ಪಂಜ ಗ್ರಾಮಸ್ಥರಿಗೆ ಕೊಳಚೆ ನೀರೇ ಗತಿ!

ಹೊಳೆಗೆ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು; ನದಿ ನೀರು ಮಲಿನ

Team Udayavani, Dec 31, 2019, 4:29 AM IST

ve-39

ಸುಬ್ರಹ್ಮಣ್ಯ : ಕಡಬ – ಪಂಜ ಸಂಪರ್ಕ ರಸ್ತೆ ಮಧ್ಯೆ ಕೂಟೇಲು ಸಾರು ಬಳಿಯಿರುವ ಸೇತುವೆ ಮೇಲಿಂದ ತ್ಯಾಜ್ಯಗಳನ್ನು ನದಿಗೆ ಎಸೆಯಲಾಗುತ್ತಿದೆ. ಇವುಗಳು ಪಕ್ಕದಲ್ಲೇ ಹರಿಯುವ ಕುಮಾರಧಾರಾ ನದಿಗೆ ಸೇರುತ್ತಿವೆ. ಪರಿಣಾಮವಾಗಿ ಪಂಜ ಗ್ರಾಮಸ್ಥರಿಗೆ ಕುಡಿಯಲು ಕೊಳಚೆ ನೀರು ಪೂರೈಕೆಯಾಗುತ್ತಿದ್ದು, ರೋಗ ಭೀತಿ ಆವರಿಸಿದೆ. ಕಡಬದಿಂದ 7 ಕಿ.ಮೀ. ಹಾಗೂ ಪಂಜದಿಂದ 3 ಕಿ.ಮೀ. ದೂರದಲ್ಲಿರುವ ನದಿಗೆ ತ್ಯಾಜ್ಯಗಳನ್ನು ಎಸೆಯುತ್ತಿರುವ ಕುರಿತು ಈ ಪರಿಸರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಪೂರ್ಣ ಮಲಿನ ಕಡಬ- ಪಂಜ ರಸ್ತೆ ನಡುವೆ ಹರಿಯುತ್ತಿರುವ ಕೂಟೇಲು ಸಾರು ಹೊಳೆಗೆ
ಕೊಳೆತ ಮೊಟ್ಟೆ, ಮಾಂಸ, ತರಕಾರಿ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು, ಸತ್ತ ಪ್ರಾಣಿಗಳನ್ನು ಹಾಗೂ ಇತರ ಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ತಂದು ಎಸೆಯುವ ಕೃತ್ಯಗಳು ನಿರಂತರ ವಾಗಿ ನಡೆಯುತ್ತಿವೆ. ಇದರಿಂದಾಗಿ ಈ ಪರಿಸರದಲ್ಲಿ ಹೊಳೆಯ ನೀರು ಸಂಪೂರ್ಣ ಮಲಿನಗೊಂಡಿದೆ.

ನದಿಗೆ ಸೇರುತ್ತದೆ
ಇದೇ ನೀರು ಹರಿದು ಕುಮಾರಧಾರಾ ನದಿಯನ್ನು ಸೇರುತ್ತಿದೆ. ಕುಮಾರಧಾರಾ ನದಿಗೆ ಬೃಹತ್‌ ಗಾತ್ರದ ಜಾಕ್‌ವೆಲ್‌ ಅನ್ನು ನಿರ್ಮಿಸಿ, ತೊಟ್ಟಿಯಲ್ಲಿ ನೀರು ಸಂಗ್ರಹಿಸಿ ಪಂಜ ಗ್ರಾಮಸ್ಥರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಹೊಳೆಯಲ್ಲಿದ್ದ ತ್ಯಾಜ್ಯಗಳು ನೀರಿನೊಂದಿಗೆ ತೊಟ್ಟಿ ಯನ್ನು ಸೇರುತ್ತಿದ್ದು, ಅದು ನೇರವಾಗಿ ಪಂಜ ಗ್ರಾಮಸ್ಥರಿಗೆ ಪೂರೈಕೆಯಾಗುತ್ತದೆ. ಕೊಳವೆಯ ತುದಿಗೆ ಫಿಲ್ಟರ್‌ಗಳನ್ನು ಅಳವಡಿಸದ ಕಾರಣ ಈ ಸಮಸ್ಯೆಯಾಗುತ್ತಿದೆ. ಕಸ ಕಡ್ಡಿ, ತ್ಯಾಜ್ಯಗಳು ಹರಿಯುವುದನ್ನು ತಡೆಯುವ ಯಾವ ಸಾಧನಗಳನ್ನೂ ಇಲ್ಲಿ ಅಳವಡಿಸಿಲ್ಲ.

ಕುಡಿಯುವ ನೀರು
ಹೊಳೆ ನೀರಿನಲ್ಲೇ ಹಲವರು ಸ್ನಾನ ಮಾಡುತ್ತಿದ್ದಾರೆ. ಕುಮಾರಧಾರಾ ನದಿ ತಟದ ಜನರು ಈ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಾರೆ. ತ್ಯಾಜ್ಯ ಎಸೆಯುವ ಹೊಳೆಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ರೋಗ – ರುಜಿನ ಹಬ್ಬುವ ಆತಂಕ ಎದುರಾಗಿದೆ. ರಸ್ತೆ ಪಕ್ಕದಲ್ಲಿರುವ ಹೊಳೆ ಬದಿಯಲ್ಲಿ ಕೊಳೆತ ಹಸಿ ಮೀನುಗಳನ್ನು ತಂದು ಸುರಿಯುತ್ತಾರೆ. ಕಿಡಿಗೇಡಿಗಳು ರಾತ್ರಿ ವೇಳೆ ವಾಹನಗಳಲ್ಲಿ ತಂದು ಉಪಯೋಗಕ್ಕಿಲ್ಲದ ಹಸಿಮೀನು, ಕೋಳಿ ತ್ಯಾಜ್ಯಗಳನ್ನು ಇಲ್ಲಿ ಎಸೆದು ಹೋಗುತ್ತಿರುವುದು ನಿರಂತರವಾಗಿದೆ. ಈ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡೇ ಸಂಚರಿಸುವ ಸ್ಥಿತಿ ಉದ್ಭವಿಸಿದೆ.

ಮೀನು, ಮಾಂಸ ಎಸೆಯುತ್ತಾರೆ
ವಾರದಲ್ಲಿ ಒಂದೆರಡು ಸಲವಾದರೂ ಕೊಳೆತ ಮೀನು, ಮಾಂಸ ಎಸೆಯುತ್ತಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಈ ಪರಿಸರದ ನೆಮ್ಮದಿಗೆ ಭಂಗವಾಗುತ್ತಿದೆ. ಅಲ್ಲದೆ ಇಲ್ಲಿಂದ ಕುಡಿಯುವ ನೀರು ಪೂರೈಸುವ ಪಂಜ ಗ್ರಾ.ಪಂ.ಗೆ ತಲೆ ನೋವಾಗಿದೆ. ತ್ಯಾಜ್ಯ ಎಸೆಯದಂತೆ ಎಷ್ಟೇ ತಿಳಿಹೇಳಿದರೂ ಪ್ರಯೋಜನವಾಗಿಲ್ಲ. ಈ ಸ್ಥಳದಲ್ಲಿ ಕಾಗದಪತ್ರಗಳು, ಮದುವೆ ಆಮಂತ್ರಣ ಇತ್ಯಾದಿಗಳನ್ನು ಎಸೆದಿರುವುದು ಕಂಡುಬಂದಿದ್ದು, ಈ ಆಧಾರದಲ್ಲಿ ತನಿಖೆ ಮಾಡಿ, ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಬಹುದು ಎನ್ನುವುದು ಗ್ರಾಮಸ್ಥರ ಮಾತು.

ಕೂಟೇಲು ಸಾರು ಪರಿಸರದಲ್ಲಿ ತ್ಯಾಜ್ಯ ಎಸೆಯುವ ವಿಚಾರ ಗ್ರಾ.ಪಂ. ಗಮನದಲ್ಲೂ ಇದೆ. ಪಂಚಾಯತ್‌ ಕಡೆಯಿಂದ ಅನೇಕ ಸಲ ಎಚ್ಚರಿಕೆ ನೀಡಲಾಗಿದೆ. ದೂರು ಬಂದಾಗಲೆಲ್ಲ ಗ್ರಾ.ಪಂ. ವತಿಯಿಂದ ಸ್ವತ್ಛತೆ ಕೈಗೊಳ್ಳಲಾಗುತ್ತಿದೆ. ಆದರೆ ಶಾಶ್ವತ ಪರಿಹಾರ ಕಾಣುತ್ತಿಲ್ಲ. ತ್ಯಾಜ್ಯ ಎಸೆಯುವ ಸ್ಥಳದಲ್ಲಿ ಸಿ.ಸಿ. ಕೆಮರಾ ಅಳವಡಿಸಿದರೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಅನುಕೂಲವಾದೀತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸ್ವಚ್ಛತೆಗೆ ಸವಾಲು
ಸ್ವಚ್ಛತೆಗೆ ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು ಮೊದಲಿನಿಂದಲೂ ಆದ್ಯತೆ ನೀಡುತ್ತಿದ್ದಾರೆ. ಅನೇಕ ಬಾರಿ ಈ ಜಾಗದಲ್ಲಿ ಕಿಡಿಗೇಡಿಗಳು ತ್ಯಾಜ್ಯ ಎಸೆದಿರುವ ಮಾಹಿತಿ ಸಿಕ್ಕಿದೊಡನೆಯೇ ಸ್ವತ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಕಿಡಿಗೇಡಿಗಳು ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿರುವುದು ಸವಾಲಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು ತಿಳಿಸಿದ್ದಾರೆ.

ಸಿಸಿ ಕೆಮರಾ ಅಳವಡಿಸಿ
ಹೊಳೆಗೆ ತ್ಯಾಜ್ಯ ಎಸೆದು ಮಲಿನಗೊಳಿಸುತ್ತಿರುವ ಕುರಿತು ಅನೇಕ ಬಾರಿ ಇಲ್ಲಿನ ಸ್ಥಳೀಯಾಡಳಿದ ಗಮನಕ್ಕೆ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತ್ಯಾಜ್ಯಗಳನ್ನು ತೆರವುಗೊಳಿಸಿ ಶುಚಿಗೊಳಿಸಿದ್ದಾರೆ. ಇದು ತಾತ್ಕಾಲಿಕ ಪರಿಹಾರವಾಗಿದೆ. ಇದರ ಬದಲು ತ್ಯಾಜ್ಯ ಬಿಸಾಕುವ ಕಿಡಿಗೇಡಿಗಳ ಪತ್ತೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕಿದೆ. ಸಿ.ಸಿ. ಕೆಮರಾ ಅಳವಡಿಸಿದರೆ ಸೂಕ್ತ.
– ದಾಮೋದರ ನೇರಳ , ಸ್ಥಳೀಯರು

ಕರೆದು ಎಚ್ಚರಿಕೆ ನೀಡಿದ್ದೇವೆ
ತ್ಯಾಜ್ಯ ಬಿಸಾಕಿದ ಸ್ಥಳದಲ್ಲಿ ಕೆಲವು ಕಾಗದ ಪತ್ರಗಳಿರುವ ದಾಖಲೆಗಳು ನಮಗೆ ದೊರಕಿದ್ದವು. ಅವುಗಳ ಆಧಾರದಲ್ಲಿ ತನಿಖೆ ನಡೆಸಿ, ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ನಾಮಫ‌ಲಕ ತೂಗು ಹಾಕುತ್ತೇವೆ. ಮತ್ತೆಯೂ ಮುಂದುವರಿದಲ್ಲಿ ಪರ್ಯಾಯ ಮಾರ್ಗ ಅನುಸರಿಸಿ ಪತ್ತೆ ಹಚ್ಚುತ್ತೇವೆ. ಸದ್ಯಕ್ಕೆ ತ್ಯಾಜ್ಯವಿದ್ದ ಜಾಗವನ್ನು ಶುಚಿಗೊಳಿಸಿದ್ದೇವೆ.
– ಪುರುಷೋತ್ತಮ ಮಣಿಯಾನಮನೆ , ಪಿಡಿಒ, ಪಂಜ ಗ್ರಾ.ಪಂ.

ದಯಾನಂದ ಕಲ್ನಾರ್‌

ಟಾಪ್ ನ್ಯೂಸ್

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Kabaka: ಮನೆಯಿಂದ ಮಾದಕ ವಸ್ತು ವಶ?

Kabaka: ಮನೆಯಿಂದ ಮಾದಕ ವಸ್ತು ವಶ?

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Dharmasthala: ಡಾ| ಹೆಗ್ಗಡೆಯನ್ನು ಭೇಟಿಯಾದ ಯುನಿಸೆಫ್‌ ತಂಡ

Dharmasthala: ಡಾ| ಹೆಗ್ಗಡೆಯನ್ನು ಭೇಟಿಯಾದ ಯುನಿಸೆಫ್‌ ತಂಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.