಡೆಸಿ ಪರಿಹಾರ ನೀಡಿ ಅಪಾಯಕಾರಿ ಮನೆ, ಗುಡ್ಡಗಳನ್ನು ತೆರವು ಮಾಡಿದರೆ ಪರಿಹಾರ ಸಿಗಬಹುದಾಗಿದ್ದು, ಹೆದ್ದಾರಿ ಪ್ರಾಧಿಕಾರವು ಆ ಕಾರ್ಯವನ್ನೂ ಮಾಡುತ್ತಿಲ್ಲ.

ಡಿಸಿ ಭೇಟಿ ನೀಡಿದರೂ ಪ್ರಯೋಜನವಿಲ್ಲ
ಪೆರ್ನೆ ಸಮೀಪದ ದೋರ್ಮೆಯಲ್ಲಿ ಚಂದ್ರಾವತಿ ಹಾಗೂ ಧರ್ಣಪ್ಪ ನಾಯ್ಕ ಅವರ ಸುಮಾರು 2 ಎಕರೆ ವಿಸ್ತೀರ್ಣದ ಅಡಿಕೆ ತೋಟದಲ್ಲಿ ಮಳೆಗಾಲ ಆರಂಭದಿಂದಲೂ ಈಗಿನವರೆಗೆ ನೀರು ನಿಲ್ಲುತ್ತಿದ್ದು, ಹೆಚ್ಚಿನ ಅಡಿಕೆ ಮರಗಳು ಈಗಾಗಲೇ ಸತ್ತು ಹೋಗಿವೆ. ಸಾಕಷ್ಟು ದೂರಿನ ಬಳಿಕ ತೋಟದ ನೀರು ಹರಿದು ಹೋಗುವುದಕ್ಕೆ ಪೈಪು ಹಾಕಿದರೂ ನೀರು ಹರಿದು ಹೋಗುತ್ತಿಲ್ಲ. ಕಳೆದ ಸುಮಾರು 2 ತಿಂಗಳ ಹಿಂದೆ ಸ್ಥಳಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಅವರು ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.