![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 18, 2022, 1:40 AM IST
ಬಂಟ್ವಾಳ: ಫರಂಗಿ ಪೇಟೆ ಭಾಗದಿಂದ ತ್ಯಾಜ್ಯ ಸಂಗ್ರಹದ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯೋರ್ವ ಅಮ್ಟಾಡಿ ಗ್ರಾಮದ ಕುರಿಯಾಳಪಡುನಲ್ಲು ಕಸ ತಂದು ಡಂಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಿಂದ ಕಸ ವನ್ನು ತೆಗೆಸುವ ಜತೆಗೆ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.
ಕುರಿಯಾಳಪಡುನಲ್ಲಿ ಗುರುವಾರ ರಾತ್ರಿ ಯಾರೋ ವಾಹನದಲ್ಲಿ ಕಸ ತಂದು ಹಾಕಿರುವ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾ. ಪಂ. ಪಿಡಿಒ ರವಿ ಅವರು ಆರೋಪಿಯ ಕುರಿತು ಯಾವುದಾದರೂ ಸುಳಿವು ಸಿಗುತ್ತದೆಯೇ ಎಂದು ತನಿಖೆ ನಡೆಸಲು ಮುಂದಾದರು.
ಆ ವೇಳೆ ಗ್ರಾ.ಪಂ.ನ ಬಿಲ್ ಕಲೆಕ್ಟರ್ ಚೇತನ್‌ಗೆ ಕಸದ ರಾಶಿಯಲ್ಲಿ ಫರಂಗಿಪೇಟೆ ಬಾರೊಂದರ ಬಿಲ್ ಸಿಕ್ಕಿತು. ಅದರ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿದಾಗ ಅದು ಪುದು ಗ್ರಾ.ಪಂ. ವ್ಯಾಪ್ರಿಯ ತ್ಯಾಜ್ಯ ಎಂಬ ವಿಚಾರ ಖಚಿತವಾಯಿತು. ಮುಂದೆ ಗ್ರಾ.ಪಂ.ನಲ್ಲಿ ವಿಚಾರಿಸಿ ಅದು ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯ ಕೃತ್ಯ ಎಂದು ಖಚಿತವಾಯಿತು.
ಕಸದ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಿ ಆತನಿಂದಲೇ ಕಸ ತೆಗೆಸಿ 5 ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ. ಅಮ್ಟಾಡಿ ಗ್ರಾ.ಪಂ.ನ ಈ ಕಾರ್ಯಾಚರಣೆಯಲ್ಲಿ ಪಿಡಿಒ ಅವರ ಜತೆಗೆ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಗೂ ಸಿಬಂದಿ ಪಾಲ್ಗೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.