![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 11, 2024, 9:45 PM IST
ಬಂಟ್ವಾಳ: ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ದಾಸಕೋಡಿ ನಿವಾಸಿ ಲೂಯಿಸ್ ಡಿ’ಸೋಜಾ (64) ಮೃತಪಟ್ಟವರು.
ಅವರು ಕಾಲು ನೋವಿನಿಂದ ಬಳಲುತ್ತಿದ್ದು, ವೈದ್ಯರ ಬಳಿಗೆ ಆಗಮಿಸಿದ್ದರು. ಔಷಧ ಪಡೆದು ಮನೆಗೆ ತೆರಳುವುದಕ್ಕಾಗಿ ಬಸ್ಸಿಗೆ ಕಾಯುತ್ತಿದ್ದ ಸಂದರ್ಭ ಏಕಾಏಕಿ ಕುಸಿದು ಬಿದ್ದರು. ಸಾರ್ವಜನಿಕರು ಅವರನ್ನು ಉಪಚರಿಸಿದ್ದು, ಬಳಿಕ ಸ್ಥಳೀಯ ರಿಕ್ಷಾ ಚಾಲಕರು ಆ್ಯಂಬುಲೆನ್ಸ್ ತರಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಬಳಿಕ ಅವರ ಕೈಯಲ್ಲಿದ್ದ ಮೊಬೈಲ್‌ನಿಂದ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆ ಹುಡುಕಿ ಅವರು ಮೃತಪಟ್ಟಿರುವ ವಿಚಾರ ತಿಳಿಸಲಾಯಿತು.
You seem to have an Ad Blocker on.
To continue reading, please turn it off or whitelist Udayavani.