ಬಿ.ಸಿ.ರೋಡು: ತಾಲೂಕು ಆಡಳಿತ ಸೌಧದ ಪಕ್ಕದ ನಿವೇಶನ
ಸೌಂದರ್ಯಕ್ಕೆ ಅಡ್ಡಿ: ಶುಚಿಗೊಳಿಸುವಿಕೆ ಅಗತ್ಯ
Team Udayavani, Oct 9, 2022, 8:51 AM IST
ಬಂಟ್ವಾಳ: ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡ್‌ನ ಹೃದಯ ಭಾಗದಲ್ಲಿ ತಾಲೂಕು ಆಡಳಿತ ಸೌಧದ ಪಕ್ಕದಲ್ಲೇ ಕಂದಾಯ ಇಲಾಖೆಗೆ ಸೇರಿದ ಜಾಗವೊಂದಿದ್ದು, ಪ್ರಸ್ತುತ ಅಲ್ಲಿರುವ ಹಳೆಯ ಶೆಡ್ ಹಾಗೂ ಸಂಪೂರ್ಣ ಪೊದೆ ತುಂಬಿರುವ ಪರಿಸರ ನಗರ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದ್ದು, ಅದರ ಶುಚಿಗೊಳಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಬೇಕಿದೆ.
ಕಳೆದ ಸುಮಾರು ಆರೇಳು ವರ್ಷಗಳ ಹಿಂದೆ ಬಂಟ್ವಾಳದ ಹಳೆಯ ತಾ| ಕಚೇರಿ ಯನ್ನು ಕೆಡವಿ ತಾಲೂಕು ಆಡಳಿತ ಸೌಧ(ಮಿನಿ ವಿಧಾನಸೌಧ) ನಿರ್ಮಿಸಲಾಗಿದ್ದು, ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಕಾರ್ಯಾಚರಣೆಗೆ ಕಂದಾಯ ಇಲಾಖೆಗೆ ಸೇರಿದ ಪಕ್ಕದ ನಿವೇಶನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. ಬಳಿಕ ತಾಲೂಕು ಕಚೇರಿ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಶೆಡ್‌ಗೆ ಬಾಗಿಲು ಹಾಕಲಾಗಿದೆ.
ಪ್ರಸ್ತುತ ತಾತ್ಕಾಲಿಕ ಶೆಡ್ ಹಾಗೇ ಪಾಳು ಬಿದ್ದಿದ್ದು, ಅದರ ಸುತ್ತಲೂ ಕಾಡು ಬೆಳೆದಿದೆ. ಈ ಪ್ರದೇಶವು ನಗರದ ಹೃದಯ ಭಾಗದಲ್ಲೇ ಇರು ವುದರಿಂದ ಇಲ್ಲಿನ ಸೌಂದರ್ಯಕ್ಕೆ ಅಡ್ಡಿ ಯಾಗುತ್ತಿದೆ. ಅಲ್ಲೇ ಪಕ್ಕದಲ್ಲಿ ಹಳೆಯ ನೋಂದಣಿ ಕಚೇರಿ ಕೂಡ ಇದ್ದು, ಅದು ಕೂಡ ಪಾಳು ಬಿದ್ದ ಸ್ಥಿತಿಯಲ್ಲಿದೆ.
ಪ್ರಸ್ತುತ ಅಲ್ಲಿರುವ ಶೆಡ್ ಉತ್ತಮ ಸ್ಥಿತಿ ಯಲ್ಲಿರುವುದರಿಂದ ಯಾವುದಾ ದರೂ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳ ಬಹುದು. ಇಲ್ಲದೇ ಇದ್ದರೆ ಅದನ್ನು ಪೂರ್ಣ ತೆರವು ಮಾಡಿ ಜಾಗವನ್ನು ಶುಚಿಗೊಳಿಸಬಹುದು. ಪ್ರಸ್ತುತ ಅಲ್ಲಿರುವ ಮರಗಳನ್ನು ಉಳಿಸಿ ಕೊಂಡು ತ್ಯಾಜ್ಯ, ಪೊದೆಗಳನ್ನು ತೆರವು ಮಾಡಿದರೂ, ಪರಿಸರ ಸ್ವತ್ಛವಾಗುವ ಜತೆಗೆ ಸೌಂದರ್ಯ ಬಂದಂತಾಗುತ್ತದೆ.
ಪಾರ್ಕಿಂಗ್‌ಗೂ ಬಳಸಬಹುದು
ಕಂದಾಯ ಇಲಾಖೆಯ ಈ ಪ್ರದೇಶ ವನ್ನು ಸುಮ್ಮನೇ ಪಾಳು ಬಿಡುವುದಕ್ಕಿಂತ ಶೆಡ್ ತೆರವು ಮಾಡಿ ಸಂಪೂರ್ಣ ಶುಚಿಗೊಳಿಸಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಬಹುದು. ಆ ಪ್ರದೇಶವನ್ನೂ ಆಡಳಿತ ಸೌಧದ ಆವರಣಕ್ಕೆ ಸೇರಿಸಿ ಕಚೇರಿ ಕೆಲಸಕ್ಕೆ ಆಗಮಿಸುವ ಮಂದಿಯ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬಹುದು.
ಇಲ್ಲದೇ ಇದ್ದರೆ ಅದಕ್ಕೆ ಪ್ರತ್ಯೇಕ ಆವರಣ ಗೋಡೆ ನಿರ್ಮಿಸಿ ಬಿ.ಸಿ.ರೋಡ್ ಗೆ ಬರುವ ಮಂದಿಗೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಹುದು. ಮುಂದೆ ಅಗತ್ಯ ಬಿದ್ದಾಗ ಕಂದಾಯ ಇಲಾಖೆಯ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ರೀತಿ ಮಾಡಿದಾಗ ಬಿ.ಸಿ.ರೋಡ್‌ನ ಪಾರ್ಕಿಂಗ್ ಒತ್ತಡ ಕಡಿಮೆಯಾಗುವ ಜತೆಗೆ ನಗರ ಸೌಂದರ್ಯಕ್ಕೂ ಹೊಸರೂಪ ಬರಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡಿಸಿ ಪರಿಶೀಲನೆ
ಕೆಲವು ತಿಂಗಳ ಹಿಂದೆ ದ.ಕ.ಡಿಸಿ ತಾ| ಕಚೇರಿಗೆ ಅಹವಾಲು ಸ್ವೀಕಾರಕ್ಕೆ ಬಂದ ಸಂದರ್ಭದಲ್ಲಿ ಈ ಕುರಿತು ಅವರ ಬಳಿ ಪ್ರಸ್ತಾವಿಸಲಾಗಿದ್ದು, ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಯಾವ ರೀತಿ ಮಾಡಬಹುದು ಎಂಬುದನ್ನು ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದ್ದರು. ಕೆಲವು ದಿನಗಳ ಹಿಂದೆ 2ನೇ ಬಾರಿ ಜಿಲ್ಲಾಧಿಕಾರಿಗಳು ಅಹವಾಲು ಸ್ವೀಕಾರಕ್ಕೆ ಬಂದಾಗ ಮತ್ತೆ ಅದೇ ವಿಚಾರವನ್ನು ಗಮನಕ್ಕೆ ತರಲಾಗಿದ್ದು, ಕ್ರಮದ ಭರವಸೆಯನ್ನೂ ನೀಡಿದ್ದಾರೆ. ಆದರೆ ಈ ವರೆಗೆ ಪ್ರಗತಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.