ಬಿ.ಸಿ.ರೋಡ್- ಜಕ್ರಿಬೆಟ್ಟು ಹೆದ್ದಾರಿ: ಇಂಟರ್ಲಾಕ್ ಅಳವಡಿಕೆ
Team Udayavani, Nov 13, 2021, 3:10 AM IST
ಬಂಟ್ವಾಳ: ಬಿ.ಸಿ.ರೋಡ್- ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಕಾಮಗಾರಿಯು ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಪ್ರಸ್ತುತ ಹೆದ್ದಾರಿ ಬದಿಗೆ ಇಂಟರ್ಲಾಕ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ. ಎಂಆರ್ಪಿಎಲ್ ಪೈಪುಲೈನ್ ಸ್ಥಳಾಂತರದ ಹಿನ್ನೆಲೆಯಲ್ಲಿ ಮೂರು ಕಡೆಯ ಕಾಂಕ್ರೀಟ್ ಕಾಮಗಾರಿ ಹೊರತುಪಡಿಸಿದರೆ ಉಳಿದಂತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ.
ಬಿ.ಸಿ.ರೋಡ್- ಪುಂಜಾಲಕಟ್ಟೆ ಮಧ್ಯೆ 19.85 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು 2018ರಲ್ಲಿ ಪ್ರಾರಂಭಗೊಂಡಿದ್ದು, ಅದರಲ್ಲಿ ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಮಂಜೂ ರಾಗಿತ್ತು. ಪ್ರಸ್ತುತ ಹೆದ್ದಾ ರಿಯ ಎಲ್ಲ ಹಂತದ ಕಾಮಗಾರಿ ಪೂರ್ಣ ಗೊಂಡು ಗಾಣದಪಡು³ ಬಳಿ ಕಾಂಕ್ರೀಟ್ ರಸ್ತೆ, ಚರಂಡಿಯ ಮಧ್ಯ ಭಾಗಕ್ಕೆ ಇಂಟರ್ಲಾಕ್ ಅಳವಡಿಕೆ ಆರಂಭ ಗೊಂಡಿದೆ.
ಬೀದಿದೀಪ ಅಳವಡಿಕೆ:
ಹೆದ್ದಾರಿಯ ಮಧ್ಯೆ ಅತ್ಯಾಧುನಿಕ ಶೈಲಿಯ ಬೀದಿದೀಪಗಳನ್ನು ಅಳವ ಡಿಸಲಾಗಿದ್ದು, ಎರಡೂ ಬದಿಗೂ ಕಾಣುವ ರೀತಿಯ ಎಲ್ಇಡಿ ಬಲ್ಬ್ ಗಳನ್ನು ಹೊಂದಿರುವ ಲೈಟ್ಗಳನ್ನು ಅಳವಡಿ ಸಲಾಗಿದೆ. ಅದರ ಪೂರ್ಣ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಲೈಟ್ಗಳು ಇನ್ನೂ ಉರಿಯ ಲಾರಂ ಭಿಸಿಲ್ಲ.
ಚತುಷ್ಪಥ ಕಾಂಕ್ರೀಟ್ ಕಾಮಗಾರಿಗಾಗಿ ಹೆದ್ದಾರಿಯು ವಿಸ್ತಾರಗೊಂಡ ಹಿನ್ನೆಲೆ ಯಲ್ಲಿ ಸರಪಾಡಿಯ ನೇತ್ರಾವತಿ ನದಿ ಯಿಂದ ಎಂಆರ್ಪಿಎಲ್ಗೆ ನೀರು ಪೂರೈಕೆ ಮಾಡುವ ಪೈಪುಲೈನ್ ಸ್ಥಳಾಂತರ ಮಾಡಬೇಕಿತ್ತು. ಪ್ರಸ್ತುತ ಅದರ ಕಾಮಗಾರಿಯ ಹಿನ್ನೆಲೆಯಲ್ಲಿ ಗಾಣದ ಪಡು³ ಕಾಮಗಾರಿ ಕ್ರಾಸ್ ಬಳಿ, ಭಂಡಾರಿ ಬೆಟ್ಟು ನೆರೆ ವಿಮೋಚನ ರಸ್ತೆ ಕ್ರಾಸ್ ಬಳಿ ಹಾಗೂ ಜಕ್ರಿಬೆಟ್ಟುನಲ್ಲಿ ಹೀಗೆ 3 ಕಡೆ ಒಂದು ಬದಿಯ ಹೆದ್ದಾರಿಗೆ ಕಾಂಕ್ರೀಟ್ ಅಳವಡಿಸುವುದಕ್ಕೆ ಬಾಕಿ ಇದೆ.
ಉಳಿದಂತೆ ಬಂಟ್ವಾಳ ಬೈಪಾಸ್ ಭಾಗ ದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಡಿವೈಡರ್ ನಿರ್ಮಾಣ ಬಾಕಿ ಇದೆ. ಬಿ.ಸಿ.ರೋಡ್ನಿಂದ ಬೈಪಾಸ್ವರೆಗೆ ಡಿವೈಡರ್ ಮಧ್ಯೆ ತಡೆಬೇಲಿಯ ಅಳ ವಡಿಕೆ ಪೂರ್ಣಗೊಂಡಿದೆ. ಹೊಸ ದಾಗಿ ಕಾಂಕ್ರೀಟ್ ಹಾಕಿರುವ ಹಾಗೂ ಇನ್ನು ಹಾಕಲು ಬಾಕಿ ಇರುವ ಪ್ರದೇಶ ದಲ್ಲಿ ಚರಂಡಿ ಕಾಮಗಾರಿ ನಡೆಯ ಬೇಕಿದೆ. ಭಂಡಾರಿಬೆಟ್ಟು ಬಳಿ ನೆರೆ ವಿಮೋಚನ ರಸ್ತೆಯನ್ನು ಹೆದ್ದಾರಿಗೆ ಸಂಪರ್ಕಿಸುವ ಕಾಮಗಾರಿ ಆರಂಭಗೊಳ್ಳಬೇಕಿದೆ. ಗಾಣದಪಡು³ ಬಳಿ ಕಾಂಕ್ರೀಟ್ ಹೆದ್ದಾರಿಯ ಪ್ರಾರಂಭದಲ್ಲಿ ಬಾಕಿ ಇರುವ ಕಾಮಗಾರಿ ಆರಂಭಗೊಂಡಿದೆ. ಅದರ ಮುಂದಿನ ಕಾಮಗಾರಿಯನ್ನು ರಾ.ಹೆ. ಪ್ರಾಧಿಕಾರ ನಿರ್ವಹಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.