ಬಸ್ ಇಳಿಯುವಾಗ ಎಚ್ಚರಿಕೆ ಅಗತ್ಯ; ಇಲ್ಲದಿದ್ದರೆ ಬೀಳುವುದು ಗ್ಯಾರಂಟಿ!
ಬಿ.ಸಿ.ರೋಡ್ ಬಸ್ ನಿಲ್ದಾಣ
Team Udayavani, Nov 23, 2021, 5:33 AM IST
ಬಂಟ್ವಾಳ: ನೀವು ಮಂಗ ಳೂರು ಭಾಗದಿಂದ ಆಗಮಿಸಿ ಬಿ.ಸಿ.ರೋಡ್ ನಿಲ್ದಾಣದಲ್ಲಿ ಬಸ್ ಇಳಿಯುವುದಾದರೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವುದು ಗ್ಯಾರಂಟಿ. ಹೆದ್ದಾರಿ ಬದಿ ಇಳಿಜಾರಿನಿಂದ ಕೂಡಿರುವುದೇ ಇದಕ್ಕೆ ಕಾರಣವಾಗಿದ್ದು, ಇದು ಅಧಿಕಾರಿ ವರ್ಗದಿಂದ ಸೃಷ್ಟಿಯಾದ ಅವ್ಯವಸ್ಥೆಯಲ್ಲದೆ ಬೇರೇನೂ ಅಲ್ಲ.
ಇಲ್ಲಿನ ನಿಲ್ದಾಣದಲ್ಲಿ ಹೆದ್ದಾರಿ ಬದಿ ಸಂಪೂರ್ಣ ಇಳಿಜಾರಿನಿಂದ ಕೂಡಿದ್ದು, ಬಸ್‌ನಿಂದ ಇಳಿಯುವ ಮೊದಲು ಅವರು ತಿಳಿದಿರುವುದಿಲ್ಲ. ಕಾಲು ಕೆಳಗೆ ಇಟ್ಟ ಬಳಿಕವೇ ಅದು ಅನುಭವಕ್ಕೆ ಬರುವುದರಿಂದ ಇಲ್ಲಿ ನಿತ್ಯವೂ ಬೀಳುವವರ ಸಂಖ್ಯೆಯೇ ಹೆಚ್ಚು. ಆದರೆ ನಿತ್ಯ ಪ್ರಯಾಣಿಸುವವರು ಮಾತ್ರ ಎಚ್ಚರಿಕೆಯಿಂದ ಇಳಿಯುವ ಕಾರಣದಿಂದ ಅವರು ಬೀಳುವುದರಿಂದ ಬಚಾವಾಗುತ್ತಾರೆ.
ಬಿ.ಸಿ.ರೋಡ್‌ನ ಬಸ್ ನಿಲ್ದಾಣದ ಅವ್ಯವಸ್ಥೆ ಇಂದು ನಿನ್ನೆಯದ್ದಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಕೇಳುವವರೇ ಇಲ್ಲ. ಪ್ರಸ್ತುತ ಹೆದ್ದಾರಿ ಬದಿ ಪೈಬರ್ ಕೋನ್ ಅಳವಡಿಸಿ ಬಸ್‌ಗಳು ಬದಿಗೆ ಸರಿದು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹೀಗಾಗಿಯೇ ಕೆಳಗೆ ಬೀಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅಂದರೆ ಬಸ್‌ಗಳು ಬದಿಗೆ ಬಂದು ನಿಲ್ಲುವುದರಿಂದ ಹೀಗಾಗುತ್ತದೆ. ಬದಿಗೆ ಬಂದು ನಿಲ್ಲದೇ ಇದ್ದರೆ ಹೆದ್ದಾರಿ ಬ್ಲಾಕ್ ಆಗುವ ಸಮಸ್ಯೆಯೂ ಇದೆ.
ಅಲ್ಲಿನ ವರ್ತಕರ ಬಳಿ ಕೇಳಿದರೆ ನಿತ್ಯವೂ ಬೀಳುವವರ ಸಂಖ್ಯೆಯನ್ನು ಪಕ್ಕಾ ನೀಡು ತ್ತಾರೆ. ನ. 17ರಂದು ಓರ್ವ ಮಹಿಳೆ ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ರೊಬ್ಬರು ಮಾಹಿತಿ ನೀಡಿದ್ದಾರೆ. ಹೀಗೆ ಬೀಳುವವರ ಸಂಖ್ಯೆ ನಿತ್ಯವೂ ಇರುತ್ತದೆ ಎಂಬುದು ಅವರು ನೀಡಿರುವ ಮಾಹಿತಿ.
ಯಾರ ಬಳಿಯೂ ಹೇಳುವಂತಿಲ್ಲ
ಈ ಸಮಸ್ಯೆಯನ್ನು ಯಾರ ಬಳಿಯೂ ಹೇಳುವಂತಿಲ್ಲ. ಹೇಳುವುದಾದರೆ ಬಸ್ಸಿನ ನಿರ್ವಾಹಕರ ಬಳಿ ಹೇಳುಬೇಕಷ್ಟೇ. ಪಾಪ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ.? ಉಳಿದಂತೆ ಸಂಬಂಧಪಟ್ಟ ಸ್ಥಳೀಯಾಡಳಿತ, ಜನ ಪ್ರತಿನಿಧಿಗಳು, ಅಧಿಕಾರಿ ವರ್ಗ ಈ ಕುರಿತು ಗಮನ ಹರಿಸುವುದೇ ಇಲ್ಲ.
ಅಂದರೆ ಅವರು ನಿಲ್ದಾಣಕ್ಕೆ ಬರುವುದೇ ಇಲ್ಲವಾದ್ದರಿಂದ ಜನರ ಸಮಸ್ಯೆ ಅರ್ಥವಾಗುವುದು ಕಷ್ಟ ಸಾಧ್ಯ.ಹೀಗಾಗಿ ಇನ್ನಾದರೂ ಈ ಗಂಭೀರ ಸಮಸ್ಯೆಯನ್ನು ಸಂಬಂಧಪಟ್ಟವರು ಅರಿತುಕೊಂಡು ಪ್ರಯಾಣಿಕರ ತೊಂದರೆಗೆ ಮುಕ್ತಿ ನೀಡುವ ಕಾರ್ಯವನ್ನು ಮಾಡಬೇಕು. ಈ ಭಾಗದಲ್ಲಿ ಹೆದ್ದಾರಿ ಇಳಿಜಾರನ್ನು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ತಾಲೂಕು ಕೇಂದ್ರದ ಪ್ರಮುಖ ಬಸ್ ನಿಲ್ದಾಣ ಇದಾಗಿರುವುದರಿಂದ ಹೆಚ್ಚಿನ ಮುತುವರ್ಜಿ ಅಗತ್ಯವಾಗಿದೆ.
ಬಸ್ಸನ್ನೇರುವುದಕ್ಕೂ ತೊಂದರೆ
ಇಲ್ಲಿ ಬಸ್‌ನಿಂದ ಇಳಿಯುವ ಪ್ರಯಾಣಿಕರಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ಬದಲಾಗಿ ಬಿ.ಸಿ.ರೋಡ್‌ನಿಂದ ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ, ಸುಬ್ರಹ್ಮಣ್ಯ ಮೊದಲಾದೆಡೆಗೆ ತೆರಳುವುದಕ್ಕೆ ಬಸ್ಸನ್ನೇರುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಅಂದರೆ ಪ್ರಯಾಣಿಕರು ನಿಂತಿರುವ ಭಾಗ ಇಳಿಜಾರಿನಿಂದ ಕೂಡಿರುವುದರಿಂದ ಬಸ್ಸಿನ ಮೆಟ್ಟಿಲುಗಳು ಬಹಳಷ್ಟು ಎತ್ತರದಲ್ಲಿರುವ ಕಾರಣ ತೊಂದರೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.