Fraud Case ಡ್ರಮ್ ಪೂರೈಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
Team Udayavani, Jun 2, 2024, 12:23 AM IST
ಪುತ್ತೂರು: ನೀರು ತುಂಬಿಸುವ ಡ್ರಮ್‌ಗಳನ್ನು ಸರಬರಾಜು ಮಾಡುವುದಾಗಿ ನಂಬಿಸಿ ಕೃಷಿ ಉತ್ಪನ್ನ ಮಾರಾಟ ಸಂಸ್ಥೆಗೆ ಅಪರಿಚಿತರು ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಅಗ್ರೋ ಉತ್ಪನ್ನಗಳನ್ನು ಮಾರಾಟ ಮಾಡುವ ಗಣೇಶ್ ಭಟ್ ವಂಚನೆಗೊಳಗಾದವರು.
ಗಣೇಶ್ ಭಟ್ ಅವರನ್ನು Unity Poly Barrels PVT Ltd Ashoka Nagar Shivaji Nagar Pune Maharsasthra ಎಂಬ ಹೆಸರಿನಿಂದ ಸಂಪರ್ಕಿಸಿದ ಅಪರಿಚಿತರು ಆನ್ ಲೈನ್ ಮೂಲಕ ಡ್ರಮ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದರು. ಇದನ್ನು ನಂಬಿದ ಗಣೇಶ್ ಭಟ್ ಅವರು ಮೇ 8ರಿಂದ ಮೇ 10ರ ಒಳಗಡೆ 1,30,500 ರೂ. ಅನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಅಪರಿಚಿತರ ಖಾತೆಗೆ ಕಳುಹಿಸಿದ್ದಾರೆ. ಹಣ ಪಾವತಿಸಿ 20 ದಿನ ಕಳೆದರೂ ಡ್ರಮ್ ಸರಬರಾಜು ಮಾಡಿಲ್ಲ ಎಂದು ಗಣೇಶ್ ಭಟ್ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.